Ola Roadster: ಓಲಾ ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್, ರೋಡ್‌ಸ್ಟರ್ ಪ್ರೋ ಇವಿ ಬೈಕ್ ಬಿಡುಗಡೆ

|

Updated on: Aug 16, 2024 | 2:19 PM

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಚ್ಚ ಹೊಸ ರೋಡ್‌ಸ್ಟರ್ ಬೈಕ್ ಸರಣಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಬೈಕ್ ಮಾದರಿಗಳು ಆಕರ್ಷಕ ಬೆಲೆ ಜೊತೆಗೆ ಭರ್ಜರಿ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆಗಳನ್ನು ಪಡೆದುಕೊಂಡಿವೆ.

Ola Roadster: ಓಲಾ ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್, ರೋಡ್‌ಸ್ಟರ್ ಪ್ರೋ ಇವಿ ಬೈಕ್ ಬಿಡುಗಡೆ
ಓಲಾ ಎಲೆಕ್ಟ್ರಿಕ್ ಬೈಕ್ ಗಳು
Follow us on

ದೇಶದ ಅಗ್ರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನಾ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್ (Ola Electric) ತನ್ನ ಬಹುನೀರಿಕ್ಷಿತ ರೋಡ್‌ಸ್ಟರ್ ಇವಿ ಸರಣಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬ್ಯಾಟರಿ ರೇಂಜ್ ಆಧರಿಸಿ ರೋಡ್‌ಸ್ಟರ್ ಎಕ್ಸ್, ರೋಡ್‌ಸ್ಟರ್ ಮತ್ತು ರೋಡ್‌ಸ್ಟರ್ ಪ್ರೋ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇವು ಅತ್ಯಾಧುನಿಕ ತಂತ್ರಜ್ಞಾನ ಮತ್ತು ನವನವೀನ ವಿನ್ಯಾಸ ಹೊಂದಿವೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಬಿಡುಗಡೆ ಮಾಡಿರುವ ರೋಡ್‌ಸ್ಟರ್ ಎಕ್ಸ್ ಮತ್ತು ರೋಡ್‌ಸ್ಟರ್ ರೂಪಾಂತರಗಳು 2025ರ ಜನವರಿಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದ್ದು, ಹೈಎಂಡ್ ಮಾದರಿಯಾದ ರೋಡ್‌ಸ್ಟರ್ ಪ್ರೊ ರೂಪಾಂತರವು ಮುಂದಿನ ವರ್ಷದ ದೀಪಾವಳಿಗೆ ವಿತರಣೆ ಆರಂಭವಾಗಲಿದೆ.

ರೋಡ್‌ಸ್ಟರ್ ಎಕ್ಸ್ (Roadster X)

ಹೊಸ ರೋಡ್‌ಸ್ಟರ್ ಎಕ್ಸ್ ರೂಪಾಂತರವು ಓಲಾ ಎಲೆಕ್ಟ್ರಿಕ್ ಕಂಪನಿಯ ಆರಂಭಿಕ ಇವಿ ಬೈಕ್ ಮಾದರಿಯಾಗಿದ್ದು, ಇವು ವಿವಿಧ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 2.5 kWh ಬ್ಯಾಟರಿ ಪ್ಯಾಕ್ ಹೊಂದಿರುವ ರೂಪಾಂತರವು ಎಕ್ಸ್ ಶೋರೂಂ ಪ್ರಕಾರ ರೂ. 74,999 ಬೆಲೆ ಹೊಂದಿದ್ದರೆ, 3.5 kWh ಬ್ಯಾಟರಿ ಪ್ಯಾಕ್ ಹೊಂದಿರುವ ರೂಪಾಂತರವು ರೂ. 84,999 ಮತ್ತು 4.5 kWh ಬ್ಯಾಟರಿ ಪ್ಯಾಕ್ ಹೊಂದಿರುವ ರೂಪಾಂತರವು ರೂ. 99,999 ಬೆಲೆ ಹೊಂದಿದೆ.

ರೋಡ್‌ಸ್ಟರ್ ಎಕ್ಸ್

ಪ್ರತಿ ಚಾರ್ಜ್ ಗೆ ಗರಿಷ್ಠ 200 ಕಿ.ಮೀ ಮೈಲೇಜ್ ನೀಡಲಿರುವ ರೋಡ್‌ಸ್ಟರ್ ಎಕ್ಸ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 124 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಇದರಲ್ಲಿ ಪ್ರೀಮಿಯಂ ಫೀಚರ್ಸ್ ಗಳಾದ 4.3 ಇಂಚಿನ ಎಲ್ ಸಿಡಿ ಸ್ಕ್ರೀನ್, ರೈಡ್ ಗೆ ಸಹಕಾರಿಯಾಗುವ ಸ್ಪೋರ್ಟ್, ನಾರ್ಮಲ್ ಮತ್ತು ಇಕೋ ಡ್ರೈವ್ ಮೋಡ್ ಗಳನ್ನು ಪಡೆದುಕೊಂಡಿದೆ. ಜೊತೆಗೆ ಸುರಕ್ಷತೆಗಾಗಿ ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಜೊತೆಗೆ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರಲಿದೆ.

ರೋಡ್‌ಸ್ಟರ್ (Roadster)

ಮಧ್ಯಮ ಕ್ರಮಾಂಕದ ಇವಿ ಬೈಕ್ ಆವೃತ್ತಿಯಾಗಿರುವ ರೋಡ್‌ಸ್ಟರ್ ಕೂಡಾ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 3.5kWh, 4.5kWh ಮತ್ತು 6kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇವು ಎಕ್ಸ್ ಶೋರೂಂ ಪ್ರಕಾರ ರೂ. 1.05 ಲಕ್ಷಕ್ಕೆ, ರೂ. 1.20 ಲಕ್ಷಕ್ಕೆ ಮತ್ತು ರೂ. 1.40 ಲಕ್ಷ ಬೆಲೆ ಹೊಂದಿದ್ದು, ಇವು ಪ್ರತಿ ಚಾರ್ಜ್ ಗೆ ಗರಿಷ್ಠ 248 ಕಿ.ಮೀ ಮೈಲೇಜ್ ನೀಡಲಿವೆ. ಇದರೊಂದಿಗೆ ರೋಡ್‌ಸ್ಟರ್ ಮಾದರಿಯು ಪ್ರತಿ ಗಂಟೆಗೆ 126 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಲಾಗಿದೆ.

ರೋಡ್‌ಸ್ಟರ್

 

ರೋಡ್‌ಸ್ಟರ್ ಬೈಕ್ ಮಾದರಿಯಲ್ಲಿ ಹೈಪರ್, ಸ್ಪೋರ್ಟ್ಸ್, ನಾರ್ಮಲ್ ಮತ್ತು ಇಕೋ ರೈಡ್ ಮೋಡ್ ಗಳೊಂದಿಗೆ ಡಿಸ್ಕ್ ಬ್ರೇಕ್ಸ್, ಸಿಂಗಲ್ ಚಾನಲ್ ಎಬಿಎಸ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಪ್ರೊಕ್ಸಿಮಿಟಿ ಕಂಟ್ರೋಲ್ ಮತ್ತು ಸ್ಮಾರ್ಟ್ ಫೋನ್ ಮೂಲಕ ಕನೆಕ್ಟ್ ಮಾಡಬಹುದಾದ ತಂತ್ರಜ್ಞಾನ ಸೌಲಭ್ಯಗಳನ್ನು ನೀಡಲಾಗಿದೆ.

ರೋಡ್‌ಸ್ಟರ್ ಪ್ರೋ (Roadster Pro)

ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒಳಗೊಂಡಿರುವ ರೋಡ್‌ಸ್ಟರ್ ಪ್ರೋ ಮಾದರಿಯು 8kWh ಮತ್ತು 16kWh ಬ್ಯಾಟರಿ ಪ್ಯಾಕ್ ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ 8kWh ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 2 ಲಕ್ಷ ಮತ್ತು 16kWh ಬ್ಯಾಟರಿ ಪ್ಯಾಕ್ ಮಾದರಿಯು ರೂ. 2.50 ಲಕ್ಷ ಬೆಲೆ ಹೊಂದಿದೆ. ಇದು ಪ್ರತಿ ಚಾರ್ಜ್ ಗೆ ಗರಿಷ್ಠ 579 ಕಿ.ಮೀ ಮೈಲೇಜ್ ನೀಡಲಿದೆ. ಇದರೊಂದಿಗೆ ಪ್ರೋ ಮಾದರಿಯು ಪ್ರತಿ ಗಂಟೆಗೆ 194 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಇದರಲ್ಲೂಹೈಪರ್, ಸ್ಪೋರ್ಟ್ಸ್, ನಾರ್ಮಲ್ ಮತ್ತು ಇಕೋ ರೈಡ್ ಮೋಡ್ ಗಳಿರಲಿವೆ.

ರೋಡ್‌ಸ್ಟರ್ ಪ್ರೋ

ರೋಡ್‌ಸ್ಟರ್ ಪ್ರೋ ಮಾದರಿಯಲ್ಲಿ ಐಷಾರಾಮಿ ಅನುಭವಕ್ಕಾಗಿ ಓಲಾ ಕಂಪನಿಯು 10 ಇಂಚಿನ ಟಿಎಫ್ ಟಿ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಯುಎಸ್ ಡಿ ಫೋರ್ಕ್ಸ್, ಡ್ಯುಯಲ್ ಚಾನೆಲ್ ಎಬಿಎಸ್, ಕಾರ್ನರಿಂಗ್ ಎಬಿಎಸ್, ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ವ್ಹೀಲಿ ಅಂಡ್ ಸ್ಟಾಪಿ ಕಂಟ್ರೋಲ್ ಸೌಲಭ್ಯಗಳನ್ನು ನೀಡಿದೆ.