ಆಲ್ ಟೆರೇನ್ ವೆಹಿಕಲ್(ಎಟಿವಿ) ಉತ್ಪಾದನಾ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಪೋಲಾರಿಸ್ ಕಂಪನಿಯು ಹೊಸ ಸ್ಲಿಂಗ್‌ಶಾಟ್ ಸೂಪರ್ ಬೈಕ್ ಮಾದರಿಯನ್ನ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಪ್ರಮುಖ ಅಂತರ್ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದೀಗ ಹೊಸ ಬೈಕ್ ಮಾದರಿಯು ಭಾರತಕ್ಕೂ ಕಾಲಿಟ್ಟಿದ್ದು, ಹೊಸ ಬೈಕ್ ಮಾದರಿಯು ರಸ್ತೆಯಲ್ಲಿ ಸಂಚರಿಸುವಾಗ ನೋಡುಗರಲ್ಲಿ ಕುತೂಲಹ ಹುಟ್ಟುಹಾಕಿದೆ.
ಮೊದಲ ನೋಟದಲ್ಲಿ ಸೂಪರ್ ಕಾರಿನಂತೆ ಕಾಣುವ ಹೊಸ ಸ್ಲಿಂಗ್‌ಶಾಟ್ ಬೈಕ್ ಮಾದರಿಯನ್ನ ರೈಡಿಂಗ್ ಉದ್ದೇಶಕ್ಕಾಗಿ ಭಾರತಕ್ಕೆ ತಾತ್ಕಾಲಿಕವಾಗಿ ಆಮದು ಮಾಡಿಕೊಳ್ಳಲಾಗಿದ್ದು, ಇದು ದುಬೈ ನೋಂದಣಿಯನ್ನ ಹೊಂದಿದೆ. ಅತ್ಯಂತ ವಿಶಿಷ್ಟವಾಗಿ ಕಾಣುವ ಈ ಸೂಪರ್ ಮೋಟಾರ್ ಸೈಕಲ್ ವಿನ್ಯಾಸವು ಜನರನ್ನ ಸೆಳೆಯುತ್ತಿದ್ದು, ಇದು ಸಂಭಾವ್ಯ ಗ್ರಾಹಕರನ್ನ ಸೆಳೆಯಲು ಸಹಕಾರಿಯಾಗಿದೆ.
ಸ್ಲಿಂಗ್‌ಶಾಟ್ ಬೈಕ್ ವಿಶೇಷತೆಗಳೇನು?
ಪೋರ್ಷೆ 911 ಸೂಪರ್ ಕಾರಿನಂತೆಯೇ ಮುಂಭಾಗದ ವಿನ್ಯಾಸ ಹೊಂದಿರುವ ಸ್ಲಿಂಗ್‌ಶಾಟ್ ಬೈಕ್ ಮಾದರಿಯು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಕ್ಲಾಮ್‌ಶೆಲ್ ಬಾನೆಟ್ ಅನ್ನು ಪಡೆದುಕೊಂಡಿದೆ. ಈ ಮೂಲಕ ಇದು ಹಿಂದಿನ ಚಕ್ರಗಳಿಗೆ ಶಕ್ತಿ ಪೂರೈಸಲಿದ್ದು, ಹೊಸ ಬೈಕಿನಲ್ಲಿ ಒಟ್ಟು ಮೂರು ಚಕ್ರಗಳನ್ನ ನೀಡಲಾಗಿದೆ. ಈ ಮೂಲಕ ಇದು 204 ಹಾರ್ಸ್ ಪವರ್ ಮತ್ತು 193 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಪ್ರತಿ ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು.
ಇನ್ನು ಹೊಸ ಬೈಕಿನ ಮುಂಭಾಗದಲ್ಲಿ ಎರಡು ಚಕ್ರಗಳನ್ನ ಮತ್ತು ಮುಂಭಾಗದಲ್ಲಿ ಒಂದು ಚಕ್ರವನ್ನ ನೀಡಲಾಗಿದ್ದು, ಸೀಟ್ ವಿನ್ಯಾಸವು ವಿಭಿನ್ನವಾಗಿದೆ. ಹೀಗಾಗಿ ಇದರಲ್ಲಿ ಇಬ್ಬರು ಅರಾಮವಾಗಿ ಕುಳಿತುಕೊಳ್ಳಬಹುದಾಗಿದ್ದು, ವಿವಿಧ ನಿಯಂತ್ರಣಗಳನ್ನು ಅಳವಡಿಸಲಾಗಿರುವ ಸ್ಟೀರಿಂಗ್ ಮೌಂಟೆಡ್ ಚಕ್ರವಿದೆ.
ಹಾಗೆಯೇ ಸೂಪರ್ ಕಾರಿನಂತೆಯೇ ಹಲವು ಪ್ರೀಮಿಯಂ ಫೀಚರ್ಸ್ ಹೊಂದಿರುವ ಸ್ಲಿಂಗ್‌ಶಾಟ್ ಬೈಕ್ ಮಾದರಿಯಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೋಲ್‌ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಕೀ ಲೆಸ್ ಎಂಟ್ರಿ ಮತ್ತು ಅತ್ಯುತ್ತಮ ಆಡಿಯೋ ಸೌಲಭ್ಯಕ್ಕಾಗಿ ಎಂಟು ಸ್ಪೀಕರ್‌ಗಳಿವೆ.
ಸ್ಲಿಂಗ್‌ಶಾಟ್ ಬೈಕ್ ಬೆಲೆ ಎಷ್ಟು?
ಸೂಪರ್ ಬೈಕ್ ಮಾದರಿಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನ ಹೊಂದಿರುವ ಸ್ಲಿಂಗ್‌ಶಾಟ್ ಬೆಲೆಯ ವಿಷಯಕ್ಕೆ ಬಂದರೆ ಇದು ಇತರೆ ಇತರೆ ಸೂಪರ್ ಬೈಕ್ ಮಾದರಿಗಿಂತಲೂ ತುಸು ದುಬಾರಿ ಎನ್ನಿಸಲಿದೆ. ಸದ್ಯಕ್ಕೆ ಇದು ಭಾರತದಲ್ಲಿ ಖರೀದಿಗೆ ಲಭ್ಯವಿಲ್ಲವಾದರೂ ವಿದೇಶಿ ಮಾರುಕಟ್ಟೆಯಲ್ಲಿರುವ ಸ್ಲಿಂಗ್‌ಶಾಟ್ ಬೆಲೆಯನ್ನ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ ರೂ. 1.40 ಕೋಟಿಯಿಂದ ರೂ. 1.80 ಕೋಟಿ ತನಕ ಬೆಲೆಯಿದೆ.