ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಪರಿಸರ ಸ್ನೇಹಿಯಾಗಿರುವ ಸಿಎನ್ ಜಿ ವಾಹನಗಳ ಮಾರಾಟವು ದೇಶಾದ್ಯಂತ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಹಲವು ಹೊಸ ಕಾರು ಮಾದರಿಗಳಲ್ಲಿ ಸಿಎನ್ ಜಿ ಆವೃತ್ತಿಯ ಬಿಡುಗಡೆ ಕೂಡಾ ಜೋರಾಗುತ್ತಿದೆ. ಹಾಗಾದ್ರೆ ಸಿಎನ್ ಜಿ ಕಾರುಗಳು ಪೆಟ್ರೋಲ್ ಮಾದರಿಗಳಿಂತಲೂ ಹೇಗೆ ಭಿನ್ನವಾಗಿವೆ? ಮತ್ತು ಸಿಎನ್ ಜಿ ಕಾರುಗಳು ಪೆಟ್ರೋಲ್ ಕಾರುಗಳಿಂತಲೂ ನಿರ್ವಹಣಾ ವೆಚ್ಚದಲ್ಲಿ ಮಾಲೀಕರಿಗೆ ಹೇಗೆ ಸಹಕಾರಿಯಾಗಿವೆ ಎನ್ನುವುದನ್ನು ಇಲ್ಲಿ ತಿಳಿಯೋಣ.

ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
Follow us
Praveen Sannamani
|

Updated on: Nov 23, 2023 | 8:05 PM

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಇಂಧನಗಳ ದರ ಮತ್ತು ದುಬಾರಿ ನಿರ್ವಹಣೆ ಪರಿಣಾಮ ಹೊಸ ಕಾರುಗಳ(New Cars) ಖರೀದಿದಾರರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ಮತ್ತು ಸಿಎನ್ ಜಿ ಕಾರುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಪರಿಸರ ಸ್ನೇಹಿ ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳಿಗೆ ಉತ್ತಮ ಬೇಡಿಕೆಯಿದ್ದರೂ ಬೆಲೆ ತುಸು ದುಬಾರಿಯಾಗಿರುವುದರಿಂದ ಹಲವು ಗ್ರಾಹಕರು ಕೈಗೆಟುಕುವ ಬೆಲೆಯಲ್ಲಿ ಸಿಗುವ ಸಿಎನ್ ಜಿ ಮಾದರಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸಿಎನ್ ಜಿ ಕಾರುಗಳು ಸದ್ಯ ಎಂಟ್ರಿ ಲೆವಲ್ ಕಾರುಗಳಲ್ಲಿ ಮಾತ್ರವಲ್ಲದೆ ಮಧ್ಯಮ ಗಾತ್ರದ ಎಸ್ ಯುವಿ ಮತ್ತು ಎಂಪಿವಿ ಕಾರುಗಳಲ್ಲೂ ಮಾರಾಟಗೊಳ್ಳುತ್ತಿದ್ದು, ಇವುಗಳು ನಿರ್ವಹಣಾ ವೆಚ್ಚದಲ್ಲಿ ಪೆಟ್ರೋಲ್ ಮಾದರಿಗಿಂತಲೂ ಉತ್ತಮವಾಗಿದ್ದರೂ ಕೆಲವು ವಿಚಾರಗಳ ಬಗೆಗೆ ಸಂಭಾವ್ಯ ಗ್ರಾಹಕರು ತಪ್ಪದೇ ತಿಳಿದುಕೊಳ್ಳುವ ಅವಶ್ಯಕವಾಗಿದೆ.

ಕಾರುಗಳ ಬೆಲೆ ಮತ್ತು ನಿರ್ವಹಣೆ

ಸಿಎನ್ ಜಿ ಕಾರು ಮಾದರಿಗಳು ಪೆಟ್ರೋಲ್ ಕಾರುಗಳಿಂತಲೂ ತುಸು ದುಬಾರಿ ಬೆಲೆ ಹೊಂದಿದ್ದರೂ ರನ್ನಿಂಗ್ ಕಾಸ್ಟ್ ವಿಚಾರದಲ್ಲಿ ಇವು ಗ್ರಾಹಕರ ಗಮನಸೆಳೆಯುತ್ತಿವೆ. ಆದರೆ ಸಿಎನ್ ಜಿ ಕಾರುಗಳ ನಿರ್ವಹಣೆಯು ಪೆಟ್ರೋಲ್ ಕಾರುಗಳಿಂತಲೂ ತುಸು ದುಬಾರಿಯಾಗಿರುತ್ತದೆ. ರನ್ನಿಂಗ್ ಕಾಸ್ಟ್ ಕಡಿಮೆ ಇದ್ದರೂ ಮೂಲ ಬೆಲೆ ಮತ್ತು ವಾರ್ಷಿಕ ನಿರ್ವಹಣಾ ವೆಚ್ಚಗಳು ದುಬಾರಿಯಾಗಿರುತ್ತವೆ ಎನ್ನುವದನ್ನು ಮರೆಯುವಂತಿಲ್ಲ.

ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!

ಮೈಲೇಜ್ ಮತ್ತು ಪರ್ಫಾಮೆನ್ಸ್

ಸಿಎನ್ ಜಿ ಕಾರುಗಳು ಪೆಟ್ರೋಲ್ ಕಾರುಗಳಿಂತಲೂ ಸಾಕಷ್ಟು ಇಂಧನ ದಕ್ಷತೆ ಹೊಂದಿದ್ದರೂ ಪರ್ಫಾಮೆನ್ಸ್ ನಲ್ಲಿ ಹಿನ್ನಡೆ ಅನುಭವಿಸುತ್ತವೆ. ಆದರೆ ನಗರಪ್ರದೇಶಗಳಲ್ಲಿ ಸಂಚಾರಕ್ಕೆ ಸಿಎನ್ ಜಿ ಮಾದರಿಗಳು ಉತ್ತಮ ಆಯ್ಕೆ ಎನ್ನಬಹುದಾಗಿದ್ದು, ದೂರದ ಪ್ರಯಾಣಗಳಲ್ಲಿ ಪೆಟ್ರೋಲ್ ಕಾರುಗಳು ಉತ್ತಮ ಆಯ್ಕೆ ಎನ್ನಬಹುದು. ಜೊತೆಗೆ ಸಿಎನ್ ಜಿ ಕಾರುಗಳ ಸದ್ಯ ಮ್ಯಾನುವಲ್ ಆಯ್ಕೆ ಮಾತ್ರ ಲಭ್ಯವಿದ್ದು, ಸಿಎನ್ ಜಿ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಗಳನ್ನು ಪರಿಚಯಿಸಲಾಗಿಲ್ಲ. ಆದರೆ ಸಂಪೂರ್ಣ ಪೆಟ್ರೋಲ್ ಚಾಲಿತ ಕಾರುಗಳಲ್ಲಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಆಯ್ಕೆ ಮಾಡಬಹುದು.

ಇಂಧನ ಲಭ್ಯತೆ ಮತ್ತು ಪರಿಸರ ಕಾಳಜಿ

ಪೆಟ್ರೋಲ್ ಕಾರುಗಳು ಯಾವುದೇ ಪ್ರದೇಶಕ್ಕೂ ಪ್ರಯಾಣ ಬೆಳೆಸಿದರೂ ಸಹ ಇಂಧನ ಲಭ್ಯತೆ ಸುಲಭವಾಗಿ ಲಭ್ಯವಿರುತ್ತದೆ. ಆದರೆ ಸಿಎನ್ ಜಿ ಕಾರುಗಳು ಪೆಟ್ರೋಲ್ ಸಂಯೋಜನೆ ಹೊಂದಿದ್ದರೂ ಸಿಎನ್ ಜಿ ಲಭ್ಯತೆ ಎಲ್ಲಾ ಕಡೆಗೂ ಲಭ್ಯವಿಲ್ಲದಿರುವುದು ದೂರದ ಪ್ರಯಾಣಗಳಲ್ಲಿ ಇದು ಹಿನ್ನಡೆ ಉಂಟುಮಾಡಬಹುದು. ಆದರೂ ಇತ್ತೀಚೆಗೆ ಸಿಎನ್ ಜಿ ಲಭ್ಯತೆಯು ನಿಧಾನವಾಗಿ ಹೆಚ್ಚುತ್ತಿದ್ದು, ಇದು ಪೆಟ್ರೋಲ್ ಮಾದರಿಗಿಂತಲೂ ಅತಿ ಕಡಿಮೆ ಮಾಲಿನ್ಯ ಹೊರಸೂಸುವ ಮೂಲಕ ಪರಿಸರ ಸ್ನೇಹಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ದುಬಾರಿ ಬೆಲೆಯ ಡೀಸೆಲ್ ಕಾರುಗಳಿಗೆ ಹೋಲಿಕೆ ಮಾಡಿದರೆ ಪೆಟ್ರೋಲ್ ಸಿಎನ್ ಜಿ ಕಾರುಗಳು ವಿವಿಧ ಕಾರಣಗಳಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟದ ವೈಶಿಷ್ಟ್ಯತೆಗಳೊಂದಿಗೆ ಖರೀದಿಗೆ ಲಭ್ಯವಾಗುವ ಸಿದ್ದತೆಯಲ್ಲಿವೆ. ಹೀಗಾಗಿ ಗ್ರಾಹಕರು ಪೂರ್ಣ ಪೆಟ್ರೋಲ್ ಅಥವಾ ಪೆಟ್ರೋಲ್ ಸಿಎನ್ ಜಿ ಕಾರುಗಳನ್ನು ಆಯ್ಕೆ ಮಾಡುವಾಗ ಮೇಲೆ ಹೇಳಿರುವ ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಆಯ್ಕೆ ಮಾಡುವುದು ಉತ್ತಮ ಎನ್ನಬಹುದು.

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ