Volkswagen Virtus, Taigun: ಫೋಕ್ಸ್ ವ್ಯಾಗನ್ ವರ್ಟಸ್ ಮತ್ತು ಟೈಗುನ್ ಸೌಂಡ್ ಎಡಿಷನ್ ಬಿಡುಗಡೆ

|

Updated on: Nov 21, 2023 | 4:41 PM

ಫೋಕ್ಸ್ ವ್ಯಾಗನ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ವರ್ಟಸ್ ಸೆಡಾನ್ ಮತ್ತು ಟೈಗುನ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಹೊಸದಾಗಿ ಸೌಂಡ್ ಎಡಿಷನ್ ಬಿಡುಗಡೆ ಮಾಡಿದೆ.

Volkswagen Virtus, Taigun: ಫೋಕ್ಸ್ ವ್ಯಾಗನ್ ವರ್ಟಸ್  ಮತ್ತು ಟೈಗುನ್ ಸೌಂಡ್ ಎಡಿಷನ್ ಬಿಡುಗಡೆ
Follow us on

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಫೋಕ್ಸ್ ವ್ಯಾಗನ್ (Volkswagen) ಕಂಪನಿಯು ವರ್ಟಸ್ ಸೆಡಾನ್ ಮತ್ತು ಟೈಗುನ್ ಕಂಪ್ಯಾಕ್ಟ್ ಎಸ್ ಯುವಿಯಲ್ಲಿ ಹೊಸದಾಗಿ ಸೌಂಡ್ ಎಡಿಷನ್ ಬಿಡುಗಡೆ ಮಾಡಿದ್ದು, ವರ್ಟಸ್ ಸೌಂಡ್ ಎಡಿಷನ್ ಎಕ್ಸ್ ಶೋರೂಂ ಪ್ರಕಾರ ರೂ. 15.52 ಲಕ್ಷ ಮತ್ತು ಟೈಗುನ್ ಸೌಂಡ್ ಎಡಿಷನ್ ರೂ. 16.33 ಲಕ್ಷ ಬೆಲೆ ಹೊಂದಿವೆ.

ವರ್ಟಸ್ ಮತ್ತು ಟೈಗುನ್ ಸೌಂಡ್ ಎಡಿಷನ್ ಗಳು ಸಾಮಾನ್ಯ ಮಾದರಿಗಳಂತೆಯೇ ವೈಶಿಷ್ಟ್ಯತೆ ಮತ್ತು ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಕೇವಲ ಸಂಗೀತವನ್ನು ಇಷ್ಟಪಡುವ ಗ್ರಾಹಕರಿಗಾಗಿ ಪ್ರೀಮಿಯಂ ಸೌಂಡ್ ಸಿಸ್ಟಂ ಜೋಡಣೆ ಮಾಡಿದೆ. ಫ್ರಂಟ್ ಪವರ್ಡ್ ಸೀಟ್ ನೊಂದಿಗೆ ಸ್ಪೀಕರ್ಸ್ ಮತ್ತು ಆಂಪ್ಲಿಪೈರ್ ಜೋಡಣೆ ಮಾಡಿದ್ದು, ಸಿ ಪಿಲ್ಲರ್ ಹೊರಭಾಗದಲ್ಲಿ ನೀಡಲಾಗಿರುವ ಸೌಂಡ್ ಬ್ಯಾಡ್ಜ್ ಇದು ವಿಶೇಷ ಆವೃತ್ತಿ ಎಂಬುವುದನ್ನು ಗುರುತಿಸಲು ಸಹಕಾರಿಯಾಗಿದೆ.

ಇದರೊಂದಿಗೆ ಸೌಂಡ್ ಎಡಿಷನ್ ಗಳನ್ನು ಲಾವಾ ಬ್ಲ್ಯೂ, ಕಾರ್ಬನ್ ಸ್ಟ್ರೀಲ್ ಗ್ಲೇ, ವೈಲ್ಡ್ ಚೇರ್ರಿ ರೆಡ್ ಮತ್ತು ರೈಸಿಂಗ್ ಬ್ಲ್ಯೂ ಎನ್ನುವ ನಾಲ್ಕು ಬಣ್ಣದ ಆಯ್ಕೆ ನೀಡಲಾಗಿದ್ದು, ಟೈಗುನ್ ಹೊಸ ಮಾದರಿಯಲ್ಲಿ ಹೆಚ್ಚುವರಿಯಾಗಿ ರೂಫ್ ಮತ್ತು ಮಿರರ್ ಗಳ ಮೇಲೆ ಕಾಟ್ರಾಸ್ಟಿಂಗ್ ಕಲರ್ಸ್ ಪಡೆದುಕೊಳ್ಳುವ ಆಯ್ಕೆ ನೀಡಲಾಗಿದೆ.

ಇದನ್ನೂ ಓದಿ: ರೂ. 10 ಲಕ್ಷಕ್ಕೆ ಭರ್ಜರಿ ಮೈಲೇಜ್ ನೀಡುವ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಟೈಗುನ್ ಕಾರು ಮಾದರಿಯಲ್ಲಿ ಕಳೆದ ವಾರವಷ್ಟೇ ಟ್ರಯರ್ ಎಡಿಷನ್ ಬಿಡುಗಡೆ ಮಾಡಿದ್ದ ಫೋಕ್ಸ್ ವ್ಯಾಗನ್ ಕಂಪನಿಯು ಇದೀಗ ಸೌಂಡ್ ಎಡಿಷನ್ ಬಿಡುಗಡೆ ಮಾಡಿದ್ದು, ಒಂದೇ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗಿರುವ ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ ಕಾರುಗಳು ಸಹ ಹೊಸ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿವೆ.

ಇನ್ನು ಹೊಸ ಟೈಗುನ್ ಮತ್ತು ವರ್ಟಸ್ ಕಾರುಗಳು ಡೈನಾಮಿಕ್ ಲೈನ್, ಪರ್ಫಾಮೆನ್ಸ್ ಲೈನ್ ಮತ್ತು ಜಿಟಿ ಲೈನ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಟೈಗುನ್ ಕಾರು ಆರಂಭಿಕವಾಗಿ ರೂ. 11.61 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.75 ಲಕ್ಷ ಬೆಲೆ ಹೊಂದಿದ್ದರೆ ವರ್ಟಸ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 11.48 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.29 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದೆ.

ಎರಡು ಕಾರು ಮಾದರಿಗಳಲ್ಲೂ ಪೋಕ್ಸ್ ವ್ಯಾಗನ್ ಕಂಪನಿಯು 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಆರಂಭಿಕ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಜಿಎಸ್ ಡ್ಯಯುಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿವೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಈ ಟಾಪ್ 5 ಎಸ್‌ಯುವಿ ಕಾರುಗಳು!

ಇದರೊಂದಿಗೆ ಹೊಸ ಕಾರುಗಳು ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್‌ ಪಡೆದುಕೊಂಡಿದ್ದು, ಮಲ್ಟಿ ಏರ್‌ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೌಲಭ್ಯಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿವೆ.