
ಹಳೆಯ ವಾಹನಗಳು ಇಡಿಯಾಗಿ ಮತ್ತು ಅವುಗಳ ಹಳತಾದ ಇಂಜಿನ್ಗಳು ಮಾಲಿನ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಡಿಸೆಂಬರ್ 2022 ರಲ್ಲಿ ರಾಜ್ಯ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಬಿಡುಗಡೆ ಮಾಡಿತು. ಆದಾಗ್ಯೂ, ಬೆಂಗಳೂರಿನಲ್ಲಿರುವ ಲಕ್ಷಗಟ್ಟಲೆ ವಾಹನಗಳು ಸ್ಕ್ರ್ಯಾಪಿಂಗ್ ವಿಲೇವಾರಿಗೆ ಅರ್ಹವಾಗಿದ್ದರೂ ಕೆಲವೇ ಸಾವಿರ ವಾಹನಗಳು ಮಾತ್ರ ಸ್ಕ್ರ್ಯಾಪ್ ಆಗಿವೆಯಷ್ಟೆ. ಮಾರ್ಚ್ 31, 2023 ರಂತೆ 15 ವರ್ಷಕ್ಕಿಂತ ಮೇಲ್ಪಟ್ಟ 91,58,577 ವಾಹನಗಳಲ್ಲಿ 33,00,558 ಕ್ಕೂ ಹೆಚ್ಚು ಹಳೆಯ ವಾಹನಗಳು ಬೆಂಗಳೂರು ನಗರದಲ್ಲಿವೆ. ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿಯು (Registered Vehicle Scrapping Policy of Karnataka 2022) ಅಯೋಗ್ಯ, ಮಾಲಿನ್ಯಕಾರಕ ವಾಹನಗಳನ್ನು ಹಂತಹಂತವಾಗಿ ಸಂಚಾರದಿಂದ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಅವುಗಳ ಜಾಗದಲ್ಲಿ ಸುರಕ್ಷಿತ, ಇಂಧನ-ಸಮರ್ಥ ವಾಹನಗಳಿಗೆ ಅವಕಾಶ ನೀಡಲಾಗುವುದು. Loading... ...
Published On - 10:36 am, Sat, 13 July 24