Upcoming Hatchbacks: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು!

|

Updated on: May 16, 2024 | 8:35 PM

ಮಧ್ಯಮ ವರ್ಗದ ಗ್ರಾಹಕರ ಉತ್ತಮ ಆಯ್ಕೆಯಾಗಿರುವ ಹ್ಯಾಚ್‌ಬ್ಯಾಕ್ ಕಾರುಗಳು ಭಾರೀ ಬೇಡಿಕೆಯಲ್ಲಿದ್ದು, ಶೀಘ್ರದಲ್ಲಿಯೇ ಮೂರು ಹೊಸ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿವೆ.

Upcoming Hatchbacks: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು!
ಬಹುನೀರಿಕ್ಷಿತ ಹ್ಯಾಚ್‌ಬ್ಯಾಕ್ ಕಾರುಗಳಿವು!
Follow us on

ಭಾರತದಲ್ಲಿ ಹೊಸ ತಲೆಮಾರಿನ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಹೊಸ ಕಾರುಗಳಲ್ಲಿ ಹ್ಯಾಚ್‌ಬ್ಯಾಕ್ (Hatchback) ಮಾದರಿಗಳು ಕೂಡಾ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿವೆ. ಹೀಗಾಗಿ ಶೀಘ್ರದಲ್ಲಿಯೇ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರುಗಳ ಬಿಡುಗಡೆ ಮತ್ತು ತಾಂತ್ರಿಕ ಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಟಾಟಾ ಆಲ್ಟ್ರೊಜ್

ಹೊಸ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಆಲ್ಟ್ರೊಜ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಕೂಡಾ ಪ್ರಮುಖವಾಗಿದೆ. ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಹೊಸ ಆಲ್ಟ್ರೊಜ್ ಕಾರು ಈ ಬಾರಿ ಸ್ಟ್ಯಾಂಡರ್ಡ್ ಆವೃತ್ತಿಯ ಜೊತೆಗೆ ರೇಸರ್ ಎಡಿಷನ್ ನೊಂದಿಗೆ ಬಿಡುಗಡೆಯಾಗುತ್ತಿದೆ. ಹೊಸ ಆವೃತ್ತಿಯು ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ಹೊಸ ಕಾರಿನಲ್ಲಿ ಈ ಬಾರಿ ಹಲವಾರು ಹೊಸ ಫೀಚರ್ಸ್ ಗಳಿರಲಿವೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಹೊಸ ಕಾರಿನಲ್ಲಿ ಟಾಟಾ ಕಂಪನಿಯು 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ ಸ್ಟ್ರಮೆಂಟ್ ಕ್ಲಸ್ಟರ್, ಫ್ರಂಟ್ ವೆಂಟಿಲೆಷನ್ ಸೀಟುಗಳು ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡುತ್ತಿದ್ದು, ಹೆಚ್ಚಿನ ಸುರಕ್ಷತೆಗಾಗಿ ಆರಂಭಿಕ ವೆರಿಯೆಂಟ್ ನಲ್ಲೂ 6 ಏರ್ ಬ್ಯಾಗ್ ಗಳು ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ನೀಡುತ್ತಿದೆ. ಈ ಮೂಲಕ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 7.50 ಲಕ್ಷದಿಂದ ರೂ. 11 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.

ಹ್ಯುಂಡೈ ಐ20 ಎನ್ ಲೈನ್ ಫೇಸ್‌ಲಿಫ್ಟ್

ಹೊಸದಾಗಿ ಬಿಡುಗಡೆಯಾಗಲಿರುವ ಕಾರುಗಳಲ್ಲಿ ಐ20 ಎನ್ ಲೈನ್ ಫೇಸ್‌ಲಿಫ್ಟ್ ಕೂಡಾ ಒಂದಾಗಿದ್ದು, ಇದು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದೆ. ಶೀಘ್ರದಲ್ಲಿಯೇ ಇದು ಭಾರತದಲ್ಲೂ ಬಿಡುಗಡೆಯಾಗಲಿದ್ದು, ಹೊಸ ಆವೃತ್ತಿಯು ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುವ ನೀರಿಕ್ಷೆಯಿದೆ. ಐ20 ಎನ್ ಲೈನ್ ಫೇಸ್‌ಲಿಫ್ಟ್ ಮಾದರಿಗಾಗಿ ಈ ಬಾರಿ 17 ಇಂಚಿನ ಅಲಾಯ್ ವ್ಹೀಲ್ಸ್ ಜೊತೆಗೆ ಮರುವಿನ್ಯಾಸಗೊಳಿಸಲಾದ ಫ್ರಂಟ್ ರೆಡಿಯರ್ ಗ್ರೀಲ್ ಮತ್ತು ನಾಲ್ಕು ಹೊಸ ಬಣ್ಣಗಳ ಆಯ್ಕೆ ನೀಡಲಾಗುತ್ತಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಸಿಟ್ರನ್ ಸಿ3 ಟರ್ಬೊ ಆಟೋಮ್ಯಾಟಿಕ್

ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ ಸಿಟ್ರನ್ ಸಿ3 ಟರ್ಬೊ ಆಟೋಮ್ಯಾಟಿಕ್ ಆವೃತ್ತಿಯು ಕೂಡಾ ಪ್ರಮುಖವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಸಿ3 ಟರ್ಬೊ ಮಾದರಿಯು ನಗರಪ್ರದೇಶದ ಗ್ರಾಹಕರಿಗೆ ಅನುಕೂಲಕರವಾಗುವಂತೆ ಆಟೋಮ್ಯಾಟಿಕ್ ಮಾದರಿಯನ್ನು ಪಡೆದುಕೊಳ್ಳುತ್ತಿದೆ. ಜೊತೆಗೆ ಟರ್ಬೊ ಆಟೋಮ್ಯಾಟಿಕ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಕೆಲವು ಹೊಸ ಫೀಚರ್ಸ್ ಹೊಂದಿರಲಿದ್ದು, ಇದು ಸಾಮಾನ್ಯ ಮ್ಯಾನುವಲ್ ಮಾದರಗಿಂತಲೂ ರೂ. 1 ಲಕ್ಷದಷ್ಟು ದುಬಾರಿಯಾಗಿಲಿದೆ.

Published On - 7:28 pm, Thu, 16 May 24