ಬೆಂಗಳೂರು: ಜಮ್ಮು – ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಮಂಡ್ಯದ ವೀರ ಯೋಧ ಗುರು ಅವರ ಕುಟುಂಬಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಹೆಸರಿನಲ್ಲಿರುವ ಅರ್ಧ ಎಕರೆ ಜಮೀನನ್ನು ಕೊಡುತ್ತೇನೆ ಎಂದು ಹಿರಿಯ ನಟಿ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.ವೀರ ಯೋಧರು ಎಂದರೆ ನಮ್ಮನ್ನು ಸುರಕ್ಷಿತವಾಗಿ ಇರಿಸುವುದಕ್ಕೆ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಅಂತಹವರು ನಮ್ಮ ಊರಿನಲ್ಲಿ ನಮ್ಮ ಮಂಡ್ಯದ ಅದು ಅಂಬರೀಶ್ ಅವರ ಊರಾದ ದೊಡ್ಡ ಅರಿಸಿಕೆರೆನವರು ವೀರಮರಣ ಹೊಂದಿದ್ದಾರೆ ಎಂದರೆ ಅದು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ತಂದೆ, ತಾಯಿ ಮಾತನಾಡುವುದನ್ನು ನೋಡಿ ನನಗೆ ತುಂಬಾ ನೋವಾಯಿತು. ಆ ನೋವಿನ ಬಗ್ಗೆ ಏನೂ ಹೇಳಬೇಕು ಎಂದು ಗೊತ್ತಾಗಲ್ಲ. ಅವರು ಮಾಡಿದ ತ್ಯಾಗ ಹಾಗೂ ಸೇವೆಗೆ ನಾವು ಏನೂ ಕೊಡಲು ಸಾಧ್ಯವಿಲ್ಲ. ಶೇ.100 ಇದು ಶೇ.1 ಕೂಡ ಅಲ್ಲ ಎಂದರು.
Published On - 1:48 pm, Thu, 28 March 19