Upcoming Cars: ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳು!

ಗ್ರಾಹಕರ ಬೇಡಿಕೆಯೆಂತೆ ಭಾರತದಲ್ಲಿ ಶೀಘ್ರದಲ್ಲಿಯೇ ಹಲವು ಹೊಸ ಕಾರು ಮಾದರಿಗಳು ಬಿಡುಗಡೆಗೆ ಸಿದ್ದಗೊಂಡಿದ್ದು, ವಿಶೇಷ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

Upcoming Cars: ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳು!
ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳು!
Follow us
|

Updated on: Nov 20, 2023 | 3:18 PM

ಹೊಸ ತಲೆಮಾರಿನ ವಾಹನಗಳ ಬೇಡಿಕೆ ಆಧರಿಸಿ ಕಾರು ಉತ್ಪಾದನಾ ಕಂಪನಿಗಳು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು (New Cars) ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರುಗಳು 2024ರ ಮೊದಲ ಮತ್ತು ದ್ವಿತಿಯ ತ್ರೈಮಾಸಿಕ ವೇಳೆಗೆ ಬಿಡುಗಡೆಯಾಗಬಹುದಾಗಿದೆ. ಹೀಗಾಗಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ನೀರಿಕ್ಷಿತ ಬಿಡುಗಡೆ ದಿನಾಂಕ, ತಾಂತ್ರಿಕ ಮಾಹಿತಿ ಮತ್ತು ಅಂದಾಜು ಬೆಲೆಯ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಕಂಪನಿಯು ಸ್ವಿಫ್ಟ್ ಕಾರಿನ ಹೊಸ ತಲೆಮಾರಿನ ಆವೃತ್ತಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಹೊಸ ಸ್ವಿಫ್ಟ್ ಮಾದರಿಯು ಹಲವಾರು ಬದಲಾವಣೆಗಳೊಂದಿಗೆ ನವೀಕೃತ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಈ ಬಾರಿ ಜೆಡ್ ಸೀರಿಸ್ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದ್ದು, ಇದು ಹೆಚ್ಚಿನ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್ ನಲ್ಲೂ ಗ್ರಾಹಕರನ್ನು ಸೆಳೆಯಲಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ ಇದು ಗರಿಷ್ಟ 40 ಕಿ.ಮೀ ಮೈಲೇಜ್ ಹಿಂದಿರುಗಿಸುವ ನೀರಿಕ್ಷೆಯಲ್ಲಿದ್ದು, ಇದರೊಂದಿಗೆ ಹೊಸ ಕಾರಿನಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗುತ್ತಿದೆ.

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಟಾಟಾ ಪಂಚ್ ಇವಿ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ಕೆಲವೇ ತಿಂಗಳಿನಲ್ಲಿ ಪಂಚ್ ಇವಿ ಬಿಡುಗಡೆ ಮಾಡಲಿದೆ. ಮೈಕ್ರೊ ಎಸ್ ಯುವಿ ವೈಶಿಷ್ಟ್ಯತೆಯ ಹೊಸ ಪಂಚ್ ಇವಿ ಕಾರು 350 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಳ್ಳಬಹುದಾಗಿದ್ದು, ಇದು ಬಜೆಟ್ ಬೆಲೆಯಲ್ಲಿ ಇವಿ ಕಾರು ಖರೀದಿದಾರರಿಗೆ ಉತ್ತಮ ಆಯ್ಕೆಯಾಗಲಿದೆ. ಹೊಸ ಪಂಚ್ ಇವಿ ಕಾರು ಸಾಮಾನ್ಯ ಕಾರಿಗಿಂತ ರೂ. 2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದ್ದು, ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಹೊಂದಿದೆ.

ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್

ಶೀಘ್ರದಲ್ಲಿಯೇ ಹ್ಯುಂಡೈ ಕ್ರೆಟಾ ಕಾರಿನ ಫೇಸ್‌ಲಿಫ್ಟ್ ಆವೃತ್ತಿ ಬಿಡುಗಡೆಯಾಗಲಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಜನಪ್ರಿಯ ಕಾರು ಮಾದರಿಯಾಗಿರುವ ಪಾಲಿಸೇಡ್ ಎಸ್‌ಯುವಿಯಿಂದ ಹಲವಾರು ವಿನ್ಯಾಸ ಅಂಶಗಳನ್ನು ಎರವಲು ಪಡೆದುಕೊಂಡಿದೆ. ಈ ಮೂಲಕ ಇದು ಭರ್ಜರಿ ಪರ್ಫಾಮೆನ್ಸ್ ಪ್ರೇರಿತ ಎಂಜಿನ್ ನೊಂದಿಗೆ ತಾಂತ್ರಿಕ ಅಂಶಗಳಲ್ಲೂ ಗಮನಸೆಳೆಯಲಿದೆ. ಹೊಸ ಆವೃತ್ತಿಯಲ್ಲಿ ಈ ಬಾರಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ಬದಲಾವಣೆಗಳನ್ನು ನೀಡಬಹುದಾಗಿದ್ದು, ಇದು 2024ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಥಾರ್ 5 ಡೋರ್ ವರ್ಷನ್

ಮಹೀಂದ್ರಾ ಕಂಪನಿ ತನ್ನ ಹೊಸ ತಲೆಮಾರಿನ ಎಸ್‌ಯುವಿ ಮಾದರಿಗಳ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಕಂಪನಿಯು ಥಾರ್ ಮಾದರಿಯಲ್ಲಿ ಹೊಸದಾಗಿ 5 ಡೋರ್ ವರ್ಷನ್ ಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಥಾರ್ ಕಾರು ಮಾದರಿಯು 3 ಡೋರ್ ವರ್ಷನ್ ನಲ್ಲಿ ಮಾತ್ರ ಮಾರಾಟಗೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಇದೀಗ 5 ಡೋರ್ ವರ್ಷನ್ ಸಹ ಅಭಿವೃದ್ದಿಪಡಿಸಲಾಗುತ್ತಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ಹೆಚ್ಚಿನ ವ್ಹೀಲ್ ಬೆಸ್ ನೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದ್ದು, ಕುಟುಂಬ ಸಮೇತರಾಗಿ ಪ್ರಯಾಣಿಸಲು ಅನುಕೂಲಕರವಾಗಲಿದೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಟಾಟಾ ಕರ್ವ್ ಇವಿ

ಟಾಟಾ ಮೋಟಾರ್ಸ್ ತನ್ನ ಹೊಸ ಕರ್ವ್ ಕಾನ್ಸೆಪ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಹೊಸ ಕಾರು ಮಾದರಿಯು ಕೂಪೆ ಎಸ್ ಯುವಿ ವೈಶಿಷ್ಟ್ಯತೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳು ನೀರಿಕ್ಷೆಯಲ್ಲಿದೆ. 2023ರ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕರ್ವ್ ಕಾನ್ಸೆಪ್ಟ್ ಕಾರು ಮೊದಲ ಹಂತದಲ್ಲಿ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಲಿದ್ದರೆ ತದನಂತರ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಬಿಡುಗಡೆಯಾಗಲಿದೆ. ಕರ್ವ್ ಇವಿ ಕಾರು ಮಾದರಿಯು ಪ್ರತಿ ಚಾರ್ಜ್ ಗೆ 400 ರಿಂದ 500 ಕಿ.ಮೀ ಮೈಲೇಜ್ ನೀಡಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದುಕೊಳ್ಳಬಹುದಾಗಿದೆ.

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ