ಚೀನಾದ ಅಧ್ಯಕ್ಷರ ಶಸ್ತ್ರಸಜ್ಜಿತ ಕಾರು ಕಂಡು ಅಚ್ಚರಿ ವ್ಯಕ್ತಪಡಿಸಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಗಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇತ್ತೀಚೆಗೆ ಅಮೆರಿಕ ಪ್ರವಾಸದಲ್ಲಿರುವಾಗ ಅಧ್ಯಕ್ಷ ಜೋ ಬಿಡನ್ ಚೀನಾದ ಅಧ್ಯಕ್ಷರ ಶಸ್ತ್ರಸಜ್ಜಿತ ಕಾರು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚೀನಾದ ಅಧ್ಯಕ್ಷರ ಶಸ್ತ್ರಸಜ್ಜಿತ ಕಾರು ಕಂಡು ಅಚ್ಚರಿ ವ್ಯಕ್ತಪಡಿಸಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬಿಡೆನ್
Follow us
|

Updated on:Nov 21, 2023 | 7:39 PM

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಗಾಗಿ ಅಮೆರಿಕಕ್ಕೆ ಆಗಮಿಸಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಚೀನಾ-ಯುಎಸ್ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಶೃಂಗಸಭೆಯ ನಂತರ ಉಭಯ ನಾಯಕರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವ್ಯಯಕ್ತಿಕ ಸಭೆ ನಡೆಸಿ ಗಮನ ಸೆಳೆದರು. ಈ ವೇಳೆ ಉಭಯ ನಾಯಕರು ಕುಶಲೋಪರಿ ವಿಚಾರಿಸುವ ಮೂಲಕ ಹಲವಾರು ಐತಿಹಾಸಿಕ ಘಟನೆಗಳನ್ನು ಮೆಲುಕುಹಾಕಿದ್ದು, ಇದೇ ವೇಳೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಚೀನಾದ ಅಧ್ಯಕ್ಷರ ಶಸ್ತ್ರಸಜ್ಜಿತ ಕಾರು ಕಂಡು ಅಚ್ಚರಿ ವ್ಯಕ್ತಪಡಿಸಿದರು.

ಸ್ಯಾನ್ ಫ್ರಾನ್ಸಿಸ್ಕೋದಿಂದ ಹಿಂದಿರುಗುವ ವೇಳೆ ಕ್ಸಿ ಜಿನ್‌ಪಿಂಗ್ ಅವರಿಗೆ ಬೀಳ್ಕೊಡುವ ವೇಳೆ ಅಧಿಕೃತ ಕಾರನ್ನು ನೋಡಿದ ಅಧ್ಯಕ್ಷ ಜೋ ಬಿಡೆನ್ ನಿಮ್ಮ ಕಾರು ತುಂಬಾ ಸುಂದರವಾಗಿದೆ ಎಂದಿದ್ದಾರೆ. ಇದಕ್ಕೆ ಖುಷಿಯಿಂದಲೇ ಪ್ರಕ್ರಿಯೆಸಿದ ಕ್ಸಿ ಜಿನ್‌ಪಿಂಗ್ ಹೌದು, ಇದು ಹಾಂಗ್‌ಕಿ ಕಾರು ಎಂದಿದ್ದಾರೆ.

China president car

ಚೀನಾದ ಅಧ್ಯಕ್ಷ ಅಧಿಕೃತ ಕಾರು ಮಾದರಿಯಾಗಿರುವ ಹಾಂಗ್‌ಕಿ ಎನ್701 ಈಗಾಗಲೇ ಹಲವಾರು ಸಾರ್ವಜನಿಕವಾಗಿ ಗಮನಸೆಳೆದಿದ್ದು, ಇದು ಚೀನಾ ಅಧ್ಯಕ್ಷರ ವಿಶ್ವಾಸಾರ್ಹ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ. ಹಾಂಗ್‌ಕಿ ಎನ್701 ಕಾರು ಚೀನಾದ ರೋಲ್ಸ್ ರಾಯ್ಸ್ ಎಂದೇ ಜನಪ್ರಿಯವಾಗಿದ್ದು, ಕ್ಸಿ ಜಿನ್‌ಪಿಂಗ್ ಅವರು ತಮ್ಮ ಭದ್ರತೆಗಾಗಿ ವಿದೇಶಿ ಪ್ರವಾಸದಲ್ಲೂ ಹಾಂಗ್‌ಕಿ ಕಾರನ್ನೇ ಉಪಯೋಗಿಸುತ್ತಾರೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಇಂಡೋನೇಷ್ಯಾದಲ್ಲಿ ನಡೆದಿದ್ದ ಜಿ 20 ಶೃಂಗಸಭೆಯ ಸಂದರ್ಭದಲ್ಲೂ ಕೂಡಾ ಹಾಂಗ್‌ಕಿ ಕಾರಿನಲ್ಲಿಯೇ ಪ್ರಯಾಣಿಸಿದ್ದ ಕ್ಸಿ ಜಿನ್‌ಪಿಂಗ್ ಅವರು ವಿಶ್ವ ನಾಯಕರ ಗಮನಸೆಳೆದಿದ್ದರು. ಹೆಚ್ಚಿನ ಭದ್ರತೆಯೊಂದಿಗೆ ಐಷಾರಾಮಿ ಪ್ರಯಾಣ ಒದಗಿಸುವ ಹಾಂಗ್‌ಕಿ ಎನ್701 ಕಾರು ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಇದು 5 ಮೀಟರ್‌ಗಿಂತಲೂ ಹೆಚ್ಚು ಉದ್ದಳತೆಯೊಂದಿಗೆ ಎರಡನೇ ಸಾಲಿನಲ್ಲಿ ವಿಶಾಲವಾದ ಆಸನವನ್ನು ರೂಪಿಸುವ ಲಿಮೋಸಿನ್‌ನ ಬಿ-ಪಿಲ್ಲರ್‌ಗಳನ್ನು ಒಳಗೊಂಡಿದೆ.

ಹಾಂಗ್‌ಕಿ ಕಾರು ಉತ್ಪಾದನಾ ಕಂಪನಿಯು ಸದ್ಯ ಚೀನಿ ಒಡೆತನ ಫಾವ್ ಗ್ರೂಪ್ ಅಡಿ ಕಾರ್ಯನಿರ್ವಹಿಸುತ್ತಿದ್ದು, 1991ರಿಂದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಐಷಾರಾಮಿ ಕಾರುಗಳನ್ನು ಉತ್ಪಾದಿಸುತ್ತಿದೆ. ಜರ್ಮನಿಯ ಪ್ರಮುಖ ಐಷಾರಾಮಿ ಕಾರು ಕಂಪನಿಗಳ ಜೊತೆಗೆ ಸಹಭಾಗೀತ್ವ ಹೊಂದಿರುವ ಹಾಂಗ್‌ಕಿ ಕಾರು ಕಂಪನಿಯು ಚೀನಿ ಮಾರುಕಟ್ಟೆಯಲ್ಲಿ ರೀಬ್ಯಾಡ್ಜ್ ಆವೃತ್ತಿಗಳನ್ನು ಸಹ ಮಾರಾಟ ಮಾಡುತ್ತಿದೆ. ಹೀಗಾಗಿ ಚೀನಿ ಮಾರುಕಟ್ಟೆಯಲ್ಲಿನ ಐಷಾರಾಮಿ ಕಾರು ಮಾರಾಟದ ಹಿಡಿತ ಸಾಧಿಸಿರುವ ಹಾಂಗ್‌ಕಿ ಕಾರು ಉತ್ಪಾದನಾ ಕಂಪನಿಯು ಇದೀಗ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭದ್ರತೆಯಾಗಿ ಶಸ್ತ್ರಸಜ್ಜಿತ ಎನ್701 ಲಿಮೋಸಿನ್ ಕಾರು ಮಾದರಿಯನ್ನು ಒದಗಿಸುತ್ತಿದೆ. ಇದು ಅತ್ಯತ್ತಮ ತಾಂತ್ರಿಕ ಅಂಶಗಳೊಂದಿಗೆ ಸಿದ್ದಗೊಂಡಿದ್ದು, ಇದು ಯಾವುದೇ ಮಾದರಿಯ ಶತ್ರುಗಳ ದಾಳಿಗಳನ್ನು ಸಮರ್ಥವಾಗಿ ಎದುರಿಸಬಲ್ಲದು.

China president car (3)

ಮಾಹಿತಿಗಳ ಪ್ರಕಾರ ಸುಮಾರು 8 ಸಾವಿರ ಕೆಜಿ ತೂಕ ಹೊಂದಿರುವ ಹಾಂಗ್‌ಕಿ ಎನ್701 ಕಾರು ಮಾದರಿಯು ಟಾಪ್ ಲೈನ್ ಐಷಾರಾಮಿ ಸಲೂನ್‌ ಕಾರುಗಳಲ್ಲಿ ಕಂಡುಬರುವ ಹಲವಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕಾರಿನ ಹೊರಭಾಗದಲ್ಲಿ ಚೀನೀ ಧ್ವಜವನ್ನು ಹೊಂದಿರುವ ಫೆಂಡರ್‌ಗಳು ಒಳಗೊಂಡಂತೆ ಲಿಮೋಸಿನ್ ಕ್ರೋಮ್-ಡಿಪ್ಡ್ ಚಕ್ರಗಳನ್ನು ನೀಡಲಾಗಿದ್ದು, ಇವು ತುರ್ತು ಸಂದರ್ಭದಲ್ಲಿ ಪ್ಲ್ಯಾಟ್ ರನ್ ಮೂಲಕ ಪ್ರತಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಆದರೆ ಹೊಸ ಕಾರಿನ ಕ್ಯಾಬಿನ್ ಫೀಚರ್ಸ್ ಗಳ ಕುರಿತಾಗಿ ಖಚಿತ ಮಾಹಿತಿ ಇಲ್ಲವಾದರೂ ಇದು ಹಾಂಗ್‌ಕಿ ಹೆಚ್9 ಮಾದರಿಯಲ್ಲಿರುವಂತೆ ಸ್ಯಾಟಿನ್ ಕ್ರೋಮ್ ಮತ್ತು ಪಿಯಾನೋ ಕಪ್ಪು ಬಣ್ಣದ ಲೆದರ್ ಆಸನಗಳು, ಫ್ಲಕ್ಸ್ ವುಡ್ ಟ್ರಿಮ್ ಗಳು, ಇಸ್ಟ್ರಮೆಂಟ್ ಕನ್ಸೋಲ್‌ಗಾಗಿ ಪ್ರತ್ಯೇಕ ಟಿಎಫ್‌ಟಿ ಪರದೆಗಳು, ಮಧ್ಯದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಸಿ ವೆಂಟ್‌ಗಳೊಂದಿಗೆ ತುರ್ತು ಸಭೆ ನಡೆಸಲು ಒನ್ ಟಚ್ ಮೂಲಕ ಪ್ರತ್ಯೇಕ ಕ್ಯಾಬಿನ್ ಹೊಂದಿರಬಹುದಾಗಿದೆ.

ಇದನ್ನೂ ಓದಿ:  ಪ್ರಧಾನಿ ನರೇಂದ್ರ ಮೋದಿಯವರ ಸೂಪರ್ ಸೇಫ್ ಗಾರ್ಡ್ ಐಷಾರಾಮಿ ಕಾರಿನ ವಿಶೇಷತೆಗಳೇನು ಗೊತ್ತಾ?

ಇದರೊಂದಿಗೆ ಅಧ್ಯಕ್ಷರ ಆರಾಮದಾಯಕ ಪ್ರಯಾಣಕ್ಕಾಗಿ ಇನ್ ಬಿಲ್ಟ್ ರೆಫ್ರಿಜರೇಟರ್, ಮಸಾಜ್ ಸೀಟ್‌ಗಳು ಮತ್ತು ಹಿಂಭಾಗದಲ್ಲಿ ಮನರಂಜನಾ ಪರದೆಗಳು. ಹಿಂಭಾಗದ ಆಸನದಲ್ಲಿ ಸೆಂಟರ್ ಆರ್ಮ್‌ರೆಸ್ಟ್‌ನೊಂದಿಗೆ ಸೆಂಟರ್ ಕನ್ಸೊಲ್ ಜೋಡಿಸಲಾಗಿದ್ದು, ಇದರಲ್ಲಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ನೀಡಲಾಗಿದೆ. ಭದ್ರತಾ ದೃಷ್ಠಿಯಿಂದ ಹಲವು ವಿಚಾರಗಳನ್ನು ಗೌಪ್ಯವಾಗಿಸಲಾಗಿದ್ದು, ಇದು 3.0 ಲೀಟರ್ ಸೂಪರ್ಚಾಜ್ಡ್ ವಿ6 ಪೆಟ್ರೋಲ್ ಎಂಜಿನ್ ನೊಂದಿಗೆ 284 ಹಾರ್ಸ್ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ.

Published On - 7:36 pm, Tue, 21 November 23

ತಾಜಾ ಸುದ್ದಿ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ
ಸಚಿವ ಭೈರತಿ ಸುರೇಶ್ ಮತ್ತು ಬಸನಗೌಡ ಯತ್ನಾಳ್ ನಡುವಿನ ಚರ್ಚೆ ಗಮನ ಸೆಳೆಯಿತು
ಸಚಿವ ಭೈರತಿ ಸುರೇಶ್ ಮತ್ತು ಬಸನಗೌಡ ಯತ್ನಾಳ್ ನಡುವಿನ ಚರ್ಚೆ ಗಮನ ಸೆಳೆಯಿತು
ಅಶೋಕ ಮತ್ತು ವಿಶ್ವನಾಥ್ ನಡುವೆ ಭಿನ್ನಾಭಿಪ್ರಾಯವಿಲ್ಲ: ಎಸ್ ಟಿ ಸೋಮಶೇಖರ್
ಅಶೋಕ ಮತ್ತು ವಿಶ್ವನಾಥ್ ನಡುವೆ ಭಿನ್ನಾಭಿಪ್ರಾಯವಿಲ್ಲ: ಎಸ್ ಟಿ ಸೋಮಶೇಖರ್
ನಿತಿನ್ ಗಡ್ಕರಿ ಜೊತೆ ಪೋಟೋದಿಂದ ತನ್ವೀರ್ ಪೀರಾ ಪಾಪಮುಕ್ತನಾಗಲಾರ: ಯತ್ನಾಳ್
ನಿತಿನ್ ಗಡ್ಕರಿ ಜೊತೆ ಪೋಟೋದಿಂದ ತನ್ವೀರ್ ಪೀರಾ ಪಾಪಮುಕ್ತನಾಗಲಾರ: ಯತ್ನಾಳ್
ಸಿಎಂಗೆ ತಾಕತ್ತಿದ್ದರೆ ತನ್ವೀರ್ ಪೀರಾ ವಿರುದ್ಧ ತನಿಖೆ ನಡೆಸಲಿ: ಯತ್ನಾಳ್
ಸಿಎಂಗೆ ತಾಕತ್ತಿದ್ದರೆ ತನ್ವೀರ್ ಪೀರಾ ವಿರುದ್ಧ ತನಿಖೆ ನಡೆಸಲಿ: ಯತ್ನಾಳ್
ವಿನಯ್, ನಮ್ರತಾನ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟ ಸ್ನೇಹಿತ್
ವಿನಯ್, ನಮ್ರತಾನ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟ ಸ್ನೇಹಿತ್
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್