ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ ಜೊತೆ ಸೀರಿಸ್ 2ನಲ್ಲಿ ಅನಾವರಣಗೊಂಡ ರೋಲ್ಸ್ ರಾಯ್ಸ್ ಕಲಿನನ್

|

Updated on: May 10, 2024 | 6:39 PM

ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಕಲಿನನ್ ಸೂಪರ್ ಲಗ್ಷುರಿ ಎಸ್ ಯುವಿ ಆವೃತ್ತಿಯಲ್ಲಿ ಹೊಸದಾಗಿ ಸೀರಿಸ್ 2 ಸೇರಿದಂತೆ ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ ಅನಾವರಣಗೊಳಿಸಲಾಗಿದೆ.

ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ ಜೊತೆ ಸೀರಿಸ್ 2ನಲ್ಲಿ ಅನಾವರಣಗೊಂಡ ರೋಲ್ಸ್ ರಾಯ್ಸ್ ಕಲಿನನ್
ರೋಲ್ಸ್ ರಾಯ್ಸ್ ಕಲಿನನ್
Follow us on

ವಿನೂತನ ವೈಶಿಷ್ಟ್ಯತೆಯೊಂದಿಗೆ ಐಷಾರಾಮಿ ಸೌಲಭ್ಯ ಹೊಂದಿರುವ ಕಾರುಗಳ ಮೂಲಕ ಜಾಗತಿಕ ಮನ್ನಣೆ ಪಡೆದಿರುವ ರೋಲ್ಸ್ ರಾಯ್ಸ್ (Rolls-Royce) ಕಂಪನಿಯು ತನ್ನ ಕಲಿನನ್ (Cullinan) ಸೂಪರ್ ಲಗ್ಷುರಿ ಎಸ್ ಯುವಿ ಕಾರಿನಲ್ಲಿ ಹೊಸದಾಗಿ ಸೀರಿಸ್ 2 ಮತ್ತು ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ ಅನಾವರಣಗೊಳಿಸಿದೆ. ಹೊಸ ಆವೃತ್ತಿಗಳು ವಿಕಸಿತ ಗ್ರಾಹಕರ ಅಗತ್ಯತೆಗಳು ಮತ್ತು ಆದ್ಯತೆಗಳ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ನಿರ್ಮಾಣಗೊಂಡಿದ್ದು, ಇದೀಗ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿವೆ.

2018ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದ್ದ ಕಲಿನನ್ ಕಾರು ರೋಲ್ಸ್ ರಾಯ್ಸ್ ಕಂಪನಿ ಪರಿಚಯಿಸಿದ ವಿಶ್ವದ ಮೊದಲ ಸೂಪರ್ ಲಗ್ಷುರಿ ಎಸ್ ಯುವಿ ಮಾದರಿಯಾಗಿದ್ದು, ಇದು ಈಗಾಗಲೇ ಹಲವಾರು ವಿಶೇಷ ಆವೃತ್ತಿಗಳನ್ನು ಪಡೆದುಕೊಂಡಿದೆ. ಇದೀಗ ತನ್ನ ಪರಂಪರೆಯನ್ನು ಹೆಚ್ಚಿಸುವುದಕ್ಕಾಗಿ ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ ಜೊತೆ ಸೀರಿಸ್ 2 ಪರಿಚಯಿಸುತ್ತಿದ್ದು, ಇವು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ.

ಸೀರಿಸ್ 2 ಮಾದರಿಯಲ್ಲಿ ರೋಲ್ಸ್ ರಾಯ್ಸ್ ಕಂಪನಿಯು ಐಷಾರಾಮಿ ಒಳಾಂಗಣವನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಹೊಸದಾಗಿ ಸ್ವಿರಿಟ್ ಹೆಸರಿನ ಅಡ್ವಾನ್ಸ್ ಡಿಜಿಟಲ್ ಇಂಟರ್ಫೇಸ್ ಸೇರಿದಂತೆ ವಿಸ್ಪರ್ಸ್ ಎಂಬ ಖಾಸಗಿ ಅಪ್ಲಿಕೇಶನ್, ಸ್ಪಿರಿಟ್ ಆಫ್ ಎಕ್ಸ್‌ಟಸಿ ಪ್ರತಿಮೆಯನ್ನು ಪ್ರದರ್ಶಿಸುವ ವಿಶಿಷ್ಟವಾದ ಕ್ಲಾಕ್ ಕ್ಯಾಬಿನೆಟ್ ವಿಟ್ರಿನ್ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಜೊತೆಗೆ ಹೊಸ ಸೀರಿಸ್ 2 ಮಾದರಿಯಲ್ಲಿ ಆಧುನಿಕ ಕರಕುಶಲ ತಂತ್ರಗಳನ್ನು ಒಳಗೊಂಡಿರುವ ನವೀಕರಿಸಿದ ಆಂತರಿಕ ಪ್ಯಾಲೆಟ್ ಅನ್ನು ಹೊಂದಿದೆ. ಇದರಲ್ಲಿ ಡ್ಯುಯಾಲಿಟಿ ಟ್ವಿಲ್ ಆಸನದ ಪರಿಚಯವು ಗಮನಾರ್ಹವಾಗಿದ್ದು, ಹೊಸ ಪ್ಲೇಸ್ಡ್ ಪರ್ಫರೇಶನ್ ಸೀಟ್ ಪ್ಯಾಟರ್ನ್ ಮತ್ತಷ್ಟು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುತ್ತದೆ. ಇದರೊಂದಿಗೆ ರೋಲ್ಸ್ ರಾಯ್ಸ್ ಕಂಪನಿಯು ಹೊಸ ಕಲಿನನ್ ಕಾರಿನಲ್ಲಿ ಮತ್ತಷ್ಟು ಪರ್ಫಾಮೆನ್ಸ್ ಲುಕ್ ಬಯಸುವ ಗ್ರಾಹಕರಿಗಾಗಿ ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ ಪರಿಚಯಿಸಿದ್ದು, ಇದು ವಿಶಿಷ್ಟ ಆಕರ್ಷಣೆಯನ್ನು ಪಡೆದುಕೊಂಡಿದೆ.

ಬ್ಲ್ಯಾಕ್ ಬ್ಯಾಡ್ಜ್ ಆವೃತ್ತಿಯಲ್ಲಿ ಹೊಸದಾಗಿ ಡ್ಯುಯಾಲಿಟಿ ಟ್ವಿಲ್ ಆಸನಗಳು ಮತ್ತು 23 ಇಂಚಿನ ಚಕ್ರಗಳ ಆಯ್ಕೆಯನ್ನು ಹೊಂದಿದ್ದು, ಸೀರಿಸ್ 2 ಮಾದರಿಯಲ್ಲಿರುವಂತೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಆದರೆ ಸೀರಿಸ್ 2 ಮಾದರಿಗಿಂತಲೂ ಇದು ನೋಡಲು ರೋಮಾಂಚನಕಾರಿಯಾಗಿದ್ದು, ಇದು 600 ಹಾರ್ಸ್ ಪವರ್ ಮತ್ತು 900 ಎನ್ಎಂ ಟಾರ್ಕ್‌ ಉತ್ಪಾದನಾ ಸಾಮರ್ಥ್ಯದ 6.7 ಲೀಟರ್ ಎಲ್ ವಿ12 ಎಂಜಿನ್ ಪಡೆದುಕೊಂಡಿರಲಿದೆ.

ಇದನ್ನೂ ಓದಿ: ಕೋಟಿ ಬೆಲೆಯ ಪವರ್ ಫುಲ್ ಐಷಾರಾಮಿ ಕಾರು ಖರೀದಿಸಿದ ‘ಸಿಂಹಪ್ರಿಯಾ’ ಜೋಡಿ

ಇದು ಸದ್ಯ ಭಾರತದಲ್ಲಿ ವಿವಿಧ ವಿಶೇಷ ಆವೃತ್ತಿಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 6.95 ಕೋಟಿ ಬೆಲೆ ಹೊಂದಿದೆ. ಇದೀಗ ಅನಾವರಣಗೊಂಡಿರುವ ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ ಜೊತೆ ಸೀರಿಸ್ 2 ಮಾದರಿಗಳು ತುಸು ದುಬಾರಿಯಾಗಿರಲಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

Published On - 6:35 pm, Fri, 10 May 24