Garlic Price: ದುಬಾರಿ ದುನಿಯಾ…! ಟೊಮೆಟೋ, ಈರುಳ್ಳಿ ಆಯ್ತು ಈಗ ಜನರ ಕಣ್ಣೀರು ಸುರಿಸುವ ಸರದಿ ಬೆಳ್ಳುಳ್ಳಿಯದ್ದು

|

Updated on: Dec 13, 2023 | 10:35 AM

Price Hike: ಬೆಳ್ಳುಳ್ಳಿ ಬೆಲೆ ರೀಟೇಲ್ ಮಾರುಕಟ್ಟೆಯಲ್ಲಿ ಕಿಲೋಗೆ 300ರಿಂದ 400 ರೂ ಆಗಿದೆ. ಟೊಮೆಟೋ, ಈರುಳ್ಳಿ ಬೆಲೆ ಏರಿಕೆಯ ಬಿಸಿ ಪಡೆದಿರುವ ಜನಸಾಮಾನ್ಯರಿಗೆ ಬೆಳ್ಳುಳ್ಳಿ ಶಾಕ್ ಕೊಟ್ಟಿದೆ. ಸಗಟು ಮಾರುಕಟ್ಟೆಯಲ್ಲಿ ಸಾಮಾನ್ಯ ಬೆಳ್ಳುಳ್ಳಿಯ ಬೆಲೆ 130ರಿಂದ 140 ರೂ ಆಗಿದೆ. ಉಚ್ಚಗುಣಮಟ್ಟದ ಬೆಳ್ಳುಳ್ಳಿ ಬೆಲೆ 250 ರೂ ಆಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಉತ್ಪಾದನೆ ಕುಂಠಿತವಾಗಿದೆ.

Garlic Price: ದುಬಾರಿ ದುನಿಯಾ...! ಟೊಮೆಟೋ, ಈರುಳ್ಳಿ ಆಯ್ತು ಈಗ ಜನರ ಕಣ್ಣೀರು ಸುರಿಸುವ ಸರದಿ ಬೆಳ್ಳುಳ್ಳಿಯದ್ದು
ಬೆಳ್ಳುಳ್ಳಿ
Follow us on

ನವದೆಹಲಿ, ಡಿಸೆಂಬರ್ 13: ಕಳೆದ ಎರಡು, ಮೂರು ತಿಂಗಳಿಂದ ಜನರಿಗೆ ಟೊಮೆಟೋ ಮತ್ತು ಈರುಳ್ಳಿ ಬೆಲೆ ಏರಿಕೆಯ (price rise) ಬಿಸಿ ತಾಕಿದೆ. ಈಗ ಬೆಳ್ಳುಳ್ಳಿಯ ಸರದಿಯಾಗಿದೆ. ನೋಡನೋಡುತ್ತಿರುವಂತೆಯೇ ಬೆಳ್ಳುಳ್ಳಿ ಬೆಲೆ (garlic price) ಗಗನಕ್ಕೇರತೊಡಗಿದೆ. ಹೋಲ್​ಸೇಲ್ ಮತ್ತು ರೀಟೇಲ್ ಎರಡೂ ಮಾರುಕಟ್ಟೆಗಳಲ್ಲೂ ಬೆಳ್ಳುಳ್ಳಿ ದುಬಾರಿಯಾಗತೊಡಗಿದೆ. ಕೆಲ ಪ್ರದೇಶಗಳಲ್ಲಿ ಅದು ಕಿಲೋಗೆ 400 ರೂ ಗಡಿ ದಾಟಿ ಹೋಗಿದೆ. ಟೊಮೆಟೋ ಮತ್ತು ಈರುಳ್ಳಿ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಕಂಗೆಟ್ಟಿರುವುದು ಮಾತ್ರವಲ್ಲ, ಹಣದುಬ್ಬರ ಕೆಳಗಿಳಿಯಲು ಬಿಡದೆ ಸರ್ಕಾರಕ್ಕೂ ತಲೆ ನೋವಾಗಿದೆ. ಈಗ ಬೆಲೆ ಏರಿಕೆಯಲ್ಲಿ ಬೆಳ್ಳುಳ್ಳಿಯೂ ಸೇರಿಕೊಂಡಿದೆ.

ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿನ ವರದಿ ಪ್ರಕಾರ ಸಗಟು ಮಾರುಕಟ್ಟೆಯಲ್ಲೇ ಬೆಳ್ಳುಳ್ಳಿ ಬೆಲೆ ಕಿಲೋಗೆ 130ರಿಂದ 140 ರೂನಷ್ಟು ಇದೆ. ಉಚ್ಚ ಮಟ್ಟದ ಬೆಳ್ಳುಳ್ಳಿ 250 ರೂವರೆಗೂ ಮಾರಾಟವಾಗುತ್ತಿದೆ. ಇನ್ನು, ಸಾಮಾನ್ಯ ಬೆಳ್ಳುಳ್ಳಿಯು ರೀಟೇಲ್ ಮಾರುಕಟ್ಟೆಗಳಲ್ಲಿ 300-400 ರೂ ಬೆಲೆಗೆ ಮಾರಾಟವಾಗುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಭಾರತದ ಹಣದುಬ್ಬರ ನವೆಂಬರ್​ನಲ್ಲಿ ಶೇ. 5.55ಕ್ಕೆ ಏರಿಕೆ; ಕಳೆದ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟ

ಬೆಳ್ಳುಳ್ಳಿ ಬೆಲೆ ಯಾಕೆ ಹೆಚ್ಚುತ್ತಿದೆ?

ಮುಂಗಾರು ಋತುವಿನಲ್ಲಿ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳ್ಳಿ ಆವಕ ಬಹಳಷ್ಟು ಕಡಿಮೆ ಆಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ಬೆಳ್ಳುಳ್ಳಿ ಬಾಧಿತವಾಗಿದೆ. ತಮಿಳುನಾಡು, ಆಂಧ್ರದ ಕರಾವಳಿ ಭಾಗದಲ್ಲಿ ಮಿಚಾಂಗ್ ಚಂಡಮಾರುತದ ಪರಿಣಾಮ ದಕ್ಷಿಣ ಭಾರಗದ ಹಲವು ಭಾಗಗಳಲ್ಲಿ ವಿಪರೀತ ಮಳೆಯಾಗಿ ಬೆಳೆ ನಾಶವಾಗಿದ್ದಿದೆ.

ಸದ್ಯ ಬೆಳ್ಳುಳ್ಳಿ ಬೆಲೆ ಕಡಿಮೆ ಆಗುವ ಸಾಧ್ಯತೆ ಇಲ್ಲ ಎಂದು ಎಪಿಎಂಸಿ ವರ್ತಕರು ಹೇಳುತ್ತಿದ್ದಾರೆ. ‘ನಾವೀಗ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದ ಮೇಲೆ ಅವಲಂಬಿತವಾಗಬೇಕಿದೆ. ಇದು ತುಸು ದುಬಾರಿಯಾಗಬಹುದು,’ ಎಂದು ವರ್ತಕರು ಹೇಳುತ್ತಿದ್ದಾರೆ.

ಇದನ್ನೂ ಓದಿ: Manufacturing: ಐಫೋನ್​ಗಳಿಗೆ ಭಾರತದಲ್ಲೇ ಗೊರಿಲ್ಲಾ ಗ್ಲಾಸ್ ಉತ್ಪಾದನೆ; ಅಮೆರಿಕದ ಕಾರ್ನಿಂಗ್​ನಿಂದ ಫ್ಯಾಕ್ಟರಿ ಸ್ಥಾಪನೆ

ಭಾರತದಲ್ಲಿ ಬೆಳ್ಳುಳ್ಳಿ ಅತಿಹೆಚ್ಚು ಬೆಳೆಯುವುದು ಮಧ್ಯಪ್ರದೇಶದಲ್ಲಿ. ದೇಶದ ಅರ್ಧಕ್ಕಿಂತ ಹೆಚ್ಚು ಬೆಳ್ಳುಳ್ಳಿ ಉತ್ಪಾದನೆ ಈ ರಾಜ್ಯದಲ್ಲೇ ಆಗುತ್ತದೆ. ರಾಜಸ್ಥಾನ, ಉತ್ತರಪ್ರದೇಶ ಮತ್ತು ಗುಜರಾತ್​ನಲ್ಲೂ ಸಾಕಷ್ಟು ಬೆಳೆಯಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ