Hyundai: ಹ್ಯುಂಡೈ ಕಾರುಗಳ ಖರೀದಿ ಮೇಲೆ ರೂ. 1.50 ಲಕ್ಷ ತನಕ ಇಯರ್ ಎಂಡ್ ಆಫರ್

|

Updated on: Dec 21, 2022 | 8:12 PM

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಭರ್ಜರಿ ಇಯರ್ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

Hyundai: ಹ್ಯುಂಡೈ ಕಾರುಗಳ ಖರೀದಿ ಮೇಲೆ ರೂ. 1.50 ಲಕ್ಷ ತನಕ ಇಯರ್ ಎಂಡ್ ಆಫರ್
ಹ್ಯುಂಡೈ ಕಾರುಗಳ ಖರೀದಿ ಮೇಲೆ ರೂ. 1.50 ಲಕ್ಷ ತನಕ ಇಯರ್ ಎಂಡ್ ಆಫರ್
Follow us on

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ(Car Sales) ಮುಂಚೂಣಿಯಲ್ಲಿರುವ ಹ್ಯುಂಡೈ(Hyundai) ಕಂಪನಿಯು ವಿವಿಧ ಕಾರುಗಳ ಖರೀದಿಯ ಡಿಸೆಂಬರ್ ಅವಧಿಯ ಆಫರ್ ಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಹೊಸ ಆಫರ್ ಗಳಲ್ಲಿ ಎಕ್ಸ್ ಚೆಂಜ್ ಬೋನಸ್, ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಹೊಸ ಆಫರ್ ಗಳಲ್ಲಿ ಹ್ಯುಂಡೈ ಕಂಪನಿಯು ಕೊನಾ ಎಲೆಕ್ಟ್ರಿಕ್, ಗ್ರ್ಯಾಂಡ್ ಐ10 ನಿಯೋಸ್, ಐ20 ಮತ್ತು ಔರಾ ಕಾರು ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ಆಯ್ದ ವೆರಿಯೆಂಟ್ ಗಳು ಆಧರಿಸಿ ನಿರ್ಧಾರವಾಗುತ್ತದೆ. ಹಾಗಾದರೆ ಹೊಸ ಆಫರ್ ಗಳು ಯಾವ ಮಾದರಿಯ ಎಷ್ಟು ಲಭ್ಯವಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ ಬನ್ನಿ.

ಕೊನಾ ಎಲೆಕ್ಟ್ರಿಕ್ ಎಸ್ ಯುವಿ

ಹ್ಯುಂಡೈ ಕಂಪನಿಯು ತನ್ನ ಜನಪ್ರಿಯ ಕೊನಾ ಎಲೆಕ್ಟ್ರಿಕ್ ಎಸ್ ಯುವಿ ಆವೃತ್ತಿಯ ಮೇಲೆ ಗರಿಷ್ಠ ರೂ. 1.50 ಲಕ್ಷದ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದ್ದು, ವರ್ಷಾಂತ್ಯದಲ್ಲಿ ಹೊಸ ಇವಿ ಕಾರು ಖರೀದಿದಾರರಿಗೆ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ. ಪ್ರತಿ ಚಾರ್ಜ್ ಗೆ 452 ಕಿ.ಮೀ ಮೈಲೇಜ್ ಹೊಂದಿರುವ ಕೊನಾ ಇವಿ ಕಾರು ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಇತ್ತೀಚೆಗೆ ಬಿಡುಗಡೆಯಾದ ಬಿವೈಡಿ ಅಟ್ಟೊ 3 ಕಾರಿಗೆ ಪೈಪೋಟಿಯಾಗಿ ಹೆಚ್ಚಿನ ಆಫರ್ ಘೋಷಿಸಲಾಗಿದೆ.

ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್ ಬ್ಯಾಕ್

ಹ್ಯಾಚ್ ಬ್ಯಾಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಗ್ರ್ಯಾಂಡ್ ಐ10 ನಿಯೋಸ್ ಕಾರು ಖರೀದಿಯ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 63 ಸಾವಿರ ತನಕ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಪೆಟ್ರೋಲ್ ಮಾದರಿಯ ಜೊತೆಗೆ ಸಿಎನ್ ಜಿ ಮೇಲೆ ಡಿಸ್ಕೌಂಟ್ ನೀಡಲಾಗುತ್ತಿದ್ದು, ಮಾರುತಿ ಸ್ವಿಫ್ಟ್ ಮತ್ತು ಟಾಟಾ ಟಿಯಾಗೋ ಮಾದರಿಗಳಿಗೆ ಪೈಪೋಟಿಗಾಗಿ ಹೊಸ ಆಫರ್ ನೀಡುತ್ತಿದೆ.

ಔರಾ ಕಂಪ್ಯಾಕ್ಟ್ ಸೆಡಾನ್

ಹ್ಯುಂಡೈ ಕಂಪನಿಯು ಔರಾ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯ ಮೇಲೆ ರೂ. 43 ಸಾವಿರ ಆಫರ್ ನೀಡುತ್ತಿದ್ದು, ಪೆಟ್ರೋಲ್ ಜೊತೆ ಸಿಎನ್ ಜಿ ಮಾದರಿಗೂ ಹೊಸ ಆಫರ್ ಅನ್ವಯಿಸಲಿದೆ. ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಜ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಔರಾ ಕಾರು ಮಾದರಿಗಾಗಿ ಆಫರ್ ನೀಡಲಾಗುತ್ತಿದ್ದು, ತಿಂಗಳಾಂತ್ಯದ ತನಕ ಆಫರ್ ಲಭ್ಯವಿರಲಿದೆ.

ಐ20 ಹ್ಯಾಚ್ ಬ್ಯಾಕ್

ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಐ20 ಕಾರಿನ ಮೇಲೆ ಹ್ಯುಂಡೈ ಕಂಪನಿಯು ರೂ. 30 ಸಾವಿರ ತನಕ ಆಫರ್ ನೀಡುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳ ಮೇಲೂ ಹೊಸ ಆಫರ್ ಅನ್ವಯಿಸಲಿದೆ. ಮಾರುತಿ ಬಲೆನೊ ಮತ್ತು ಟೊಯೊಟಾ ಗ್ಲಾಂಝಾ ಕಾರುಗಳಿಗೆ ಅತ್ಯುತ್ತಮ ಪೈಪೋಟಿ ನೀಡುತ್ತಿರುವ ಐ20 ಖರೀದಿಗೆ ಹೊಸ ಆಫರ್ ಉತ್ತಮವಾಗಿವೆ.

Published On - 3:59 pm, Thu, 8 December 22