Lexus LM: ಲೆಕ್ಸಸ್ ಎಲ್ಎಂ ಐಷಾರಾಮಿ ಎಂಪಿವಿ ಭಾರತದಲ್ಲಿ ಅನಾವರಣ

ಲೆಕ್ಸ,ಸ್ ಇಂಡಿಯಾ ಕಂಪನಿಯು ತನ್ನ ಐಷಾರಾಮಿ ಎಲ್ಎಂ ಎಂಪಿವಿ ಆವೃತ್ತಿಯನ್ನು ಭಾರತದಲ್ಲಿ ಅನಾವರಣಗೊಳಿಸುವ ಮೂಲಕ ಬುಕಿಂಗ್ ಆರಂಭಿಸಿದೆ.

Lexus LM: ಲೆಕ್ಸಸ್ ಎಲ್ಎಂ ಐಷಾರಾಮಿ ಎಂಪಿವಿ ಭಾರತದಲ್ಲಿ ಅನಾವರಣ
ಲೆಕ್ಸಸ್ ಎಲ್ಎಂ ಐಷಾರಾಮಿ ಎಂಪಿವಿ ಭಾರತದಲ್ಲಿ ಅನಾವರಣ
Praveen Sannamani

Updated on: Aug 27, 2023 | 7:12 PM

ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಲೆಕ್ಸಸ್(Lexus) ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಎಲ್ಎಂ(LM) ಐಷಾರಾಮಿ ಎಂಪಿವಿ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಟೊಯೊಟಾ ವೆಲ್ ಫೈರ್ ಎಂಪಿವಿ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಇದು ಎರಡನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಕಾರು ಖರೀದಿಗೆ ಈಗಾಗಲೇ ಬುಕಿಂಗ್ ಸಹ ಆರಂಭವಾಗಿದ್ದು, ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಲೆಕ್ಸಸ್ ಎಲ್ಎಂ ಕಾರು ಉತ್ಪಾದನಾ ಪ್ಲ್ಯಾಟ್ ಫಾರ್ಮ್, ಪವರ್ ಟ್ರೈನ್ ಮತ್ತು ವೈಶಿಷ್ಟ್ಯತೆಗಳಲ್ಲಿ ಬಹುತೇಕ ಟೊಯೊಟಾ ವೆಲ್ ಫೈರ್ ಆಧರಿಸಿದ್ದು, ಇದು ಗ್ರಾಹಕರ ಬೇಡಿಕೆ ಆಧರಿಸಿ ಫೋರ್ ಸೀಟರ್ ಮತ್ತು ಸಿಕ್ಸ್‌ ಸೀಟರ್ ಆವತ್ತಿಗಳಲ್ಲಿ ಖರೀದಿಗೆ ಲಭ್ಯವಿರವಿದೆ. ಹೊಸ ಕಾರು ವಿಶೇಷವಾಗಿ ಉದ್ಯಮಿಗಳು, ರಾಜಕಾರಣಿಗಳು ಮತ್ತು ಸಿನಿ ತಾರೆಯರಿಗಾಗಿ ನಿರ್ಮಾಣಗೊಂಡಿದ್ದು, ಇದು ವೆಲ್ ಫೈರ್ ಕಾರಿಗಿಂತಲೂ ಹೆಚ್ಚಿನ ಐಷಾರಾಮಿ ಫೀಚರ್ಸ್ ಹೊಂದಿರಲಿದೆ.

Lexus LM (5)

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಎಲ್ಎಂ ಎಂಪಿವಿ ಆವೃತ್ತಿಯು GA-K ಮಾಡ್ಯೂಲರ್ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣಗೊಂಡಿದ್ದು, ಇದರಲ್ಲಿ ಆಕರ್ಷಕವಾದ ದೊಡ್ಡದಾದ ಫ್ರಂಟ್ ಗ್ರಿಲ್, ಸ್ಲಿಕ್ ಎಲ್ಇಡಿ ಹೆಡ್ ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್ ಮತ್ತು ಸ್ಪೋರ್ಟಿ ಫಾಗ್ ಲ್ಯಾಂಪ್ಸ್ ಹೊಂದಿದೆ. ಹಾಗೆಯೇ ಅತಿ ದೊಡ್ಡ ಬಿ ಪಿಲ್ಲರ್ ನೊಂದಿಗೆ ಹಿಂಬದಿಯಲ್ಲಿ ಎಲ್ಇಡಿ ಲೈಟ್ ಬಾರ್ ಮತ್ತು 19 ಇಂಚಿನ ಅಲಾಯ್ ವ್ಹೀಲ್ ಹೊಂದಿದೆ.

ಇದನ್ನೂ ಓದಿ: ಪವರ್ ಫುಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗೆ ಸಿದ್ದವಾಗಿರುವ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್

ಹೊಸ ಕಾರು ಟೊಯೊಟಾ ವೆಲ್ ಫೈರ್ ಮಾದರಿಯಂತೆ 5,130 ಎಂಎಂ ಉದ್ದಳತೆಯೊಂದಿಗೆ 1,890 ಎಂಎಂ ಅಗಲ ಮತ್ತು 1,945 ಎಂಎಂ ಎತ್ತರ ಹೊಂದಿದ್ದು, ಆಕರ್ಷಕ ಕ್ಯಾಬಿನ್ ಸೌಲಭ್ಯವನ್ನು ಪಡೆದುಕೊಂಡಿದೆ. 6 ಸೀಟರ್ ಮಾದರಿಗಿಂತಲೂ 4 ಸೀಟರ್ ಆವೃತ್ತಿಯು ಹೆಚ್ಚಿನ ಐಷಾರಾಮಿ ಫೀಚರ್ಸ್ ಹೊಂದಿದ್ದು, ಇದು ಡ್ರೈವರ್ ಕ್ಯಾಬಿನ್ ನಿಂದ ಹಿಂಬದಿಯ ಆಸನವನ್ನು ಪ್ರತ್ಯೇಕಿಸುವುವ ಮೂಲಕ ಬಿಸಿನೆಸ್ ಕ್ಲಾಸ್ ವಿಮಾನಯಾನದ ಅನುಭವ ನೀಡುತ್ತದೆ.

Lexus LM (2)

ಹೊಸ ಕಾರಿನಲ್ಲಿ ರಿಕ್ಲೈನ್ ಆಸನಗಳೊಂದಿಗೆ 43 ಇಂಚಿನ ಟಿವಿ, 23 ಇಂಚಿನ ಸರೌಂಡ್ ಆಡಿಯೋ ಸಿಸ್ಟಂ, ಪಿಲ್ಲೋ ಸ್ಟೈಲ್ ಹೆಡ್ ರೆಸ್ಟ್, ಫ್ಲೋಡ್ ಟೇಬಲ್, ಹಿಟೆಡ್ ಆರ್ಮ್ ರೆಸ್ಟ್, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ರೀಡಿಂಗ್ ಲೈಟ್ಸ್, ವ್ಯಾನಿಟಿ ಮಿರರ್, ಸಣ್ಣದಾದ ಫ್ರೀಡ್ಜ್, ರಿಯರ್ ಗ್ಲೋಬಾಕ್ಸ್, ಅಂಬ್ರೆಲಾ ಹೋಲ್ಡರ್, ಗೌಪ್ಯತೆಗಾಗಿ ಗ್ಲಾಸ್ ಪ್ಯಾನೆಲ್ ನೀಡಲಾಗಿದೆ. ಇದರೊಂದಿಗೆ ಡೋರ್ ಕಂಟ್ರೋಲ್, ಸ್ಟೋರೇಜ್ ಕಂಫಾರ್ಟ್ಮೆಂಟ್ ಮತ್ತು ಕ್ಯಾಬಿನ್ ಟೆಂಪರೇಚರ್ ಕಂಟ್ರೋಲ್ ಹೊಂದಿರುವ ಓವರ್ ಹೆಡ್ ಕನ್ಸೊಲ್ ಮತ್ತು ಸ್ಮಾರ್ಟ್ ಫೋನ್ ಸ್ಟೈಲ್ ಕಂಟ್ರೋಲ್ ಪ್ಯಾನೆಲ್ ನೀಡಲಾಗಿದೆ. ಇದರಲ್ಲಿ ಎನ್ ವಿಹೆಚ್ ಪ್ರಮಾಣವು ಅತಿ ಕಡಿಮೆ ಪ್ರಮಾಣದಲ್ಲಿದ್ದು, ಇದು ಪ್ರಯಾಣಿಕರಿಗೆ ಪ್ರಶಾಂತವಾದ ಕ್ಯಾಬಿನ್ ಒದಗಿಸಲು ಸಹಕಾರಿಯಾಗಿದೆ.

Lexus LM (3)

ಈ ಮೂಲಕ ಹೊಸ ಎಲ್ಎಂ ಎಂಪಿವಿಯಲ್ಲಿ ಲೆಕ್ಸಸ್ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಡಿಜಿಟಲ್ ರಿಯರ್ ವ್ಯೂ ಮಿರರ್ ಮತ್ತು ಪನೋರಮಿಕ್ ವ್ಯೂ ಮಾನಿಟರ್ ಮೂಲಕ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಇದನ್ನೂ ಓದಿ: ಹೊಸ ಕಾರುಗಳಿಗೆ ಕಡ್ಡಾಯ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ

ಎಂಜಿನ್ ಮತ್ತು ಪರ್ಫಾಮೆನ್ಸ್
ಲೆಕ್ಸಸ್ ಕಂಪನಿಯು ತನ್ನ ಸಹೋದರ ಸಂಸ್ಥೆ ಟೊಯೊಟಾ ಕಂಪನೊಂದಿಗೆ ಹೈಬ್ರಿಡ್ ಎಂಜಿನ್ ಆಯ್ಕೆ ಹಂಚಿಕೊಂಡಿದ್ದು, ಹೊಸ ಎಲ್ಎಂ ಕಾರು ವೆಲ್ ಫೈರ್ ಮಾದರಿಯಲ್ಲಿರುವಂತೆ 2.5 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಇದು ಸೆಲ್ಪ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ಫೋರ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 250 ಹಾರ್ಸ್ ಪವರ್ ಮತ್ತು 239 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದು ಭರ್ಜರಿ ಮೈಲೇಜ್ ನೀಡುತ್ತದೆ.

Lexus LM (1)

ಇದರೊಂದಿಗೆ ಹೊಸ ಕಾರು ಪ್ರಮುಖ ಎರಡು ವೆರಿಯೆಂಟ್ ಗಳೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.20 ಕೋಟಿಯಿಂದ ರೂ. 1.40 ಕೋಟಿ ಬೆಲೆ ಹೊಂದುವ ಸಾಧ್ಯತೆಗಳಿವೆ.

Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas

Loading...
Unable to load recommendations.
Follow Us