ಆಧಾರ್ ಕಾರ್ಡ್ ಕಳೆದು ಹೋದ್ರೆ ವಾಟ್ಸಾಪ್‌ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಸಾಫ್ಟ್ ಕಾಪಿಯಾಗಿ ಇಟ್ಟುಕೊಳ್ಳಲು ಬಯಸಿದರೆ ವಾಟ್ಸಾಪ್‌ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಬಳಿ ಮೊಬೈಲ್‌ ಫೋನ್‌ ಇದ್ರೆ ಈ ಕೆಲಸ ಕ್ಷಣಾರ್ಧದಲ್ಲಿ ಆಗುತ್ತದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಆಧಾರ್ ಕಾರ್ಡ್ ಕಳೆದು ಹೋದ್ರೆ ವಾಟ್ಸಾಪ್‌ನಲ್ಲಿ ಹೀಗೆ ಡೌನ್ಲೋಡ್ ಮಾಡಿ
ಆಧಾರ್‌ ಕಾರ್ಡ್‌
Image Credit source: shutterstock.com

Updated on: Aug 19, 2026 | 5:32 PM

ಮುಖ್ಯಾಂಶಗಳು

  • ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಮುಖ್ಯವಾದ ದಾಖಲೆಗಳಲ್ಲಿ ಒಂದು
  • ಆಧಾರ್‌ ಕಾರ್ಡ್‌ ಕಳೆದು ಹೋಗಿದ್ದರೆ ನೀವು ವಾಟ್ಸಾಪ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು
  • ವಾಟ್ಸಾಪ್‌ನಲ್ಲಿ ಡೌನ್ಲೋಡ್‌ ಮಾಡಲು ಡಿಜಿಲಾಕರ್‌ ಖಾತೆ ಸಕ್ರಿಯವಾಗಿರಬೇಕು

ಆಧಾರ್ ಕಾರ್ಡ್ (Aadhaar Card) ಭಾರತದಲ್ಲಿ ಪ್ರಮುಖ ಗುರುತಿನ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಸಬ್ಸಿಡಿಗಳು, ಪಿಂಚಣಿಗಳು, ವಿದ್ಯಾರ್ಥಿವೇತನಗಳು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ದಾಖಲೆ ನಿಮ್ಮ ಬಳಿಯಿರಲೇ ಬೇಕು. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ತುರ್ತು ಸಂದರ್ಭದಲ್ಲಿ ನಿಮ್ಮ ಬಳಿ ಇಲ್ಲದೆ ಹೋದರೆ ಚಿಂತಿಸುವ ಅಗತ್ಯವಿಲ್ಲ. ನೀವು ವಾಟ್ಸಾಪ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ನಿಮ್ಮ ಡಿಜಿಲಾಕರ್ ಖಾತೆ ಸಕ್ರಿಯವಾಗಿರುವುದು ಕಡ್ಡಾಯ.

ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ಹಂತ 1: ಮೊದಲಿಗೆ +91-9013151515 ನಂಬರ್ ಅನ್ನು ನಿಮ್ಮ ಫೋನ್‌ನಲ್ಲಿ My Gov Helpdesk ಎಂದು ಸೇವ್ ಮಾಡಿಕೊಳ್ಳಿ.

ಹಂತ 2: ವಾಟ್ಸಾಪ್ ಓಪನ್ ಮಾಡಿ ಮೇಲಿನ ನಂಬರ್‌ಗೆ ಹಾಯ್‌ ಅಥವಾ ನಮಸ್ತೆ ಎಂದು ಸಂದೇಶ ಕಳುಹಿಸಿ.

ಹಂತ 3: ಚಾಟ್‌ಬಾಟ್ ನೀಡುವ ಆಯ್ಕೆಗಳಲ್ಲಿ ಡಿಜಿ ಲಾಕರ್‌  ಆಯ್ಕೆಮಾಡಿ.

ಹಂತ 4: ನಿಮ್ಮ ಬಳಿ ಡಿಜಿಲಾಕರ್ ಖಾತೆ ಇದೆ ಎಂದು ದೃಢೀಕರಿಸಿ. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಹಂತ 5: ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ಬರುತ್ತದೆ. ಅದನ್ನು ಚಾಟ್‌ನಲ್ಲಿ ನಮೂದಿಸಿ.

ಹಂತ 6: ಡಿಜಿಲಾಕರ್‌ನಲ್ಲಿ ಲಭ್ಯವಿರುವ ದಾಖಲೆಗಳ ಪಟ್ಟಿಯಿಂದ ಆಧಾರ್ ಆಯ್ಕೆಮಾಡಿ.

ಹಂತ 7: ನಿಮ್ಮ ಆಧಾರ್ ಕಾರ್ಡ್ ಪಿಡಿಎಫ್ ರೂಪದಲ್ಲಿ ವಾಟ್ಸಾಪ್‌ಗೆ ಬರುತ್ತದೆ, ಡೌನ್ಲೋಡ್ ಮಾಡಿಕೊಳ್ಳಿ.

ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿದ ಬಳಿಕ ಈ ವಿಷ್ಯ ತಿಳಿದಿರಲಿ

  • ಡೌನ್‌ಲೋಡ್ ಮಾಡಿದ ಬಳಿಕ ಪಿಡಿಎಫ್ ಫೈಲ್ ಪಾಸ್‌ವರ್ಡ್‌ನಿಂದ ಸುರಕ್ಷಿತವಾಗಿರುತ್ತದೆ.
  • ಪಾಸ್‌ವರ್ಡ್ ನಿಮ್ಮ ಹೆಸರಿನ ಮೊದಲ 4 ಅಕ್ಷರಗಳು (ಕ್ಯಾಪಿಟಲ್ ಅಕ್ಷರಗಳು) ಮತ್ತು ನಿಮ್ಮ ಹುಟ್ಟಿದ ವರ್ಷವಾಗಿರುತ್ತದೆ.

ಇದನ್ನೂ ಓದಿ: ಆಧಾರ್ ಕಾರ್ಡ್​​ನಲ್ಲಿ ಎರಡು ಬಾರಿ ಹೆಸರು ತಿದ್ದುಪಡಿ ಮಾಡಿದ್ರೂ ತಪ್ಪಿದ್ಯಾ? ಹಾಗಾದ್ರೆ ಹೀಗೆ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆಧಾರ್ ಕಾರ್ಡ್ ಎಷ್ಟು ಮುಖ್ಯ?

ಉತ್ತರ: ಭಾರತೀಯ ನಾಗರಿಕನಿಗೂ ಆಧಾರ್ ಕಾರ್ಡ್ ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ಇದು ಸರ್ಕಾರದ ಸಬ್ಸಿಡಿಗಳನ್ನು ನೇರವಾಗಿ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಪ್ಯಾನ್ ಕಾರ್ಡ್ ಜೋಡಿಸಲು, ಮತ್ತು ಪ್ರಮುಖ ಗುರುತು ಹಾಗೂ ವಿಳಾಸದ ಪುರಾವೆಯಾಗಿದೆ.

ಪ್ರಶ್ನೆ: ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಈ ಕೆಲಸ ಆಗಿರಲೇಬೇಕು?

ಉತ್ತರ: ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಅದರ ಜತೆಗೆ ಡಿಜಿಲಾಕರ್ ಖಾತೆ ನಿಮ್ಮ ಬಳಿ ಇರುವುದು ಕಡ್ಡಾಯ.

ಪ್ರಶ್ನೆ: ವಾಟ್ಸಾಪ್ ಮೂಲಕ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಎಷ್ಟು ಸುರಕ್ಷಿತ?

ಉತ್ತರ: My Gov Helpdesk ಚಾಟ್‌ಬಾಟ್ ಬಳಸಿ ವಾಟ್ಸಾಪ್ ಮೂಲಕ ಅಧಿಕೃತವಾಗಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಸುರಕ್ಷಿತವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:31 pm, Wed, 19 August 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us