ಬ್ರೆಜಿಲ್​ನಲ್ಲೂ ಡೆಡ್ಲಿ ಕೊರೊನಾ ರಣಕೇಕೆ, 22 ಸಾವಿರ ಮಂದಿ ಬಲಿ

ಚೀನಾ, ಇಟಲಿ, ಅಮೆರಿಕದ ನಂತ್ರ ಇದೀಗ ಬ್ರೆಜಿಲ್​ನಲ್ಲಿ ಡೆಡ್ಲಿ ಕೊರೊನಾ ಕೇಕೆ ಹಾಕುತ್ತಿದೆ. ಬ್ರೆಜಿಲ್​ನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಕೂಡ ಸುಮಾರು 1 ಸಾವಿರ ಜನರು ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೂ ಬ್ರೆಜಿಲ್​ನಲ್ಲಿ 22 ಸಾವಿರ ಜನ ಮೃತಪಟ್ಟಿದ್ದಾರೆ. ‘ದೊಡ್ಡಣ್ಣ’ನಿಗೆ ಸೋಂಕು ಕಂಟಕ: ಇನ್ನು ಅಮೆರಿಕದಲ್ಲೂ ಇದೇ ಸ್ಥಿತಿ ಇದೆ. ಈಗ ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪಿದ್ದು, ಸೋಂಕಿತರ ಸಂಖ್ಯೆ 17 […]

ಬ್ರೆಜಿಲ್​ನಲ್ಲೂ ಡೆಡ್ಲಿ ಕೊರೊನಾ ರಣಕೇಕೆ, 22 ಸಾವಿರ ಮಂದಿ ಬಲಿ
ಆಯೇಷಾ ಬಾನು

Updated on: May 24, 2020 | 11:27 AM

ಚೀನಾ, ಇಟಲಿ, ಅಮೆರಿಕದ ನಂತ್ರ ಇದೀಗ ಬ್ರೆಜಿಲ್​ನಲ್ಲಿ ಡೆಡ್ಲಿ ಕೊರೊನಾ ಕೇಕೆ ಹಾಕುತ್ತಿದೆ. ಬ್ರೆಜಿಲ್​ನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಕೂಡ ಸುಮಾರು 1 ಸಾವಿರ ಜನರು ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೂ ಬ್ರೆಜಿಲ್​ನಲ್ಲಿ 22 ಸಾವಿರ ಜನ ಮೃತಪಟ್ಟಿದ್ದಾರೆ.

‘ದೊಡ್ಡಣ್ಣ’ನಿಗೆ ಸೋಂಕು ಕಂಟಕ:
ಇನ್ನು ಅಮೆರಿಕದಲ್ಲೂ ಇದೇ ಸ್ಥಿತಿ ಇದೆ. ಈಗ ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪಿದ್ದು, ಸೋಂಕಿತರ ಸಂಖ್ಯೆ 17 ಲಕ್ಷದತ್ತ ಸಮೀಪಿಸುತ್ತಿದೆ. ಇದು ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುವಂತೆ ಮಾಡಿದೆ.

ನಿಲ್ಲದ ಹೋರಾಟ, ತೀವ್ರ ಹಿಂಸಾಚಾರ:
ಚಿಲಿಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಕೈಗೊಂಡಿರುವ ನಿರ್ಧಾರಗಳ ವಿರುದ್ಧ ಆಕ್ರೋಶ ಮೊಳಗಿದ್ದು, ಭಾರಿ ಪ್ರಮಾಣದ ಪ್ರತಿಭಟನೆಗಳು ನಡೀತಿವೆ. ಪ್ರತಿಭಟನಾಕಾರರು ಹಾಗೂ ಸರ್ಕಾರಿ ಪಡೆಗಳ ನಡುವೆ ನಡೆಯುತ್ತಿರುವ ಕಾಳಗ ಹಿಂಸಾಚಾರಕ್ಕೆ ಕಾರಣವಾಗಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us