Bharat NCAP: ಹೊಸ ಕಾರುಗಳಿಗೆ ಕಡ್ಡಾಯ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ

ಕೇಂದ್ರ ಸರ್ಕಾರವು ಭಾರತದಲ್ಲಿ ಹೊಸ ಕಾರುಗಳ ಸುರಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಬಹುನೀರಿಕ್ಷಿತ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ ಮಾಡಿದ್ದು, ಹೊಸ ಸುರಕ್ಷಾ ಮಾನದಂಡವು ದೇಶಿಯ ಮಾರುಕಟ್ಟೆಯಲ್ಲಿನ ವಾಹನ ಸುರಕ್ಷತೆಯಲ್ಲಿ ಹೊಸ ಬದಲಾವಣೆಗೆ ಸಹಕಾರಿಯಾಗಲಿದೆ.

Follow us
|

Updated on:Aug 22, 2023 | 9:13 PM

ವಾಹನಗಳಲ್ಲಿ ಸುರಕ್ಷತೆಯ ಕೊರತೆ ಪರಿಣಾಮ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ಜನ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಅಪಘಾತಗಳಲ್ಲಿ ಪ್ರಾಣಹಾನಿ ತಗ್ಗಿಸುವ ನಿಟ್ಟಿನಲ್ಲಿ ವಾಹನಗಳಲ್ಲಿನ ಸುರಕ್ಷಾ ಮಾನದಂಡಗಳನ್ನು ಉನ್ನತೀಕರಿಸುತ್ತಿದ್ದು, ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಕಡ್ಡಾಯವಾಗಿ ಜಾರಿ ತಂದಿದೆ. ಜೊತೆಗೆ ಸುರಕ್ಷಾ ಸೌಲಭ್ಯಗಳ ಕಾರ್ಯಕ್ಷಮತೆ ಪರೀಕ್ಷಿಸಲು ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ(Bharat New Car Assessment Program) ಸಹ ಪರಿಚಯಿಸಿದ್ದು, ಇದು ಹೊಸ ಕಾರುಗಳಲ್ಲಿನ ಸುರಕ್ಷತೆ ಗುಣಮಟ್ಟಕ್ಕೆ ರೇಟಿಂಗ್ಸ್ ನೀಡಲಿದೆ.

ಜಾಗತಿಕವಾಗಿ ಹೊಸ ಕಾರುಗಳ ಗುಣಮಟ್ಟ ಪರೀಕ್ಷಿಸಲು ಗ್ಲೋಬಲ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಜಾರಿಯಲ್ಲಿದ್ದು, ಇದೀಗ ಕೇಂದ್ರ ಸಾರಿಗೆ ಇಲಾಖೆಯು ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗಾಗಿ ಪ್ರತ್ಯೇಕ ಸುರಕ್ಷಾ ಮಾನದಂಡ ಹೊಂದಿರುವ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ ಮಾಡಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತ್ ಎನ್‌ಸಿಎಪಿಗೆ ಚಾಲನೆ ನೀಡಿದ್ದು, ಇದು ಅಕ್ಟೋಬರ್‌ 1 ರಿಂದ ಇದು ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ ಎಂದಿದ್ದಾರೆ.

Bharat NCAP (1)

ಪ್ರಸ್ತುತ ಜಾರಿಯಲ್ಲಿರುವ ಗ್ಲೋಬಲ್‌ ಎನ್‌ಸಿಎಪಿ ಮಾದರಿಯಲ್ಲಿಯೇ ಭಾರತ್‌ ಎನ್‌ಸಿಎಪಿಯ ಕ್ರ್ಯಾಶ್ ಟೆಸ್ಟ್‌ ಸಹ ವಯಸ್ಕ ಪ್ರಯಾಣಿಕರು ಮತ್ತು ಮಕ್ಕಳ ಸುರಕ್ಷತಾ ವಿಭಾಗದ ಕಾರ್ಯಕ್ಷಮತೆ ಆಧರಿಸಿ ಸುರಕ್ಷತಾ ರೇಟಿಂಗ್ ನೀಡಲಿದೆ. ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆ ಆಧರಿಸಿ ಸ್ಟಾರ್ ರೇಟಿಂಗ್‌ ನಿರ್ಧಾರವಾಗಲಿದ್ದು, ಸುರಕ್ಷಾ ಫೀಚರ್ಸ್ ಮತ್ತು ಕಾರ್ಯಕ್ಷಮತೆ ಮೇಲೆ ಸೊನ್ನೆಯಿಂದ ಐದರ ತನಕ ಸೇಫ್ಟಿ ರೇಟಿಂಗ್ ನೀಡಲಾಗುತ್ತದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಸುರಕ್ಷಿತ ಕಾರು ಎಂದು ಗುರುತಿಸಿಕೊಳ್ಳಲು ಕನಿಷ್ಠ ಮೂರು ಸ್ಟಾರ್ ರೇಟಿಂಗ್ಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಮೂರಕ್ಕಿಂತ ಕಡಿಮೆ ರೇಟಿಂಗ್ಸ್ ಪಡೆದುಕೊಳ್ಳುವ ಕಾರುಗಳನ್ನು ಕಳಪೆ ಎಂದು ಘೋಷಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುತ್ತೆ ಹೊಚ್ಚ ಹೊಸ ಟೊಯೊಟಾ ರೂಮಿಯಾನ್

Bharat NCAP (3)

ಹೊಸ ಕಾರುಗಳು ಅಪಘಾತದಲ್ಲಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವ ರೀತಿ ಸುರಕ್ಷತೆಯನ್ನು ಖಾತ್ರಿಪಡಿಸುತ್ತೆ ಎನ್ನುವುದೇ ಕ್ರ್ಯಾಶ್ ಟೆಸ್ಟಿಂಗ್ ಪ್ರಮುಖ ಉದ್ದೇಶವಾಗಿದ್ದು, ಇದು ಫ್ರಂಟ್ ಇಂಪ್ಯಾಕ್ಟ್ ಟೆಸ್ಟ್ , ಸೈಡ್ ಇಂಪ್ಯಾಕ್ಟ್ ಟೆಸ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ಟೆಸ್ಟ್‌ ಒಳಗೊಂಡಿರುತ್ತದೆ. ಐದು ಸ್ಟಾರ್ ರೇಟಿಂಗ್ಸ್ ಹೊಂದಿರುವ ಕಾರುಗಳು ಅಪಘಾತದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದ್ದರೆ ಸೊನ್ನೆ ರೇಟಿಂಗ್ಸ್ ಪಡೆಯುವ ಕಾರುಗಳು ಖರೀದಿಗೆ ಯೋಗ್ಯವಲ್ಲ ಎಂಬುವುದನ್ನು ಗ್ರಾಹಕರಿಗೆ ಮನವರಿಕೆ ಮಾಡಿ ಕೊಡುತ್ತವೆ. ಈ ಮೂಲಕ ವಾಹನ ತಯಾಕರು ಕೂಡಾ ಗರಿಷ್ಠ ಸುರಕ್ಷತೆ ಹೊಂದಿರುವ ಕಾರುಗಳ ಉತ್ಪಾದನೆಯತ್ತ ಹೆಚ್ಚಿನ ಆದ್ಯತೆ ನೀಡಲಿದ್ದು, ಅಪಘಾತಗಳಲ್ಲಿ ಪ್ರಾಣಹಾನಿ ಇಳಿಕೆಗೆ ಇದು ಸಾಕಷ್ಟು ಸಹಕಾರಿಯಾಗಲಿದೆ.

ಇದನ್ನೂ ಓದಿ: ನಾಲ್ಕು ಹೊಸ ಓಲಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಗಳು ಅನಾವರಣ

Bharat NCAP (2)

ಕೇಂದ್ರ ಸರ್ಕಾರದ ಭಾರತ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ ಅನ್ನು ಈಗಾಗಲೇ ಹಲವಾರು ಕಾರು ಉತ್ಪಾದನಾ ಕಂಪನಿಗಳು ಸ್ವಾಗತಿಸಿವೆ. ಭಾರತ್‌ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ ಪ್ರೋಟೋಕಾಲ್ ಅಂತಾರಾಷ್ಟ್ರೀಯ ಎನ್‌ಸಿಎಪಿ ರೇಟಿಂಗ್ ಏಜೆನ್ಸಿಗಳಿಗೆ ಅನುಗುಣವಾಗಿರಲಿದ್ದು, ಪರೀಕ್ಷಾ ವೇಗವನ್ನು ಪ್ರತಿ ಗಂಟೆಗೆ ಗರಿಷ್ಠ 64 ಕಿಮೀ ಗಳಿಗೆ ನಿಗದಿಪಡಿಸಲಾಗಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಸೀಟ್ ಬೆಲ್ಟ್ ರಿಮೈಂಡರ್‌ ಮತ್ತು ಪಾದಚಾರಿ ರಕ್ಷಣೆಯ ಫೀಚರ್ಸ್ ಗಳು ಹೊಸ ಕಾರುಗಳಿಗೆ ಹೆಚ್ಚಿನ ಸ್ಕೋರ್ ನೀಡಲಿವೆ. ಸದ್ಯಕ್ಕೆ ಹೊಸ ಸುರಕ್ಷಾ ಅಭಿಯಾನದಡಿ ಸಾಮಾನ್ಯ ಕಾರುಗಳಿಗೆ ಮಾತ್ರ ರೇಟಿಂಗ್ಸ್ ನೀಡಲಾಗುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಇವಿ ಕಾರುಗಳಿಗೂ ಹೊಸ ಸುರಕ್ಷಾ ಮಾನದಂಡ ಪರಿಚಯಿಸುವ ಸಿದ್ದತೆ ನಡೆದಿದೆ. ಇದರೊಂದಿಗೆ ಹೊಸ ಕಾರುಗಳಲ್ಲಿ ಇನ್ಮುಂದೆ ಹೆಚ್ಚಿನ ಸಂಖ್ಯೆಯ ಏರ್‌ಬ್ಯಾಗ್ ಗಳು ಸೇರಿದಂತೆ ಇತರೆ ಸುರಕ್ಷತಾ ವೈಶಿಷ್ಟ್ಯತೆಗಳು ವ್ಯಾಪಕವಾಗಿ ನೀಡುವ ನಿರೀಕ್ಷೆಯಿದ್ದು, ಅಪಘಾತಗಳಲ್ಲಿನ ಪ್ರಾಣಹಾನಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲಿದೆ.

Published On - 9:03 pm, Tue, 22 August 23

ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ