Toyota Innova Crysta: ಇನೋವಾ ಕ್ರಿಸ್ಟಾದಲ್ಲಿ ಮತ್ತೆ ಡೀಸೆಲ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ!

|

Updated on: Dec 05, 2022 | 8:45 PM

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಟೊಯೊಟಾ ಕಂಪನಿ ಮುಂಚೂಣಿಯಲ್ಲಿದ್ದು, ಕಂಪನಿಯು ಶೀಘ್ರದಲ್ಲಿಯೇ ತನ್ನ ನೆಚ್ಚಿನ ಗ್ರಾಹಕರಿಗೆ ಮತ್ತೊಂದು ಹೊಸ ಕಾರು ಉತ್ಪನ್ನ ಪರಿಚಯಿಸಿರುವ ಸುಳಿವು ನೀಡಿದೆ. ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದ ಇನೋವಾ ಕ್ರಿಸ್ಟಾ ಕಾರನ್ನು ಶೀಘ್ರದಲ್ಲಿಯೇ ಹೊಸ ಬದಲಾವಣೆಯೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

Toyota Innova Crysta: ಇನೋವಾ ಕ್ರಿಸ್ಟಾದಲ್ಲಿ ಮತ್ತೆ ಡೀಸೆಲ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ!
ಇನೋವಾ ಕ್ರಿಸ್ಟಾದಲ್ಲಿ ಮತ್ತೆ ಡೀಸೆಲ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ!
Follow us on

ಟೊಯೊಟಾ(Toyota) ಕಂಪನಿಯು ಹಳೆಯ ತಲೆಮಾರಿನ ಇನೋವಾ ಕ್ರಿಸ್ಟಾ(Innova Crysta) ಮಾದರಿಯನ್ನು ಹೊಸ ಬದಲಾವಣೆಗಳೊಂದಿಗೆ ಮತ್ತೆ ಪರಿಚಯಿಸುವ ಸುಳಿವು ನೀಡಿದೆ. ಹೊಸ ಇನೋವಾ ಹೈಕ್ರಾಸ್ ಜೊತೆಗೆ ಇನೋವಾ ಕ್ರಿಸ್ಟಾ ಮಾರಾಟವನ್ನು ಮುಂದುವರಿಸಲು ಮುಂದಾಗಿರುವ ಟೊಯೊಟಾ ಕಂಪನಿಯು ಹೊಸ ಕಾರು ಮಾದರಿಯಲ್ಲಿ ಈ ಹಿಂದಿನ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಜೊತೆಗೆ ಸಿಎನ್ ಜಿ ವರ್ಷನ್ ಪರಿಚಯಿಸುತ್ತಿದೆ. ಕಳೆದ ಫೆಬ್ರವರಿಯಿಂದ ಇನೋವಾ ಕ್ರಿಸ್ಟಾದಲ್ಲಿ ಡೀಸೆಲ್ ವರ್ಷನ್ ಮಾರಾಟ ಬಂದ್ ಮಾಡಿದ್ದ ಟೊಯೊಟಾ ಕಂಪನಿ ಇದೀಗ ಹೊಸ ಬದಲಾವಣೆಯೊಂದಿಗೆ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್ ಜಿ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಟೊಯೊಟಾ ಕಂಪನಿಯು ಕಳೆದ ತಿಂಗಳು ಅನಾವರಣಗೊಳಿಸಿದ ಇನೋವಾ ಹೈಕ್ರಾಸ್ ಮಾದರಿಯಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ ಹಳೆಯ ತಲೆಮಾರಿನ ಇನೋವಾ ಕ್ರಿಸ್ಟಾದಲ್ಲಿ ಈ ಹಿಂದಿನ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಡೀಸೆಲ್ ಮತ್ತು ಸಿಎನ್ ಜಿ ಮಾದರಿಗಳನ್ನು ಪರಿಚಯಿಸಬಹುದಾಗಿದೆ. ಮುಂಬರುವ ಜನವರಿ ವೇಳೆಗೆ ಹೊಸ ಇನೋವಾ ಕ್ರಿಸ್ಟಾ ಬಿಡುಗಡೆಯಾಗಬಹುದಾಗಿದ್ದು, ಶೀಘ್ರದಲ್ಲಿಯೇ ಬುಕಿಂಗ್ ಆರಂಭಿಸಲಾಗುತ್ತಿದೆ. ಆದರೆ ಹೊಸ ಇನೋವಾ ಕ್ರಿಸ್ಟಾದಲ್ಲಿ ಕಂಪನಿಯು ಪೆಟ್ರೋಲ್ ಮತ್ತು ಸಿಎನ್ ಜಿ ಮಾದರಿಗಳ ಹೊರತಾಗಿ ಡೀಸೆಲ್ ಎಂಜಿನ್ ಪರಿಚಯಿಸುವ ಕುರಿತಾಗಿ ಇನ್ನೂ ಕೂಡಾ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಮಾಹಿತಿಗಳ ಪ್ರಕಾರ, ಇನೋವಾ ಕ್ರಿಸ್ಟಾ ಪ್ರಸ್ತುತ ಮಾರುಕಟ್ಟೆಯಲ್ಲಿನ 2.7 ಲೀಟರ್ ಪೆಟ್ರೋಲ್ ಮತ್ತು 2.4 ಡೀಸೆಲ್ ಎಂಜಿನ್ ಗಳಲ್ಲಿ ಮರು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಇದರಲ್ಲಿ 2.7 ಲೀಟರ್ ಪೆಟ್ರೋಲ್ ಮಾದರಿಯು ಸಿಎನ್ ಜಿ ಕಿಟ್ ಜೋಡಣೆ ಹೊಂದಿರಲಿದ್ದು, ಡೀಸೆಲ್ ಎಂಜಿನ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ. 2023ರ ಎಪ್ರಿಲ್ 1ರಿಂದ ರಿಯಲ್ ಡ್ರೈವಿಂಗ್ ಎಮಿಷನ್ ಜಾರಿಗೆ ಬರುತ್ತಿದರಿಂದ ಹೊಸ ಕಾರಿನಲ್ಲಿ ಭಾರೀ ಬದಲಾವಣೆ ತರಲಾಗುತ್ತಿದೆ. ಹೊಸ ಎಮಿಷನ್ ನಿಯಮದಿಂದಾಗಿ ಡೀಸೆಲ್ ಕಾರು ಕಾರ್ಯಕ್ಷಮತೆ ಮತ್ತು ಮೈಲೇಜ್ ಮತ್ತಷ್ಟು ಹೆಚ್ಚಳವಾಗಲಿದ್ದು, ಬೆಲೆಯಲ್ಲೂ ಕೂಡಾ ತುಸು ದುಬಾರಿಯಾಗಲಿದೆ.

ಹೊಸ ಎಮಿಷನ್ ನಿಯಮ ಜಾರಿಯಾಗುತ್ತಿರುವ ಹಿನ್ನಲೆಯಲ್ಲಿ ಡೀಸೆಲ್ ಕಾರುಗಳ ಮಾರಾಟ ಮತ್ತಷ್ಟು ದುಬಾರಿಯಾಗಲಿದೆ. ಇದೇ ಕಾರಣಕ್ಕೆ ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಡೀಸೆಲ್ ಮಾರಾಟವನ್ನು ಬಂದ್ ಮಾಡಿತ್ತು. ಆದರೆ ಗ್ರಾಹಕರಿಂದ ಹೆಚ್ಚಿರುವ ಬೇಡಿಕೆಯಿಂದಾಗಿ ತನ್ನ ಯೋಜನೆಯನ್ನು ಬದಲಿಸಿರುವ ಟೊಯೊಟಾ ಕಂಪನಿಯು ಇದೀಗ ಹೊಸ ನಿಯಮಗಳನ್ನು ಒಳಗೊಂಡಿರುವ ಡೀಸೆಲ್ ಮಾದರಿಯನ್ನು ಪರಿಚಯಿಸಲು ಮುಂದಾಗಿದ್ದು, ತುಸು ದುಬಾರಿ ಎನ್ನಿಸಲಿದೆ. ಇದರಲ್ಲಿ ಪೆಟ್ರೋಲ್ ಮಾದರಿಯು ಈ ಹಿಂದಿನಂತೆ 2.7 ಲೀಟರ್ ಎಂಜಿನ್ ನೊಂದಿಗೆ ಮಾರಾಟ ಮುಂದುವರಿಯಲಿದೆ.

ಇನ್ನು ಹೊಸ ಇನೋವಾ ಕ್ರಿಸ್ಟಾ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯ ಜೊತೆ ಸಿಎನ್ ಜಿ ವರ್ಷನ್ ಕೂಡಾ ಸದ್ದು ಮಾಡಲಿದೆ. ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಕಂಪನಿಗಳು ಸಿಎನ್ ಜಿ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಟೊಯೊಟಾ ಕಂಪನಿಯು ಕೂಡಾ ಮಾರುತಿ ಸುಜುಕಿ ಜೊತೆಗೂಡಿ ಹೊಸ ಮಾದರಿ ಪರಿಚಯಿಸುತ್ತಿದೆ. ಸಿಎನ್ ಜಿ ಮಾದರಿಯು ಅತ್ಯುತ್ತಮ ಮೈಲೇಜ್ ಹೊಂದಿರಲಿದ್ದು, ತುಸು ಕಡಿಮೆ ಎಂಜಿನ್ ಕಾರ್ಯಕ್ಷಮತೆ ಹೊಂದಿದ್ದರೂ ಮೈಲೇಜ್ ವಿಚಾರದಲ್ಲಿ ಗಮನಸೆಳೆಯಲಿದೆ. ಆದರೆ ಹೊಸ ಇನೋವಾ ಕ್ರಿಸ್ಟಾ ಡೀಸೆಲ್ ಮಾದರಿಯು ಈ ಹಿಂದಿನ ಮಾದರಿಗಿಂತಲೂ ತುಸು ದುಬಾರಿಯಾಗಲಿದ್ದು, ದುಬಾರಿ ಬೆಲೆ ನಡುವೆಯೂ ಡೀಸೆಲ್ ಎಂಜಿನ್ ಖರೀದಿ ಬಯಸುವ ಗ್ರಾಹಕರಿಗೆ ಟೊಯೊಟಾ ಮತ್ತೊಂದು ಅವಕಾಶ ನೀಡುತ್ತಿದೆ.

Published On - 5:54 pm, Mon, 5 December 22