ಅಮೆರಿಕ ಸ್ಟಾಪ್ ಅಪ್ ಕಂಪನಿಯಾಗಿರುವ ಲುಸಿಡ್ ಮೋಟಾರ್ಸ್ (Lucid Motors) ಕಂಪನಿಯು ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ (Luxury Electric Cars) ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಹೊಚ್ಚ ಹೊಸ ಗ್ರ್ಯಾವಿಟಿ (Gravity) ಎಲೆಕ್ಟ್ರಿಕ್ ಎಸ್ ಯುವಿ ಅನಾವರಣಗೊಳಿಸಿದೆ. ಯುಎಸ್ ಮಾರುಕಟ್ಟೆಗಾಗಿ ಈಗಾಗಲೇ ಏರ್ ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆಗಾಗಿ ಸಿದ್ದವಾಗಿರುವ ಲುಸಿಡ್ ಕಂಪನಿಯು ಇದೀಗ ಹೊಸ ಎಲೆಕ್ಟ್ರಿಕ್ ಎಸ್ ಯುವಿ ಮೂಲಕ ಟೆಸ್ಲಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.
ಐಷಾರಾಮಿ ಎಸ್ ಯುವಿ ಕಾರುಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿರುವ ಅಮೆರಿಕದಲ್ಲಿ ಈಗಾಗಲೇ ಹಲವಾರು ಕಾರು ಕಂಪನಿಗಳು ತಮ್ಮ ಜನಪ್ರಿಯ ಎಸ್ ಯುವಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಲುಸಿಡ್ ಮೋಟಾರ್ಸ್ ಕಂಪನಿಯು ಸಹ ಗ್ರ್ಯಾವಿಟಿ ಇವಿ ಮೇಲೆ ಹೆಚ್ಚಿನ ನೀರಿಕ್ಷೆಯಿಟ್ಟುಕೊಂಡಿದೆ.
ಹೊಸ ಗ್ರ್ಯಾವಿಟಿ ಕಾರಿನಲ್ಲಿ ಲುಸಿಡ್ ಕಂಪನಿಯು 120kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿಚಾರ್ಜ್ ಗೆ ಗರಿಷ್ಠ 708 ಕಿ.ಮೀ ಮೈಲೇಜ್ ನೀಡಬಹುದಾಗಿದೆ. ಹಾಗೆಯೇ ಹೊಸ ಇವಿ ಕಾರು 350kW ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಹೊಂದಿದ್ದು, ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 15 ನಿಮಿಷಗಳ ಚಾರ್ಜಿಂಗ್ ಮೂಲಕ 320 ಕಿ.ಮೀ ತನಕ ಪ್ರಯಾಣಿಸಬಹುದಾಗಿದೆ. ಇದರೊಂದಿಗೆ ಇದು ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ಕೇವಲ 3.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಇದು ಪ್ರತಿ ಗಂಟೆಗೆ 230 ಕಿ.ಮೀ ಟಾಪ್ ಸ್ಪೀಡ್ ಸಾಧಿಸಬಲ್ಲದು.
ಇದನ್ನೂ ಓದಿ: ಅಪಘಾತಗಳನ್ನು ತಗ್ಗಿಸಲು ಇನ್ಮುಂದೆ ಈ ಸೇಫ್ಟಿ ಫೀಚರ್ಸ್ ಅಳವಡಿಕೆ ಕಡ್ಡಾಯ!
ಇದಲ್ಲದೆ 900-ವೋಲ್ಟ್ ಎಲೆಕ್ಟ್ರಿಕಲ್ ಆರ್ಕಿಟೆಕ್ಚರ್ ಮೇಲೆ ನಿರ್ಮಾಣವಾಗಿರುವ ಹೊಸ ಕಾರು ಮಾದರಿಯು ಏರ್ ಸೆಡಾನ್ ವಿನ್ಯಾಸದ ಥೀಮ್ ಅನ್ನು ಅನುಸರಿಸುವ ಮೂಲಕ ಸ್ಲಿಮ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಸಮತಲವಾದ ಗ್ರಿಲ್ ಪಡೆದುಕೊಂಡಿದೆ. ಜೊತೆಗೆ ಹೊಸ ಕಾರಿನ ಏರೋ ಡೈನಾಮಿಕ್ ಕೂಡಾ ಬ್ಯಾಟರಿ ದಕ್ಷತೆದೆ ಸಹಕಾರಿಯಾಗಿದ್ದು, 0.24Cd ಡ್ರ್ಯಾಗ್ ಗುಣಾಂಕವನ್ನು ನಿರ್ವಹಿಸುತ್ತದೆ ಎನ್ನಬಹುದು.
ಹೊಸ ಗ್ರ್ಯಾವಿಟಿ ಎಲೆಕ್ಟ್ರಿಕ್ ಕಾರಿನಲ್ಲಿ ಲುಸಿಡ್ ಕಂಪನಿಯು ಬಲಿಶಾಲಿ ಬ್ಯಾಟರಿ ಪ್ಯಾಕ್ ಜೊತೆಗೆ ಐಷಾರಾಮಿ ಸೌಲಭ್ಯಗಳಲ್ಲೂ ಗಮನಸೆಳೆಯಲಿದ್ದು, ಇದು 7 ಸೀಟರ್ ಸೌಲಭ್ಯದೊಂದಿಗೆ 34 ಇಂಚಿನ ಕರ್ವ್ಡ್ ಗ್ರ್ಯಾಸ್ ಒಎಲ್ಇಡಿ ಡಿಸ್ ಪ್ಲೇ, ಪೈಲೆಟ್ ಪ್ಯಾನೆಲ್, ಸುಲಭವಾಗಿ ನಿಯಂತ್ರಣ ಮಾಡಬಹುದಾದ ಸೆಂಟರ್ ಇನ್ಪೋಟೈನ್ ಮೆಂಟ್ ಸಿಸ್ಟಂ ನೀಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳು!
ಇನ್ನು ಲುಸಿಡ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಇವು ಸದ್ಯ ಯುಎಸ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳಲಿವೆ. ವಿಶ್ವಾದ್ಯಂತ ಇವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಲುಸಿಡ್ ಕಂಪನಿಯು ಸಹ ಶೀಘ್ರದಲ್ಲಿಯೇ ಸಾಗರೋತ್ತರ ಮಾರುಕಟ್ಟೆಗಳಿಗೂ ಲಗ್ಗೆಯಿಡಬಹುದಾದ ಸಾಧ್ಯತೆಗಳಿದ್ದು, ಇದು ಟೆಸ್ಲಾ ಕಾರುಗಳಿಗೆ ನೇರವಾಗಿ ಪೈಪೋಟಿ ನೀಡುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದೆ ಎನ್ನಬಹುದು.