ಮಂಡ್ಯದ ಡಾ.ವಿವೇಕ್‌ ಮೂರ್ತಿ ಮತ್ತೊಮ್ಮೆ ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಕ

ಕರ್ನಾಟಕದ ಡಾ. ವಿವೇಕ್‌ ಮೂರ್ತಿಗೆ ಮತ್ತೊಮ್ಮೆ ಅಮೆರಿಕದ ಸರ್ಜನ್ ಜನರಲ್ ಹುದ್ದೆ ಲಭಿಸಿದೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಮಂಡ್ಯದ ಡಾ.ವಿವೇಕ್‌ ಮೂರ್ತಿ ಮತ್ತೊಮ್ಮೆ ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಕ
ಡಾ. ವಿವೇಕ್‌ ಮೂರ್ತಿ ಮತ್ತು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್
ಆಯೇಷಾ ಬಾನು

Updated on: Dec 08, 2020 | 1:17 PM

ವಾಷಿಂಗ್ಟನ್: ಕರ್ನಾಟಕದ ಡಾ. ವಿವೇಕ್‌ ಮೂರ್ತಿಗೆ ಮತ್ತೊಮ್ಮೆ ಅಮೆರಿಕದ ಸರ್ಜನ್ ಜನರಲ್ ಹುದ್ದೆ ಲಭಿಸಿದೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಈ ಹಿಂದೆ ಬರಾಕ್ ಒಬಾಮ ಆಳ್ವಿಕೆಯಲ್ಲಿ ವಿವೇಕ್‌ ಮೂರ್ತಿ ಅಮೆರಿಕದ ಸರ್ಜನ್ ಜನರಲ್ ಆಗಿದ್ದರು. ಸದ್ಯ ಈಗ ಮತ್ತೊಮ್ಮೆ ಅದೇ ಪ್ರತಿಷ್ಠಿತ ಹುದ್ದೆಗೆ ನೇಮಕವಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಬಂದಾಗ ವಿವೇಕ್‌ ಮೂರ್ತಿ ಸರ್ಜನ್ ಜನರಲ್ ಸ್ಥಾನ ತ್ಯಜಿಸಿದ್ದರು.

ಜೋ ಬೈಡನ್ ಅವರು ರಚಿಸಿರುವ ಕೊರೊನಾ ಟಾಸ್ಕ್​ ಫೋರ್ಸ್​ನಲ್ಲಿ ವಿವೇಕ್ ಮೂರ್ತಿ ಕೂಡ ಒಬ್ಬರಾಗಿದ್ದಾರೆ. ಹಾಗೂ ಕ್ಸೇವಿಯರ್ ಬೆಕೆರಾ ಅಮೆರಿಕದ ಹೆಲ್ತ್ ಸೆಕ್ರೆಟರಿ ಆಗಿ ನೇಮಕಗೊಂಡಿದ್ದಾರೆ. ವಿವೇಕ್‌ ಮೂರ್ತಿ ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಗ್ರಾಮದವರು.

ಅಮೆರಿಕದಲ್ಲೂ ಹುಟ್ಟೂರಿನ ಬೇರುಗಳು! ಹಿತ್ತಲಿನಲ್ಲಿ ಹಲಸಿನ ಜೊತೆ ಡಾ. ವಿವೇಕ್..

ಡಾ. ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ; US ಕೊವಿಡ್ ನಿಯಂತ್ರಣ ಕಾರ್ಯಪಡೆಗೆ ನಿಯೋಜನೆ!

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us