ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದಿದ್ದ ಚೆಸ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಪ್ರತಿಸ್ಪರ್ಧಿ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ದ ವಿರೋಚಿತ ಸೋಲು ಕಂಡರೂ ಕೂಡಾ ಕೋಟ್ಯಾಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ ಪ್ರಗ್ನಾನಂದ ಪ್ರತಿಭೆಗೆ ಉದ್ಯಮಿಯಾಗಿರುವ ಆನಂದ್ ಮಹೀಂದ್ರಾ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಗ್ನಾನಂದ ಸಾಧನೆಗೆ ಕಾರಣರಾದ ಪೋಷಕರಿಗೆ ವಿಶೇಷ ಉಡುಗೊರೆ ಪ್ರಕಟಿಸಿದ್ದಾರೆ.
ಆರ್ ಪ್ರಗ್ನಾನಂದ ಪೋಷಕರಿಗೆ ಆನಂದ್ ಮಹೀಂದ್ರಾ ಅವರು ಹೊಸ ಎಕ್ಸ್ ಯುವಿ400 ಎಲೆಕ್ಟ್ರಿಕ್ ಎಸ್ ಯುವಿ ಕಾರು ಮಾದರಿಯನ್ನು ಉಡುಗೊರೆ ಪ್ರಕಟಿಸಿದ್ದು, ಪ್ರಗ್ನಾನಂದ ಅವರ ತಾಯಿ ನಾಗಲಕ್ಷ್ಮಿ ಹಾಗೂ ತಂದೆ ರಮೇಶ್ ಬಾಬು ತಮ್ಮ ಮಗನ ಆಸಕ್ತಿಯನ್ನು ಪ್ರೋತ್ಸಾಹ ನೀಡಿದ್ದಕ್ಕಾಗಿ ನಿಜವಾಗಿಯೂ ಅವರಿಗೆ ಕೃತಜ್ಞತೆಗೆ ಸಲ್ಲಿಸಬೇಕಾಗಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆನಂದ್ ಮಹೀಂದ್ರಾ ಅವರು ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು, ಅಭಿಮಾನಗಳ ಆಗ್ರಹದ ಮೇರೆಗೆ ಆರ್ ಪ್ರಗ್ನಾನಂದ ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಟ್ವಿಟರ್ ನಲ್ಲಿ ಅಭಿಮಾನಿಗಳ ಆಗ್ರಹಕ್ಕೆ ಪ್ರತಿಕ್ರಿಯೆಸಿರುವ ಆನಂದ್ ಮಹೀಂದ್ರಾ ಅವರು ನೀವೆಲ್ಲರೂ ಪ್ರಗ್ನಾನಂದಗೆ ಥಾರ್ ಕಾರನ್ನು ಉಡುಗೊರೆಯಾಗಿ ನೀಡುವಂತೆ ಹೇಳಿದ್ದಿರಿ, ಆದರೆ ನನ್ನಲ್ಲಿ ಮತ್ತೊಂದು ಆಲೋಚನೆ ಬಂದಿದೆ. ಚೆಸ್ ನತ್ತ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಿದ ಅವರ ಪೋಷಕರನ್ನು ನಾನು ಬೆಂಬಲಿಸಲು ಬಯಸಿದ್ದು, ಕ್ರೀಡಾ ಮನೋಭಾವನೆಯನ್ನು ಬೆಳೆಸುವಲ್ಲಿ ಶ್ರಮಿಸಿರುವ ಪೋಷಕರನ್ನು ಬೆಂಬಲಿಸಲು ನಾನು ಎಕ್ಸ್ ಯುವಿ400 ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದಿದ್ದಾರೆ.
Appreciate your sentiment, Krishlay, & many, like you, have been urging me to gift a Thar to @rpragchess
But I have another idea …
I would like to encourage parents to introduce their children to Chess & support them as they pursue this cerebral game (despite the surge in… https://t.co/oYeDeRNhyh pic.twitter.com/IlFIcqJIjm— anand mahindra (@anandmahindra) August 28, 2023
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟೊಯೊಟಾ ರೂಮಿಯಾನ್ ಬಿಡುಗಡೆ
ಉಡುಗೊರೆಯಾಗಿ ಸಿಕ್ತು ಎಕ್ಸ್ ಯುವಿ400 ಇವಿ
ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿ ಮೆಚ್ಚುಗೆಯ ಮಾತುಗಳನ್ನಾಡುವ ಆನಂದ್ ಮಹೀಂದ್ರಾ ಅವರು ಪ್ರತಿ ಬಾರಿಯೂ ಒಂದಿಲ್ಲಾ ಒಂದು ವಿಶೇಷ ಉಡುಗೊರೆಯನ್ನು ಪ್ರಕಟಿಸುತ್ತಿರುತ್ತಾರೆ. ಈ ಹಿಂದೆಯೂ ಹಲವಾರು ಕ್ರೀಡಾಪಟುಗಳಿಗೆ ಕಾರುಗಳನ್ನು ವಿಶೇಷ ಉಡುಗೊರೆಯಾಗಿ ಪ್ರಕಟಿಸಿದ್ದು, ಇದೀಗ ಆರ್ ಪ್ರಗ್ನಾನಂದ ಪೋಷಕರಿಗೆ ಎಕ್ಸ್ ಯುವಿ400 ಇವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಭಾರತದ ಸದ್ಯ ಅತ್ಯುತ್ತಮ ಇವಿ ಕಾರು ಪಟ್ಟಿಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಎಕ್ಸ್ ಯುವಿ400 ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ.15.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.19.39 ಲಕ್ಷ ಬೆಲೆ ಹೊಂದಿದೆ. ಈ ಹೊಸ ಇವಿ ಕಾರು ಗ್ರಾಹಕರ ಬೇಡಿಕೆ ಆಧರಿಸಿ ಇಸಿ ಮತ್ತು ಇಎಲ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ರೀತಿಯ ಬ್ಯಾಟರಿ ಆಯ್ಕೆ ಹೊಂದಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ನಾಲ್ಕು ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್
ಹೊಸ ಎಕ್ಸ್ ಯುವಿ400 ಕಾರಿನಲ್ಲಿ 34.5kWh ಮತ್ತು 39.4kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡಲಾಗಿದ್ದು, ಇದರಲ್ಲಿ 34.5kWh ಬ್ಯಾಟರಿ ಪ್ಯಾಕ್ ಹೊಂದಿರುವ ವೆರಿಯೆಂಟ್ ಪ್ರತಿ ಚಾರ್ಜ್ ಗೆ 375 ಕಿ.ಮೀ ಮೈಲೇಜ್ ನೀಡಲಿದ್ದರೆ 39.4kWh ಬ್ಯಾಟರಿ ಪ್ಯಾಕ್ ಹೊಂದಿರುವ ವೆರಿಯೆಂಟ್ ಪ್ರತಿ ಚಾರ್ಜ್ ಗೆ 456 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಹೊಸ ಕಾರಿನಲ್ಲಿ ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್ ಎಂಬ ಮೂರು ಡ್ರೈವಿಂಗ್ ಮೋಡ್ ನೀಡಲಾಗಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಗಳು ಈ ಕಾರಿನಲ್ಲಿವೆ.
ಆಕರ್ಷಕ ಬೆಲೆ, ಅತ್ಯುತ್ತಮ ಡ್ರೈವಿಂಗ್ ಟೆಕ್ನಾಲಜಿ ಜೊತೆಗೆ ಎಕ್ಸ್ ಯುವಿ400 ಕಾರಿನಲ್ಲಿ ಭರ್ಜರಿ ಸೇಫ್ಟಿ ಫೀಚರ್ಸ್ ನೀಡಲಾಗಿದ್ದು, 6 ಏರ್ ಬ್ಯಾಗ್, ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಹಿಲ್ ಹೋಲ್ಡ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.
Published On - 6:36 pm, Tue, 29 August 23