ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್(TVS Motor) ಕಂಪನಿಯು ತನ್ನ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 310(Apache RTR 310) ಸ್ಟ್ರೀಟ್ ಫೈಟರ್ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.43 ಲಕ್ಷ ಬೆಲೆ ಹೊಂದಿದೆ.
ಅಪಾಚೆ ಬೈಕ್ ಸರಣಿಯೊಂದಿಗೆ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಟಿವಿಎಸ್ ಮೋಟಾರ್ ಕಂಪನಿ ಇದೀಗ ಗ್ರಾಹಕರ ಬೇಡಿಕೆ ಆಧರಿಸಿ ಅಪಾಚೆ ಆರ್‌ಟಿಆರ್ 310 ಸ್ಟ್ರೀಟ್ ಫೈಟರ್ ಬೈಕ್ ಬಿಡುಗಡೆ ಮಾಡಿದ್ದು, ಇದು ಸ್ಪೋರ್ಟ್ ಆವೃತ್ತಿಯಾಗಿರುವ ಅಪಾಚೆ ಆರ್‌ಆರ್ 310 ಬೈಕ್ ಮಾದರಿಗಿಂತಲೂ ರೂ. 29 ಸಾವಿರ ಕಡಿಮೆ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಿದೆ.
ಎಂಜಿನ್ ಮತ್ತು ಕಾರ್ಯಕ್ಷಮತೆ
ಟಿವಿಎಸ್ ಮತ್ತು ಬಿಎಂಡಬ್ಲ್ಯು ಸಹಭಾಗಿತ್ವದಲ್ಲಿ ಅಭಿವೃದ್ದಿಗೊಂಡಿರುವ ಹೊಸ ಅಪಾಚೆ ಆರ್‌ಟಿಆರ್ 310 ಬೈಕ್ ಮಾದರಿಯಲ್ಲಿ ಅಪಾಚೆ ಆರ್‌ಆರ್ 310 ಬೈಕ್ ನಲ್ಲಿರುವಂತೆ 312 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ ಸ್ಲಿಪ್ಪರ್ ಕ್ಲಚ್ ಅಸಿಸ್ಟ್ ಸೌಲಭ್ಯದೊಂದಿಗೆ 35.6 ಹಾರ್ಸ್ ಪವರ್ ಮತ್ತು 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಹೊಸ ಬೈಕ್ ಮಾದರಿಯು ವಿಶೇಷವಾಗಿ ಪರ್ಫಾಮೆನ್ಸ್ ಪ್ರಿಯರಿಗಾಗಿ ನಿರ್ಮಾಣವಾಗಿದ್ದು, ಇದು ಕೇವಲ 2.81 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 60 ಕಿ.ಮೀ ವೇಗಪಡೆದುಕೊಳ್ಳುತ್ತದೆ. ಹಾಗೆಯೇ ಹೊಸ ಪ್ರತಿ ಗಂಟೆಗೆ 150 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಇದರಲ್ಲಿ ಐದು ಹೊಸ ರೈಡಿಂಗ್ ಮೋಡ್ ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಯುವಕರ ಹಾಟ್ ಫೇವರಿಟ್ ಹೀರೋ ಕರಿಜ್ಮಾ ಎಕ್ಸ್ಎಂಆರ್ ಬಿಡುಗಡೆ
ಉತ್ಪಾದನಾ ಪ್ಲ್ಯಾಟ್ ಫಾರ್ಮ್
ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹಗುರವಾದ ಅಲ್ಯುನಿಯಂ ಟ್ರೆಲ್ಲಿಸ್ ಫ್ರೆಮ್ ಮೇಲೆ ಅಪಾಚೆ ಆರ್‌ಟಿಆರ್ 310 ಬೈಕ್ ನಿರ್ಮಾಣಗೊಂಡಿದ್ದು, ಇದು ಸ್ಪೋರ್ಟಿ ವಿನ್ಯಾಸದೊಂದಿಗೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಹೊಸ ಬೈಕಿನ ಮುಂಭಾದಲ್ಲಿ ಶೇಕಡಾ 30ರಷ್ಟು ಕಂಪ್ರೆಷನ್ ಮತ್ತು ರೀಬೌಂಡ್ ಡ್ಯಾಂಪಿಂಗ್ ಹೊಂದಿರುವ ಯುಎಸ್ ಡಿ ಪೋರ್ಕ್ಸ್ ನೀಡಲಾಗಿದ್ದರೆ, ಹಿಂಬದಿಯಲ್ಲೂ ಶೇ. 30 ರಷ್ಟು ಪ್ರಿ ಲೋಡ್ ಹೊಂದಿರುವ ರೀಬೌಂಡ್ ಡ್ಯಾಂಪಿಂಗ್‌ನೊಂದಿಗೆ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ನೀಡಲಾಗಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ 17 ಇಂಚಿನ ಚಕ್ರಗಳನ್ನು ಜೋಡಣೆ ಮಾಡಲಾಗಿದ್ದು, ಎರಡು ಬದಿಯಲ್ಲೂ ಡ್ಯುಯಲ್ ಕಂಪೌಂಡ್ ರೆಡಿಯಲ್ ಟೈರ್ ಹೊಂದಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
ಶಾರ್ಪ್ ಮತ್ತು ಸ್ಪೋರ್ಟಿ ಡಿಸೈನ್ ಹೊಂದಿರುವ ಅಪಾಚೆ ಆರ್‌ಟಿಆರ್ 310 ಬೈಕ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಡೈನಾಮಿಕ್ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್ಸ್ ಹಾಗೂ ಎಲ್ಇಡಿ ಡಿಆರ್ ಎಲ್, ಕ್ರೂಸ್ ಕಂಟ್ರೊಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಬಿ-ಡೈರಕ್ಷನಲ್ ಕ್ವಿಕ್ ಶಿಫ್ಟರ್, ಕೂಲಿಂಗ್ ಹೊಂದಿರುವ ವಿಭಜಿತ ಆಸನಗಳನ್ನು ಹೊಂದಿದೆ. ಹಾಗೆಯೇ ಅಗಲವಾದ ಹ್ಯಾಂಡಲ್ ಬಾರ್, ಮಸ್ಕ್ಯೂಲರ್ ಪ್ಯೂಯೆಲ್ ಟ್ಯಾಂಕ್, ರೇಸ್ ಟ್ಯೂನ್ ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಲೈನರ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೇರಿದಂತೆ ಹಲವಾರು ತಾಂತ್ರಿಕ ಸೌಲಭ್ಯಗಳಿವೆ.
ಹೊಸ ಬೈಕಿನಲ್ಲಿ ಕೆನೆಕ್ಟಿವಿಟಿ ಸೌಲಭ್ಯಕ್ಕಾಗಿ ವಿವಿಧ ಮಾಹಿತಿಗಳನ್ನು ಒಳಗೊಂಡ ಟಿವಿಎಸ್ ಸ್ಮಾರ್ಟ್ಎಕ್ಸ್ ಕೆನೆಕ್ಟ್ ತಂತ್ರಜ್ಞಾನ ಅಳವಡಿಸಿದ್ದು, ಬ್ಲೂಥತ್ ಕನೆಕ್ಟ್ ಹೊಂದಿರುವ 5 ಇಂಚಿನ ಟಿಎಫ್ ಟಿ ಸ್ಕ್ರೀನ್ ಸೌಲಭ್ಯದೊಂದಿಗೆ ರೈಡರ್ ಗಳು ಫ್ಯೂಯೆಲ್ ಲಭ್ಯತೆ, ರೈಡಿಂಗ್ ಮೋಡ್, ವೇಗ, ಟೈರ್ ಪ್ರೆಷರ್, ಟೈಮಿಂಗ್ ಮತ್ತು ಮ್ಯೂಸಿಕ್ ಜೊತೆಗೆ ರೈಡಿಂಗ್ ಮಾಹಿತಿಯನ್ನು ಆ್ಯಪ್ ಮೂಲಕ ವಿಶ್ಲೇಷಣೆ ಮಾಡಬಹುದಾಗಿದೆ.
ಇದನ್ನೂ ಓದಿ: ಟಿವಿಎಸ್ ಎಕ್ಸ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಸುರಕ್ಷಾ ಸೌಲಭ್ಯಗಳು
ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ನೊಂದಿಗೆ ಡ್ಯುಯಲ್ ಚಾನಲ್ ಎಬಿಎಸ್ ನೀಡಲಾಗಿದ್ದು, ರೇಸ್ ಟ್ಯೂನ್ಡ್ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ರೈಡಿಂಗ್ ಅನ್ನು ಮತ್ತಷ್ಟು ಸುರಕ್ಷಿತವಾಗಿಸುತ್ತದೆ. ಆಸಕ್ತ ಗ್ರಾಹಕರು ಹೊಸ ಬೈಕಿನಲ್ಲಿ ಮತ್ತಷ್ಟು ಹೊಸ ತಾಂತ್ರಿಕ ಸೌಲಭ್ಯಗಳಿಗಾಗಿ ಟಿವಿಎಸ್ ಬೀಲ್ಟ್ ಟು ಆಡರ್ ಪ್ಲ್ಯಾಟ್ ಫಾರ್ಮ್ ಮೂಲಕ ಕಸ್ಟಮೈಜ್ಡ್ ಮಾಡಬಹುದಾಗಿದ್ದು, ಇದು ಕೆಟಿಎಂ 390 ಡ್ಯೂಕ್ ಬೈಕ್ ಮಾದರಿಗೆ ನೇರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.