ಹೊಸ ವರ್ಷಕ್ಕೆ ಮತ್ತೆರಡು ವಿನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಶೀಘ್ರದಲ್ಲಿಯೇ ಎರಡು ಹೊಸ ಇವಿ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಹೊಸ ವರ್ಷಕ್ಕೆ ಮತ್ತೆರಡು ವಿನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಎಥರ್ ಎನರ್ಜಿ
ವಿನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಎಥರ್ ಎನರ್ಜಿ
Follow us
Praveen Sannamani
|

Updated on:Nov 22, 2023 | 9:48 PM

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಎಥರ್ ಎನರ್ಜಿ (Ather Energy) ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಶೀಘ್ರದಲ್ಲಿಯೇ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಇವಿ ಸ್ಕೂಟರ್ ಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಕಡಿಮೆ ಬೆಲೆಗೆ ಬಿಡುಗಡೆಯಾಗಲಿವೆ.

ಎಥರ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಈ ಬಾರಿ ಪ್ರಾಯೋಗಿಕ ಅಂಶಗಳೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿರುವ ಸಿಇಓ ತರುಣ್ ಮೆಹ್ತಾ ಅವರು ವಿವಿಧ ಪೆಟ್ರೋಲ್ ಸ್ಕೂಟರ್ ಮಾದರಿಗಳಿಗೂ ಉತ್ತಮ ಪೈಪೋಟಿ ನೀಡುವ ಸುಳಿವು ನೀಡಿದ್ದಾರೆ. ಎಥರ್ ಹೊಸ ಇವಿ ಸ್ಕೂಟರ್ ಗಳಲ್ಲಿ ಈ ಬಾರಿ ಪ್ರಾಯೋಗಿಕವಾಗಿರುವ ಫುಟ್ ಬೋರ್ಡ್, ಅಂಡರ್ ಸೀಟ್ ಸ್ಟೋರೇಜ್ ಮತ್ತು ಹಿಂಬದಿಯ ಸವಾರರಿಗೆ ಧೀರ್ಘಕಾಲಿಕ ಪ್ರಯಾಣಕ್ಕೆ ಅನುಕೂಲಕವಾಗುವಂತಹ ವಿಸ್ತರಿತ ಆಸನ ಸೌಲಭ್ಯವನ್ನು ನೀಡಲಾಗುತ್ತಿದೆ.

Ather Energy (1)

ಹೊಸ ಶ್ರೇಣಿಯ ಇವಿ ಸ್ಕೂಟರ್ ಗಳನ್ನು ಎಥರ್ ಕಂಪನಿಯು ಪರ್ಫಾಮೆನ್ಸ್ ಆವೃತ್ತಿಗಳ ಬದಲಾಗಿ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಮಾದರಿಗಳಾಗಿ ಬಿಡುಗಡೆ ಮಾಡುತ್ತಿದ್ದು, ಇವು ಪ್ರಸ್ತುತ ಮಾರುಕಟ್ಟೆಯಲ್ಲಿನ 450 ಶ್ರೇಣಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಅಗತ್ಯವಾಗಿರುವ ಕೆಲವೇ ಫೀಚರ್ಸ್ ಗಳನ್ನು ಪಡೆದುಕೊಂಡಿರಲಿವೆ. ಹೀಗಾಗಿ ಹೊಸ ಇವಿ ಸ್ಕೂಟರ್ ಗಳು ಟಿವಿಎಸ್ ಐಕ್ಯೂಬ್ ಮಾದರಿಗೆ ಉತ್ತಮ ಪೈಪೋಟಿಯಾಗಲಿದ್ದು, ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!

ಇನ್ನು ಎಥರ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ 450ಎಸ್ ಮಾದರಿಯ ನವೀಕೃತ ಮಾದರಿಯನ್ನು ಸಹ ಅಭಿವೃದ್ದಿಪಡಿಸುತ್ತಿದ್ದು, ಇದು ಹೆಚ್ಚಿನ ಮೈಲೇಜ್ ಜೊತೆಗೆ ಹಲವಾರು ಹೊಸ ಫೀಚರ್ಸ್ ಪಡೆದುಕೊಳ್ಳುತ್ತಿದೆ. ಇದು ತುಸು ದುಬಾರಿ ಬೆಲೆಯಲ್ಲಿ ಬಿಡುಗಡೆಯಾಗಲಿದ್ದು, 450ಎಸ್ ಹೈ ರೇಂಜ್ ವರ್ಷನ್ ಗೆ ಸಂಬಂಧಿಸಿದ ಹಲವು ತಾಂತ್ರಿಕ ಅಂಶಗಳು ಈಗಾಗಲೇ ಮಾಹಿತಿ ಸೋರಿಕೆಯಾಗಿವೆ.

450ಎಸ್ ಹೈ ರೇಂಜ್ ವರ್ಷನ್ ನಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ನೀಡುತ್ತಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ 3.7 ಕೆವಿಹೆಚ್ ಬ್ಯಾಟರಿಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಹೊಸ ಬ್ಯಾಟರಿ ಪ್ರತಿ ಚಾರ್ಜ್ ಗೆ ಬರೋಬ್ಬರಿ 156 ಕಿ.ಮೀ ನೀಡಬಹುದಾಗಿದ್ದು, ಇದು 450ಎಕ್ಸ್ 3ನೇ ತಲೆಮಾರಿನ ಆವೃತ್ತಿಗಿಂತಲೂ ಹೆಚ್ಚುವರಿಯಾಗಿ 10 ಕಿ.ಮೀ ಮೈಲೇಜ್ ನೀಡಲಿದೆ.

ather-450s-hr

ಹೆಚ್ಚಿನ ಮಟ್ಟದ ಮೈಲೇಜ್ ಬ್ಯಾಟರಿ ಪ್ಯಾಕ್ ಹೊಂದಿರುವ 450ಎಸ್ ಹೈ ರೇಂಜ್ ವರ್ಷನ್ ನಲ್ಲಿ ಎಥರ್ ಕಂಪನಿಯು ಇಕೋ, ಸ್ಮಾರ್ಟ್ ಇಕೋ ಮತ್ತು ರೈಡ್ ಎನ್ನುವ ಮೂರು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದ್ದು, ಇದು ಪ್ರತಿ ಗಂಟೆಗೆ 80 ಕಿ.ಮೀ ಟಾಪ್ ಸ್ಪೀಡ್ ಸಾಧಿಸಬಲ್ಲದು. ಆದರೆ ಹೊಸ ಸ್ಕೂಟರಿನಲ್ಲಿ 450ಎಸ್, 450ಎಕ್ಸ್ ಆವೃತ್ತಿಯಲ್ಲಿರುವಂತೆಯೇ ಪಿಎಂಎಸ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಮೈಲೇಜ್ ಹೆಚ್ಚಳಕ್ಕಾಗಿ ಟಾಪ್ ಸ್ಪೀಡ್ ತುಸು ಇಳಿಕೆ ಮಾಡಲಾಗಿದೆ. 450ಎಸ್, 450ಎಕ್ಸ್ ಆವೃತ್ತಿಗಳು ಪ್ರತಿ ಗಂಟೆಗೆ 90 ಕಿ.ಮೀ ಮೈಲೇಜ್ ಹೊಂದಿದ್ದು, ಮೋಟಾರ್ ಮಾತ್ರ ಒಂದೇ ಆಗಿರಲಿವೆ.

ಈ ಮೂಲಕ ಎಥರ್ ಹೊಸ ಸ್ಕೂಟರ್ ಪ್ರತಿಸ್ಪರ್ಧಿ ಓಲಾ ಎಸ್1 ಪ್ರೊ ಹೊಸ ಆವೃತ್ತಿಗೆ ಮತ್ತಷ್ಟು ಪೈಪೋಟಿ ನೀಡುವ ಸುಳಿವು ನೀಡಿದ್ದು, ಫೀಚರ್ಸ್ ಗಳಲ್ಲೂ ಗ್ರಾಹಕರನ್ನು ಸೆಳೆಯಲಿದೆ. ಹೊಸ ಸ್ಕೂಟರಿನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಬ್ಲ್ಯೂಟೂಥ್ ಕನೆಕ್ಟಿವಿಟಿ, ಮಲ್ಟಿ ರೈಡಿಂಗ್ ಮೋಡ್ ಗಳು ಸೇರಿದಂತೆ ಹಲವು ಫೀಚರ್ಸ್ ಗಳಿದ್ದು, ಹೊಸ ಇವಿ ಸ್ಕೂಟರ್ ಒಟ್ಟು 243 ಕೆ.ಜಿ ತೂಕ ಹೊಂದಿರಲಿದೆ.

ಇದನ್ನೂ ಓದಿ: ಹೋಂಡಾ ಸಿಬಿ350 Vs ಆರ್‍ಇ ಕ್ಲಾಸಿಕ್ 350.. ಖರೀದಿಗೆ ಯಾವುದು ಬೆಸ್ಟ್?

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಥರ್ ನಿರ್ಮಾಣದ ಇತರೆ ಇವಿ ಸ್ಕೂಟರ್ ಗಳಿಂತಲೂ ತುಸು ಭಾರವಾಗಿರುವ ಹೊಸ ಸ್ಕೂಟರ್ 1,837 ಎಂಎಂ ಉದ್ದ, 739 ಎಂಎಂ ಅಗಲ, 1,114 ಎಂಎಂ ಎತ್ತರ ಮತ್ತು 1,296 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಹಿಂಬದಿಯ ಆಸನವು ಈ ಮತ್ತಷ್ಟು ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಿರಲಿದೆ ಎನ್ನಲಾಗಿದೆ. ಇದರೊಂದಿಗೆ ಹೊಸ ಇವಿ ಸ್ಕೂಟರ್ ಬೆಲೆಯಲ್ಲಿ ತುಸು ದುಬಾರಿಯಾಗಿರಲಿದ್ದು, 450ಎಕ್ಸ್ ಹೊಸ ಮಾದರಿಗಿಂತಲೂ ರೂ. 10 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಬಹುದಾಗಿದೆ.

Published On - 9:40 pm, Wed, 22 November 23