2020 US election results; ಮ್ಯಾಜಿಕ್​ ನಂಬರಿನತ್ತ ಜೋ ಬಿಡೆನ್ ದಾಪುಗಾಲು!

| Updated By: ಸಾಧು ಶ್ರೀನಾಥ್​

Updated on: Nov 04, 2020 | 1:27 PM

1.25 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 236, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ 12.45 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 225, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ 12.10 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 224, ಟ್ರಂಪ್‌ಗೆ 213 ಎಲೆಕ್ಟೋರಲ್ ಮತ ಗಳಿಕೆ USA  ಅಧ್ಯಕ್ಷೀಯ ಚುನಾವಣೆ ಫಲಿತಾಂಶ ರೋಚಕ ಘಟ್ಟ ಪ್ರವೇಶಿಸಿದೆ. […]

2020 US election results; ಮ್ಯಾಜಿಕ್​ ನಂಬರಿನತ್ತ ಜೋ ಬಿಡೆನ್ ದಾಪುಗಾಲು!
Follow us on

1.25 PM (ಭಾರತೀಯ ಕಾಲಮಾನ) 2020 US election results Updates:
ಬೈಡನ್‌ಗೆ 236, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ

12.45 PM (ಭಾರತೀಯ ಕಾಲಮಾನ) 2020 US election results Updates:
ಬೈಡನ್‌ಗೆ 225, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ

12.10 PM (ಭಾರತೀಯ ಕಾಲಮಾನ) 2020 US election results Updates:
ಬೈಡನ್‌ಗೆ 224, ಟ್ರಂಪ್‌ಗೆ 213 ಎಲೆಕ್ಟೋರಲ್ ಮತ ಗಳಿಕೆ

USA  ಅಧ್ಯಕ್ಷೀಯ ಚುನಾವಣೆ ಫಲಿತಾಂಶ ರೋಚಕ ಘಟ್ಟ ಪ್ರವೇಶಿಸಿದೆ. ಇಲ್ಲಿಂದ ಮುಂದಕ್ಕೆ ಟ್ರಂಪ್ ಮತ್ತು ಬಿಡೆನ್ ಇಬ್ಬರಿಗೂ ಹಾದಿ ಕಷ್ಟಕಷ್ಟವೆನಿಸಲಿದೆ. ಇದುವರೆಗೂ ಆ ರಾಜ್ಯದಲ್ಲಿ ನಾ ಮುಂದಾಗುವೆ; ಈ ರಾಜ್ಯದಲ್ಲಿ ನಿನ್ನದೆ ಲೀಡ್​ ಇರಬಹುದು ಎಂಬ ಲೆಕ್ಕಾಚಾರದಲ್ಲಿದ್ದರು  ಇಬ್ಬರೂ. ಆದರೆ ಇಲ್ಲಿಂದ ಮುಂದಕ್ಕೆ ನಿರ್ಣಾಯಕ 270 ಸೀಟ್​ಗೆ ಬರುವವರೆಗೂ ಇಬ್ಬರಿಗೂ ಒಂದೊಂದು ಸೀಟೂ ಮಹತ್ವದ್ದೆನಿಸಲಿದೆ. ಕಾದು ನೋಡಬೇಕು.. ಇಲ್ಲಿಂದ ಯಾರು ಹೆಚ್ಚು ಹೆಚ್ಚು ಮತ ಗಳಿಸುತ್ತಾ ಮುಂದುವರಿಯುತ್ತಾರೆ ಎಂಬುದು..

11:41 AM (ಭಾರತೀಯ ಕಾಲಮಾನ) 2020 US election results Updates:
ಬೈಡನ್‌ಗೆ 223, ಟ್ರಂಪ್‌ಗೆ 212 ಎಲೆಕ್ಟೋರಲ್ ಮತ ಗಳಿಕೆ

ನಿರ್ಣಾಯಕವೆನಿಸುವ ಜಾರ್ಜಿಯಾ  ಮತ್ತು ಫ್ಲೋರಿಡಾ ರಾಜ್ಯಗಳಲ್ಲಿ ಡೊನಾಲ್ಡ್​ ಟ್ರಂಪ್​ ಅವರು ಬಿಡನ್​ಗಿಂತ ಭಾರೀ ಹೆಚ್ಚಿನ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಸದ್ಯಕ್ಕೆ ಒಟ್ಟಾರೆಯಾಗಿ ಟ್ರಂಪ್​ ಭಾರೀ ಮುನ್ನಡೆ ಸಾಧಿಸಿದ್ದಾರೆ. 


11:11 AM (ಭಾರತೀಯ ಕಾಲಮಾನ) 2020 US election results Updates:
ಬೈಡನ್‌ಗೆ 223, ಟ್ರಂಪ್‌ಗೆ 174 ಎಲೆಕ್ಟೋರಲ್ ಮತ ಗಳಿಕೆ

10:30 AM (ಭಾರತೀಯ ಕಾಲಮಾನ) 2020 US election results Updates
ಬೈಡನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ 


9 AM (ಭಾರತೀಯ ಕಾಲಮಾನ): ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ (USA) ನಡೆದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ‌ ಪ್ರಕ್ರಿಯೆ ಮುಂದುವರೆದಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್​ಗೆ 223 ಮತ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ 145 ಮತಗಳು ಸಿಕ್ಕಿದ್ದು ಜೋ ಬಿಡೆನ್‌ ಮುಂಚೂಣಿಯಲ್ಲಿದ್ದಾರೆ. ಟ್ರಂಪ್ ಬಹು ಹಿಂದೆ ಉಳಿದಿದ್ದಾರೆ.

USA ದ ಅಧ್ಯಕ್ಷರಾಗಲು 538 ಎಲೆಕ್ಟೋರ್ ಗಳ ಪೈಕಿ 270 ಎಲೆಕ್ಟೋರ್​ಗಳ ಬೆಂಬಲ ಬೇಕು. USA ದಲ್ಲಿ ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯುತ್ತಾರೆ. ಸದ್ಯ ಈಗ ಜೋ ಬಿಡೆನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ ಸಿಕ್ಕಿದೆ. USAದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದಾರೆ.

Published On - 8:26 am, Wed, 4 November 20