ಭಾರತದಲ್ಲಿ ಹೊಸ ದ್ವಿಚಕ್ರ ವಾಹನಗಳನ್ನು ಮಾರಾಟವನ್ನು ವಿಸ್ತರಿಸುತ್ತಿರುವ ಬಿಎಂಡಬ್ಲ್ಯು ಮೋಟೊರಾಡ್(BMW Motorrad) ಕಂಪನಿಯು ಹೊಸ ಯೋಜನೆ ಅಡಿಯಲ್ಲಿ ತನ್ನ ಬಹುನೀರಿಕ್ಷಿತ ಸಿಇ 04(CE 04) ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಮಾದರಿಯನ್ನು ಸಹ ಬಿಡುಗಡೆ ಮಾಡುತ್ತಿದ್ದು, ಬಿಡುಗಡೆಗೂ ಮುನ್ನ ಹೊಸ ಇವಿ ಸ್ಕೂಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ.
ಭಾರತದಲ್ಲಿ ಇತ್ತೀಚೆಗೆ ಟಿವಿಎಸ್ ಮೋಟಾರ್ ಜೊತೆಗಿನ ಸಹಭಾಗಿತ್ವ ಯೋಜನೆಯಡಿ ಜಿ 310 ಆರ್‌ಆರ್ ಬೈಕ್ ಬಿಡುಗಡೆ ಮಾಡಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಇನ್ನು ಹಲವು ಹೊಸ ಮಾದರಿಗಳನ್ನು ನಿರ್ಮಿಸುತ್ತಿದ್ದು, ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ತನ್ನ ಬಹುನೀರಿಕ್ಷಿತ ಸಿಇ 04 ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಸುಳಿವು ನೀಡಿದೆ.
ವಿಭಿನ್ನವಾದ ವಿನ್ಯಾಸ, ಅತಿ ಉದ್ದದ ವ್ಹೀಲ್‌ಬೆಸ್, ಕಡಿಮೆ ಗ್ರೌಂಡ್ ಕ್ಲಿಯೆರೆನ್ಸ್ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿರುವ ಸಿಇ 04 ಇವಿ ಸ್ಕೂಟರ್ ಮಾದರಿಯು ಮ್ಯಾಕ್ಸಿ ಸ್ಕೂಟರ್ ವಿಭಾಗದಲ್ಲಿ ಮಾರಾಟಗೊಳ್ಳುತ್ತಿದ್ದು, ಹೊಸ ಸ್ಕೂಟರ್ ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಭಾರತದಲ್ಲಿ ಈಗಾಗಲೇ ರೂ. 12 ಲಕ್ಷ ಬೆಲೆ ಅಂತರದಲ್ಲಿ ಸಿ400 ಜಿಟಿ ಸ್ಕೂಟರ್ ಮಾರಾಟ ಮಾಡುತ್ತಿರುವ ಬಿಎಂಡಬ್ಲ್ಯು ಕಂಪನಿಯು ಹೊಸ ಸಿಇ 04 ಇವಿ ಸ್ಕೂಟರ್ ಮಾದರಿಯಿಂದಲೂ ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಟ್ಯೂಬಲರ್ ಸ್ಟೀಲ್ ಫ್ರೇಮ್ ಅನ್ನು ಆಧರಿಸಿದೆ. ಹಾಗೆಯೇ ಹೊಸ ಸ್ಕೂಟರಿನಲ್ಲಿ 10.25 ಇಂಚಿನ ಟಿಎಫ್ ಟಿ ಡಿಸ್ ಪ್ಲೇ, ಸ್ಮಾರ್ಟ್ ಕನೆಕ್ಟಿವಿಟಿ, ಮೂರು ರೈಡಿಂಗ್ ಮೋಡ್, ಡ್ಯುಯಲ್ ಚಾನಲ್ ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಜೋಡಣೆ ಮಾಡಲಾಗಿದೆ.
ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಿಎಂಡಬ್ಲ್ಯು ಕಂಪನಿಯು ಪರ್ಮೆನೆಂಟ್ ಮ್ಯಾಗ್ನೆಟ್ ಮೋಟಾರ್ ಜೊತೆ 8.9 kWh ಬ್ಯಾಟರಿ ಪ್ಯಾಕ್ ಜೋಡಿಸಿದ್ದು, ಬ್ಯಾಟರಿ ಮತ್ತು ಹಿಂದಿನ ಚಕ್ರದ ನಡುವೆ ಸ್ಟೀಲ್ ಫ್ರೇಮ್ ನಲ್ಲಿ ಜೋಡಿಸಲಾಗಿದೆ. ಈ ಮೂಲಕ ಇದು 42 ಹಾರ್ಸ್ ಪವರ್ ಅನ್ನು ಉತ್ಪಾದಿಸಲಿದ್ದು, ಪ್ರತಿ ಚಾರ್ಜ್ ಗೆ ಗರಿಷ್ಠ 130 ಕಿ.ಮೀ ಮೈಲೇಜ್ ನೀಡಲಿದೆ.
ಹೊಸ ಇವಿ ಸ್ಕೂಟರ್ ಬೆಲ್ಟ್-ಡ್ರೈವ್ ಸಿಸ್ಟಂ ಜೊತೆಗೆ ಸಿಂಗಲ್ ಡಿಸ್ಕ್ ಸೆಟಪ್ ಹೊಂದಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಪಿನ್-ಆಫ್-ಸೆಟ್ ಮೊನೊ-ಶಾಕ್ ಅನ್ನು ಸಿಂಗಲ್-ಸೈಡೆಡ್ ಸ್ವಿಂಗಾರ್ಮ್‌ನಲ್ಲಿ ಅಳವಡಿಸಲಾಗಿದೆ.
ಈ ಮೂಲಕ ಇದು ಎಕ್ಸ್ ಶೋರೂಂ ಪ್ರಕಾರ ರೂ. 15 ಲಕ್ಷದಿಂದ ರೂ. 18 ಲಕ್ಷ ಬೆಲೆ ಹೊಂದಬಹುದಾಗಿದ್ದು, ಅತ್ಯುತ್ತಮ ರೈಡಿಂಗ್ ಅನುಭವ ನೀಡಲಿದೆ.
Published On - 6:42 pm, Thu, 29 December 22