ಹೋಂಡಾ ಸಿಟಿ ಮತ್ತು ಅಮೇಜ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್

|

Updated on: Nov 25, 2023 | 8:43 PM

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಸಿಟಿ ಮತ್ತು ಅಮೇಜ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ಹೊಸ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಗಳು ಲಭ್ಯವಿವೆ.

ಹೋಂಡಾ ಸಿಟಿ ಮತ್ತು ಅಮೇಜ್ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್
ಹೋಂಡಾ ಸಿಟಿ ಮತ್ತು ಅಮೇಜ್
Follow us on

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಕಾರ್ಸ್ ಇಂಡಿಯಾ (Honda Cars India) ಕಂಪನಿಯು ತನ್ನ ಜನಪ್ರಿಯ ಕಾರುಗಳಾದ ಸಿಟಿ ಸೆಡಾನ್ ಮತ್ತು ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಹೊಸ ಕಾರುಗಳ ಖರೀದಿ ಮೇಲೆ ಗ್ರಾಹಕರು ವಿವಿಧ ವೆರಿಯೆಂಟ್ ಗಳನ್ನು ಆಧರಿಸಿ ರೂ. 67 ಸಾವಿರದಿಂದ ರೂ. 88,600 ತನಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ ಚೆಂಜ್ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್ ಗಳು ಅಮೇಜ್ ಮತ್ತು ಸಿಟಿ ಕಾರುಗಳನ್ನು ಹೊರತುಪಡಿಸಿ ಸಿಟಿ ಸೆಡಾನ್ ಕಾರಿನ ಹೈಬ್ರಿಡ್ ಆವೃತ್ತಿ ಮತ್ತು ಹೊಸದಾಗಿ ಬಿಡುಗಡೆಯಾಗಿರುವ ಎಲಿವೇಟ್ ಕಾರಿನ ಮೇಲೆ ಯಾವುದೇ ಆಫರ್ ನೀಡಲಾಗುತ್ತಿಲ್ಲ.

ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಹೋಂಡಾ ಕಂಪನಿಯು ಸಿಟಿ ಸೆಡಾನ್ ಕಾರಿನ ಖರೀದಿಯ ಮೇಲೆ ರೂ. 88,600 ಮೌಲ್ಯದ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 26,947 ಮೌಲ್ಯದ ಆಕ್ಸೆಸರಿಸ್ ಆಫರ್ ನೀಡಲಾಗುತ್ತಿದೆ. ಇನ್ನುಳಿದಂತೆ ಹೊಸ ಕಾರು ಖರೀದಿಯ ಮೇಲೆ ರೂ. 15 ಸಾವಿರ ಮೌಲ್ಯದ ಲೊಯಾಲಿಟಿ ಬೋನಸ್, ರೂ. 4 ಸಾವಿರ ಮೌಲ್ಯದ ಲೊಯಾಲಿಟಿ ಬೋನಸ್, ರೂ.6 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ಮತ್ತು ರೂ. 25 ಸಾವಿರ ಮೌಲ್ಯದ ಸ್ಪೆಷಲ್ ಕಾರ್ಪೊರೇಟ್ ಡಿಸ್ಕೌಂಟ್ ಅನ್ವಯಿಸಲಿದ್ದು, ಇದು 1.5 ಲೀಟರ್ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ.

ವಿವಿಧ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುವ ಸಿಟಿ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11.63 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದು ಎಡಿಎಎಸ್ ಸೌಲಭ್ಯ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳನ್ನು ಹೊಂದಿದೆ.

ಇನ್ನು ವಿಶೇಷ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೆ ಹೋಂಡಾ ಕಾರ್ಸ್ ಕಂಪನಿಯೂ ರೂ. 6 ಸಾವಿರ ಮೌಲ್ಯದ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಗ್ರಾಹಕರು ರೂ. 25 ಸಾವಿರ ಮೌಲ್ಯದ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 15 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ನೀಡುತ್ತಿದ್ದು, ಇನ್ನುಳಿದಂತೆ ಲೊಯಾಲಿಟಿ ಆಫರ್ ಮತ್ತು ಆಕ್ಸೆಸರಿಸ್ ಆಫರ್ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..

ಅಮೇಜ್ ಕಾರು ಮಾದರಿಯು ಭರ್ಜರಿ ಮೈಲೇಜ್ ನೊಂದಿಗೆ ಬಹುಬೇಡಿಕೆಯ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಇದು ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 7.10 ಲಕ್ಷ ಆರಂಭಿಕ ಬೆಲೆ ಹೊಂದಿದೆ.

Published On - 8:29 pm, Sat, 25 November 23