ಹೊಸ ಫೀಚರ್ಸ್ ಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಜಿಎಕ್ಸ್ ಪ್ಲಸ್ ವೆರಿಯೆಂಟ್ ಬಿಡುಗಡೆ

|

Updated on: May 07, 2024 | 2:16 PM

ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಇನೋವಾ ಕ್ರಿಸ್ಟಾ ಕಾರಿನಲ್ಲಿ ಹೊಸದಾಗಿ ಜಿಎಕ್ಸ್ ಪ್ಲಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ನೀಡಲಾಗಿದೆ.

ಹೊಸ ಫೀಚರ್ಸ್ ಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ ಜಿಎಕ್ಸ್ ಪ್ಲಸ್ ವೆರಿಯೆಂಟ್ ಬಿಡುಗಡೆ
ಟೊಯೊಟಾ ಇನೋವಾ ಕ್ರಿಸ್ಟಾ ಜಿಎಕ್ಸ್ ಪ್ಲಸ್ ವೆರಿಯೆಂಟ್
Follow us on

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ (Toyota) ಕಂಪನಿಯು ಇನೋವಾ ಕ್ರಿಸ್ಟಾ (Innova Crysta) ಕಾರಿನಲ್ಲಿ ಹೊಸದಾಗಿ ಜಿಎಕ್ಸ್ ಪ್ಲಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 21.39 ಲಕ್ಷ ಬೆಲೆ ಹೊಂದಿದೆ. ಜಿಎಕ್ಸ್ ಪ್ಲಸ್ ಹೊಸ ವೆರಿಯೆಂಟ್ ಈ ಹಿಂದಿನ ಜಿಎಕ್ಸ್ ಮತ್ತು ವಿಎಕ್ಸ್ ವೆರಿಯೆಂಟ್ ಗಳ ಸ್ಥಾನ ಪಡೆದುಕೊಂಡಿದ್ದು, ಹೊಸ ಕಾರಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಹೊಸ ಜಿಎಕ್ಸ್ ಪ್ಲಸ್ ವೆರಿಯೆಂಟ್ ನಲ್ಲಿ ಈ ಹಿಂದಿನ ಫೀಚರ್ಸ್ ಗಳೊಂದಿಗೆ ಹೊಸದಾಗಿ ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್, ಆಟೋ ಫೋಡ್ ಮಿರರ್, ರಿಯರ್ ಕ್ಯಾಮೆರಾ ಮತ್ತು ಕಾರಿನ ಒಳಭಾಗದಲ್ಲಿ ಡ್ಯಾಶ್ ಕ್ಯಾಮ್, ವುಡನ್ ಪ್ಯಾನೆಲ್ ಮತ್ತು ಪ್ರೀಮಿಯಂ ಆಗಿಯೋ ಫ್ರ್ಯಾಬಿಕ್ ಆಸನಗಳನ್ನು ಹೊಂದಿದೆ. ಜೊತೆಗೆ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮತ್ತು 8 ಸೀಟರ್ ಸೌಲಭ್ಯಗಳನ್ನು ಹೊಂದಿದ್ದು, ಇದು ಸಾಮಾನ್ಯ ಜಿಎಕ್ಸ್ ವೆರಿಯೆಂಟ್ ಗಿಂತಲೂ ರೂ. 1.45 ಲಕ್ಷದಷ್ಟು ದುಬಾರಿ ಎನ್ನಿಸಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಕಾರು ಮಾದರಿಯು ಜಿಎಕ್ಸ್, ಜಿಎಕ್ಸ್ ಪ್ಲಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ರೂ. 19.99 ಲಕ್ಷ ಬೆಲೆಯಿಂದ ರೂ. 26.30 ಲಕ್ಷ ಬೆಲೆ ಹೊಂದಿದೆ. ಇನೋವಾ ಕ್ರಿಸ್ಟಾದಲ್ಲಿ 2.4 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾತ್ರ ಲಭ್ಯವಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 150 ಹಾರ್ಸ್ ಪವರ್ ಮತ್ತು 343 ಎನ್ಎಂ ಟಾರ್ಕ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಫೀಚರ್ಸ್ ಹೊಂದಿರುವ ಇನೋವಾ ಕ್ರಿಸ್ಟಾ ಖರೀದಿಗೆ ಹೊಸ ವೆರಿಯೆಂಟ್ ಸಾಕಷ್ಟು ಸಹಕಾರಿಯಾಗಿದ್ದು, ಇನೋವಾದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಯನ್ನು ಖರೀದಿ ಬಯಸುವ ಗ್ರಾಹಕರು ಇನೋವಾ ಹೈಕ್ರಾಸ್ ಮಾದರಿಯನ್ನು ಖರೀದಿಸಬಹುದಾಗಿದೆ. ಇದು ಕೂಡಾ ಹಲವಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇನೋವಾ ಹೈಕ್ರಾಸ್ ಮಾದರಿಯು ಇನೋವಾ ಕ್ರಿಸ್ಟಾಗಿಂತಲೂ ತುಸು ದುಬಾರಿಯಾಗಿದೆ.