Toyota Innova Hycross: ಟೊಯೊಟಾ ಇನೋವಾ ಹೈಕ್ರಾಸ್ ನಲ್ಲಿ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆ

|

Updated on: Apr 16, 2024 | 5:11 PM

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಇನೋವಾ ಹೈಕ್ರಾಸ್ ಎಂಪಿವಿ ಆವೃತ್ತಿಯಲ್ಲಿ ಹೊಸದಾಗಿ ಜಿಎಕ್ಸ್(ಒ) ವೆರಿಯೆಂಟ್ ಬಿಡುಗಡೆ ಮಾಡಿದೆ.

Toyota Innova Hycross: ಟೊಯೊಟಾ ಇನೋವಾ ಹೈಕ್ರಾಸ್ ನಲ್ಲಿ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆ
ಟೊಯೊಟಾ ಇನೋವಾ ಹೈಕ್ರಾಸ್
Follow us on

ಪ್ರೀಮಿಯಂ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಇಂಡಿಯಾ(Toyota India)  ಕಂಪನಿಯು ಇನೋವಾ ಹೈಕ್ರಾಸ್ (Innova Hycross)  ಎಂಪಿವಿ ಆವೃತ್ತಿಯಲ್ಲಿ ಹೊಸದಾಗಿ ಜಿಎಕ್ಸ್(ಒ) ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 20.99 ಲಕ್ಷ ಬೆಲೆ ಹೊಂದಿದೆ. ಹೊಸ ವೆರಿಯೆಂಟ್ ಈ ಹಿಂದಿನ ಜಿಎಕ್ಸ್ ವೆರಿಯೆಂಟ್ ಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದ್ದು, ಇದು ಸುಮಾರು ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ಹೊಸದಾಗಿ  ಬಿಡುಗಡೆಯಾಗಿರುವ ಜಿಎಕ್ಸ್(ಒ) ವೆರಿಯೆಂಟ್ ಇನೋವಾ ಹೈಕ್ರಾಸ್ ಕಾರಿನ ಪೆಟ್ರೋಲ್ ಆವೃತ್ತಿಯ ಟಾಪ್ ಎಂಡ್ ವೆರಿಯೆಂಟ್ ಆಗಿ ಮಾರಾಟಗೊಳ್ಳಲಿದ್ದು, ಇದು ಸಾಮಾನ್ಯ ಜಿಎಕ್ಸ್ ವೆರಿಯೆಂಟ್ ಗಿಂತಲೂ ಹೆಚ್ಚು ಪ್ರೀಮಿಯಂ ಆಗಿರಲಿದೆ. ಹೊಸ ವೆರಿಯೆಂಟ್ ನಲ್ಲಿ ಟೊಯೊಟಾ ಕಂಪನಿಯು ಜಿಎಕ್ಸ್ ವೆರಿಯೆಂಟ್ ನಲ್ಲಿರುವ ವಿವಿಧ ಫೀಚರ್ಸ್ ಗಳೊಂದಿಗೆ ಹೆಚ್ಚುವರಿಯಾಗಿ ಫ್ರಂಟ್ ಪಾರ್ಕಿಂಗ್ ಸೆನ್ಸಾರ್, 360 ಡಿಗ್ರಿ ಕ್ಯಾಮೆರಾ ಮತ್ತು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ ಪಡೆದುಕೊಂಡಿದೆ.

ಜೊತೆಗೆ ಹೊಸ ವೆರಿಯೆಂಟ್ ನಲ್ಲಿ ಫ್ರಂಟ್ ಎಲ್ಇಡಿ ಫಾಗ್ ಲೈಟ್ಸ್, ರಿಯರ್ ಡಿಫಾಗರ್ ಸೇರಿದಂತೆ ಒಳಭಾಗದಲ್ಲಿ ಸಾಫ್ಟ್ ಟಚ್ ಡ್ಯಾಶ್ ಬೋರ್ಡ್, ಡೋರ್ಸ್, 10.1 ಇಂಚಿನ ಇನ್ಪೋಟೈನ್ ಮೆಂಟ್ ಟಚ್ ಸ್ಕ್ರೀನ್, ವೈಯರ್ ಲೆಸ್ ಆ್ಯಪಲ್ ಕಾರ್ ಪ್ಲೇ ಮತ್ತು ಅರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಫ್ರ್ಯಾಬಿಕ್ ಸೀಟ್ ಕವರ್ ಗಳನ್ನು ನೀಡಲಾಗಿದೆ.

ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!

ಇನ್ನು ಪ್ರೀಮಿಯಂ ಎಂಪಿವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಇನೋವಾ ಹೈಕ್ರಾಸ್ ಕಾರು ಹೊಸ ಆವೃತ್ತಿ ಜೊತೆ ವಿವಿಧ ವೆರಿಯೆಂಟ್ ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಇವು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 19.77 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 30.98 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಜಿ, ಜಿಎಕ್ಸ್, ಜಿಎಕ್ಸ್(ಒ), ವಿಎಕ್ಸ್, ಜೆಡ್ಎಕ್ಸ್ ಮತ್ತು ಜೆಡ್ಎಕ್ಸ್(ಒ) ವೆರಿಯೆಂಟ್ ಗಳನ್ನು ಹೊಂದಿದ್ದು, ಇವು ಪೆಟ್ರೋಲ್ ಮತ್ತು ಹೈಬ್ರಿಡ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿವೆ.

ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಇನೋವಾ ಹೈಕ್ರಾಸ್ ಹೊಸ ಕಾರು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿನೂತನ ವಿನ್ಯಾಸದ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಹೊಸ ಕಾರು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ಎಂಜಿನ್ ಆಯ್ಕೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಎಂಪಿವಿ ಕಾರು ಮಾರಾಟದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಯು ಪ್ರಮುಖ ಎಡರು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 2.0 ಲೀಟರ್ ಸಾಮಾನ್ಯ ಪೆಟ್ರೋಲ್ ಜೊತೆಗೆ 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 2.0 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 172 ಹಾರ್ಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಹೈಬ್ರಿಡ್ ಮಾದರಿಯು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 150 ಹಾರ್ಸ್ ಪವರ್, 187 ಎನ್ಎಂ ಟಾರ್ಕ್‌ ಉತ್ಪಾದಿಸುತ್ತದೆ. ಹಾಗೆಯೇ ಹೊಸ ಕಾರು ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಸೆಲ್ಪ್ ಡ್ರೈವ್ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 21 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಈ ಮೂಲಕ ಹೊಸ ಕಾರು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಸಂಪೂರ್ಣ ಪೆಟ್ರೋಲ್ ಟ್ಯಾಂಕ್ ನೊಂದಿಗೆ ಒಂದು ಬಾರಿಗೆ 1,097 ಕಿ.ಮೀ ಸಂಚರಿಸುತ್ತದೆ.

Published On - 5:04 pm, Tue, 16 April 24