Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ

ಭಾರತದಲ್ಲಿ ಮಾರಾಟಗೊಳ್ಳುವ ಎಸ್ ಯುವಿ ಕಾರುಗಳ ವಿಭಾಗದಲ್ಲಿ ಮಹೀಂದ್ರಾ ನಿರ್ಮಾಣ ಸ್ಕಾರ್ಪಿಯೋ-ಎನ್ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗರೊಬ್ಬರುವ ಸಹ ಹೊಸ ಸ್ಕಾರ್ಪಿಯೋ-ಎನ್ ಖರೀದಿಸಿರುವುದು ವಿಶೇಷವಾಗಿದೆ.

ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್
Follow us
Praveen Sannamani
|

Updated on: Nov 18, 2023 | 8:12 PM

ಎಸ್ ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿರುವ ಮಹೀಂದ್ರಾ (Mahinda) ಕಂಪನಿಯು ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಎಸ್ ಯುವಿ ಕಾರುಗಳನ್ನು ಮಾರಾಟಮಾಡುತ್ತಿದ್ದು, ಭರ್ಜರಿ ಬೇಡಿಕೆಯೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಸಖತ್ ಸ್ಪರ್ಧೆ ನೀಡುತ್ತಿದೆ. ಮಹೀಂದ್ರಾ ಕಂಪನಿಯು ಕೇವಲ ಭಾರತದಲ್ಲಿ ಮಾತ್ರವಲ್ಲ ಸಾಗರೋತ್ತರ ಕಾರು ಮಾರಾಟದಲ್ಲೂ ಹಲವಾರು ಮಾರಾಟ ದಾಖಲೆಗಳನ್ನು ಹೊಂದಿದ್ದು, ಇತ್ತೀಚೆಗೆ ಆಸ್ಟ್ರೇಲಿಯಾ ಕ್ರಿಕೆಟ್ ವಿಮರ್ಶಕ ಮತ್ತು ಮಾಜಿ ಕ್ರಿಕೆಟಿಗರಾಗಿರುವ ಮ್ಯಾಥ್ಯೂ ಹೇಡನ್ (Mathew Hayden) ಅವರಿದೆ ಸ್ಕಾರ್ಪಿಯೋ-ಎನ್ ಎಸ್ ಯುವಿ ವಿತರಿಸಿದೆ.

ಮಹೀಂದ್ರಾ ಕಂಪನಿಯು ಸದ್ಯ ಭಾರತ ಸೇರಿದಂತೆ ಮಧ್ಯ ಪ್ರಾಚ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಯುಎಸ್ ಮತ್ತು ಆಸ್ಟ್ರೇಲಿಯಾದಲ್ಲೂ ಉತ್ತಮ ಬೇಡಿಕೆ ಹೊಂದಿದ್ದು, ಆಸ್ಟ್ರೇಲಿಯಾದಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿರುವ ಮ್ಯಾಥ್ಯೂ ಹೇಡನ್ ಅವರಿಗ ಹೊಸ ತಲೆಮಾರಿನ ಸ್ಕಾರ್ಪಿಯೋ-ಎನ್ ವಿತರಣೆ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ ತಂಡದಲ್ಲಿ ಶಕ್ತಿಶಾಲಿ ಮತ್ತು ಆಕ್ರಮಣಕಾರಿ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಮ್ಯಾಥ್ಯೂ ಹೇಡನ್ ಅವರು ಸದ್ಯ ಕ್ರಿಕೆಟ್ ವಿಮರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಆಫ್-ರೋಡ್ ಕಾರು ಚಾಲನೆಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಆಫ್ ರೋಡ್ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸ್ಕಾರ್ಪಿಯೋ-ಎನ್ ಆಯ್ಕೆ ಮಾಡಿದ್ದು, ಹೊಸ ಕಾರು ವಿತರಣೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಭಾರತದಲ್ಲಿ ಕಳೆದ 20 ವರ್ಷಗಳಿಂದಲೂ ಎಸ್ ಯುವಿ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಸ್ಕಾರ್ಪಿಯೋ ಕಾರು ಮಾದರಿಯು ಕಳೆದ ವರ್ಷವಷ್ಟೇ ಹೊಸ ಬದಲಾವಣೆಯೊಂದಿಗೆ ಸ್ಕಾರ್ಪಿಯೋ-ಎನ್ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಜೊತೆಗೆ ಹಳೆದ ಮಾದರಿಯನ್ನು ಸ್ಕಾರ್ಪಿಯೋ ಕ್ಲಾಸಿಕ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಸ್ಕಾರ್ಪಿಯೋ-ಎನ್ ಮಾದರಿಯು ಹೆಚ್ಚಿನ ಮಟ್ಟದ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿದೆ.

ಸ್ಕಾರ್ಪಿಯೋ-ಎನ್ ಕಾರು ಮಾದರಿಯು ಭಾರತದಲ್ಲಿ ವಿವಿಧ ವೆರಿಯೆಂಟ್ ಗಳೊಂದಿಗೆ ಮಾರಾಟವಾಗುತ್ತಿದ್ದರೂ ಆಸ್ಟ್ರೇಲಿಯಾದಲ್ಲಿ ಕೇವಲ ಎರಡು ವೆರಿಯೆಂಟ್ ಗಳಲ್ಲಿ ಮಾರಾಟವಾಗುತ್ತಿದ್ದು, ಜೆಡ್8 ಮತ್ತು ಜೆಡ್8 ಎಲ್ ವೆರಿಯೆಂಟ್ ಗಳು 6-ಸ್ಪೀಡ್ ಟಾರ್ಕ್ ಕನ್ವರ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯ ಹೊಂದಿದೆ.

ಇನ್ನು ಹೊಸ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕಾರ್ಪಿಯೋ-ಎನ್ ಕಾರು ಮಾದರಿಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟೊ ಹೈರೈಡರ್ ಮತ್ತು ಸ್ಕೋಡಾ ಕುಶಾಕ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 13.26 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 24.54 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಅಪಘಾತಗಳನ್ನು ತಗ್ಗಿಸಲು ಇನ್ಮುಂದೆ ಈ ಸೇಫ್ಟಿ ಫೀಚರ್ಸ್ ಅಳವಡಿಕೆ ಕಡ್ಡಾಯ!

ಸ್ಕಾರ್ಪಿಯೋ-ಎನ್ ಮಾದರಿಯು ಆನ್ ರೋಡ್‌ನಲ್ಲಿ ಮಾತ್ರವಲ್ಲ ಆಫ್ ರೋಡ್‌ನಲ್ಲೂ ಗಮನಸೆಳೆಯುತ್ತಿದ್ದು, ಭಾರತದಲ್ಲಿನ ಮಾದರಿಯು 2.0-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಹಾಗೆಯೇ 2.2 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಹೊಂದಿದೆ.

ಹಾಗೆಯೇ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್ಇ, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಆಂಕರ್ ಪಾಯಿಂಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿದ್ದು, ಸ್ಕಾರ್ಪಿಯೋ ಕ್ಲಾಸಿಕ್ ಮಾದರಿಯೂ ಕೂಡಾ 2.2 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ.