AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಜೊತೆಗೆ ಇಂಧನ ಕೂಡಾ ಉಚಿತ..

ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಹೊಸ ಸಿ3 ಏರ್‌ಕ್ರಾಸ್‌ ಮತ್ತು ಸಿ3 ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡುತ್ತಿದ್ದು, ಹೊಸ ಕಾರುಗಳ ಖರೀದಿ ಮೇಲೆ ಗ್ರಾಹಕರು ವಿವಿಧ ಡಿಸ್ಕೌಂಟ್ ಗಳ ಜೊತೆಗೆ ಇಂಧನವನ್ನು ಸಹ ಉಚಿತವಾಗಿ ಪಡೆಯಬಹುದಾಗಿದೆ.

ಈ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಜೊತೆಗೆ ಇಂಧನ ಕೂಡಾ ಉಚಿತ..
ಸಿಟ್ರನ್ ಸಿ3 ಏರ್‌ಕ್ರಾಸ್‌
Praveen Sannamani
|

Updated on:Nov 22, 2023 | 6:00 PM

Share

ವರ್ಷಾಂತ್ಯದಲ್ಲಿ ಕಾರು ಮಾರಾಟವನ್ನು ತೀವ್ರಗೊಳಿಸುತ್ತಿರುವ ವಿವಿಧ ಕಾರು ಕಂಪನಿಗಳು ಹಲವಾರು ಆಫರ್ ಗಳನ್ನು ಘೋಷಣೆ ಮಾಡುತ್ತಿದ್ದು, ಸಿಟ್ರನ್ ಇಂಡಿಯಾ (Citroen India) ಕಂಪನಿಯು ಸಹ ತನ್ನ ಪ್ರಮುಖ ಎಸ್ ಯುವಿ ಕಾರುಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಸಿಟ್ರನ್ ಕಂಪನಿಯು ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ವಿಸ್ತರಿತ ವಾರಂಟಿ ಮತ್ತು ಆಕರ್ಷಕ ಬೆಲೆಗೆ ವಾರ್ಷಿಕ ನಿರ್ವಹಣಾ ಪ್ಯಾಕೇಜ್ ಆಫರ್ ನೀಡುತ್ತಿದ್ದು, ಇದರೊಂದಿಗೆ ಸೀಮಿತ ಅವಧಿಗಾಗಿ ಉಚಿತ ಇಂಧನ ಆಯ್ಕೆಗಳನ್ನು ಸಹ ನೀಡುತ್ತಿದೆ.

ಹೊಸ ಆಫರ್ ಗಳನ್ನು ಡಿಸೆಂಬರ್ 31ರ ತನಕ ಲಭ್ಯವಿರುವುದಾಗಿ ಮಾಹಿತಿ ನೀಡಲಾಗಿದ್ದು, ಹೊಸ ಆಫರ್ ಗಳಲ್ಲಿ ಸಿ3 ಏರ್ ಕ್ರಾಸ್ ಮತ್ತು ಸಿ3 ಕಾರುಗಳು ಗರಿಷ್ಠ ರೂ. 1.50 ಲಕ್ಷದ ತನಕ ಆಫರ್ ಪಡೆದುಕೊಂಡಿರಲಿವೆ. ರೂ. 1.50 ಲಕ್ಷದ ಆಫರ್ ನಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್, 5 ವರ್ಷಗಳ ವಿಸ್ತರಿತ ವಾರಂಟಿ, ವಾರ್ಷಿಕ ನಿರ್ವಹಣಾ ಪ್ಯಾಕೇಜ್ ಸೇರಿದಂತೆ ಸೀಮಿತ ಅವಧಿಗಾಗಿ ಉಚಿತ ಇಂಧನ ಸೌಲಭ್ಯ ಕೂಡಾ ದೊರೆಯಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ

ಹೊಸ ಆಫರ್ ನಲ್ಲಿ ಸಿಟ್ರನ್ ಕಂಪನಿಯು ಮೇಲೆ ತಿಳಿಸಿರುವ ಕ್ಯಾಶ್ ಬ್ಯಾಕ್, ವಿಸ್ತರಿತ ವಾರಂಟಿ ಮತ್ತು ಉಚಿತ ನಿರ್ವಹಣಾ ಪ್ಯಾಕೇಜ್ ಹೊರತಾಗಿಯೂ ಮತ್ತೊಂದು ಆಫರ್ ನೀಡುತ್ತಿದ್ದು, ವಿಸ್ತರಿತ ವಾರಂಟಿ ಮತ್ತು ಉಚಿತ ನಿರ್ವಹಣಾ ಪ್ಯಾಕೇಜ್ ಬಿಟ್ಟು ಕೇವಲ ಕ್ಯಾಶ್ ಬ್ಯಾಕ್ ಆಫರ್ ಆಯ್ಕೆ ಮಾಡುವ ಗ್ರಾಹಕರಿಗೆ ರೂ. 90 ಸಾವಿರ ಆಫರ್ ಸಿಗಲಿದೆ. ಇತ್ತೀಚೆಗೆ ಬಿಡುಗಡೆಗೊಂಡಿರುವ ಈ ಹೊಸ ಸಿ3 ಏರ್‌ಕ್ರಾಸ್ ಎಸ್‌ಯುವಿ ಕಾರು ಮಾದರಿಯು ಯು, ಪ್ಲಸ್ ಮತ್ತು ಮ್ಯಾಕ್ಸ್ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರ ಆರಂಭಿಕ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷದಿಂದ ಮತ್ತು ಟಾಪ್ ಎಂಡ್ ಆವೃತ್ತಿಯು ರೂ. 12.34 ಲಕ್ಷ ಬೆಲೆ ಹೊಂದಿದೆ.

ಹಾಗೆಯೇ ಸಿ3 ಹ್ಯಾಚ್ ಬ್ಯಾಕ್ ಕಾರು ಖರೀದಿಸುವ ಗ್ರಾಹಕರಿಗೂ ಉಚಿತ ಇಂಧನ ಒಳಗೊಂಡ ರೂ. 1.50 ಲಕ್ಷ ಮೌಲ್ಯದ ಆಫರ್ ಲಭ್ಯವಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮವಾದ ಮೈಕ್ರೊ ಎಸ್ ಯುವಿ ಕಾರು ಖರೀದಿಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆ ಎನ್ನಬಹುದು. 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 6.16 ಲಕ್ಷದಿಂದ ರೂ. 8.92 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ

ಇನ್ನು ಸಿಟ್ರನ್ ಕಂಪನಿಯು ಸಿ3 ಮತ್ತು ಸಿ3 ಏರ್ ಕ್ರಾಸ್ ಹೊರತುಪಡಿಸಿ ಪ್ರೀಮಿಯಂ ಕಾರು ಮಾದರಿಯಾದ ಸಿ5 ಏರ್ ಕ್ರಾಸ್ ಎಸ್ ಯುವಿ ಕಾರು ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ ರೂ. 2 ಲಕ್ಷ ಆಫರ್ ನೀಡುತ್ತಿದೆ. 2022ರಲ್ಲಿ ನಿರ್ಮಾಣವಾದ ಯುನಿಟ್ ಗಳ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 36.67 ಲಕ್ಷದಿಂದ ರೂ. 37.67 ಲಕ್ಷ ಬಲೆ ಹೊಂದಿದೆ. ಇದರಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 5 ಸೀಟರ್ ಸೌಲಭ್ಯದೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್ ಹೊಂದಿದೆ. ಈ ಮೂಲಕ ಹ್ಯುಂಡೈ ಟೂಸಾನ್ ಮತ್ತು ಜೀಪ್ ಕಂಪಾಸ್ ಕಾರು ಮಾದರಿಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದ್ದು, ಇದೀಗ ಹೊಸ ಆಫರ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Published On - 3:21 pm, Wed, 22 November 23

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ