ನವದೆಹಲಿ, ಡಿಸೆಂಬರ್ 3: ಕೇಂದ್ರ ಸರ್ಕಾರ ರೂಪಿಸಿರುವ ಭಾಷಿಣಿಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡಿರುವ ಆ್ಯಪ್ ಆಗಿದೆ. ಇದು ದೇಶದ 22 ಭಾಷೆಗಳಲ್ಲಿ ಲಭ್ಯ ಇದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಂವಹನ ನಡೆಸಲು ಇದು ಅನುಕೂಲವಾಗಿದೆ. ಗ್ರಾಮೀಣ ಭಾಗದಲ್ಲಿ ಆಡಳಿತಕ್ಕೆ ಇದು ಪರಿಣಾಮಕಾರಿ ಸಾಧನವಾಗಿ ಪರಿಣಮಿಸಿದೆ. ಕನ್ನಡ ಸೇರಿದಂತೆ ಭಾರತದ ಹೆಚ್ಚಿನ ಭಾಷೆಗಳಲ್ಲಿ ಈ ಎಐ ಟೂಲ್ ಲಭ್ಯ ಇದೆ.
ಪಂಚಾಯತ್ ರಾಜ್ ಸಚಿವಾಲಯದ ಅಡಿಗೆ ಬರುವ ಇ-ಗ್ರಾಮಸ್ವರಾಜ್ ಎನ್ನುವ ಪೋರ್ಟಲ್ನಲ್ಲಿ ಎಐ ಟೂಲ್ ಅನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ. ಕನ್ನಡ, ಹಿಂದಿ, ತಮಿಳು ಇತ್ಯಾದಿ ಮುಖ್ಯಸ್ತರದ ಭಾಷೆಗಳ ಜೊತೆಗೆ ಬೋಡೋ, ಸಂತಾಲಿಯಂತಹ ಬುಡಕಟ್ಟು ಭಾಷೆಗಳೂ ಇದರಲ್ಲಿವೆ. ನೇಪಾಳಿ, ಮೈಥಿಲಿ, ಡೋಗ್ರಿ, ಸಂಸ್ಕೃತ ಮೊದಲಾದ ಭಾಷೆಗಳೂ ಇದರಲ್ಲಿವೆ.
ರಾಷ್ಟ್ರೀಯ ಮಟ್ಟದ ಮಾಹಿತಿಯೋ, ಕೇಂದ್ರ ಸರ್ಕಾರದ ಯೋಜನೆಯ ಮಾಹಿತಿಯೋ ದೇಶದ ಯಾವುದೋ ರಾಜ್ಯದ ಮೂಲೆಯಲ್ಲಿರುವ ಪಂಚಾಯಿತಿಗಳ ಮಟ್ಟವನ್ನು ತಲುಪಬೇಕಾದರೆ ಭಾಷಾ ತಡೆಗೋಡೆ ದಾಟಬೇಕಾಗುತ್ತದೆ. ಹಿಂದಿಯಲ್ಲಿರುವ ಮಾಹಿತಿಯು ತಮಿಳುನಾಡಿನ ಜನರಿಗೆ ಅರ್ಥವಾಗುವುದಿಲ್ಲ. ಇಂಗ್ಲೀಷ್ನಲ್ಲಿರುವ ಮಾಹಿತಿ ಬಹಳ ಕಡೆ ತಿಳಿಯದೇ ಹೋಗಬಹುದು. ಭಾಷಿಣಿ ಎಐ ಮೂಲಕ ಈ ಕೊರತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಸಮರ್ಪಕವಾಗಿ ಆಡಳಿತ ನಿರ್ವಹಣೆ ಸಾಧ್ಯವಾಗಬಲ್ಲುದು.
ಇದನ್ನೂ ಓದಿ: ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆಗಳ ಏರಿಕೆ ಸಾಧ್ಯತೆ; ಪಾಪ ತೆರಿಗೆ ಶೇ. 35ಕ್ಕೆ ಏರಿಸಲು ನಿರ್ಧಾರ
ಭಾಷಿಣಿಯ ವಾಣಿ ಅನುವಾದ್ ಸೇವೆಯಲ್ಲಿ ಧ್ವನಿಯಿಂದ ಧ್ವನಿಗೆ ತರ್ಜುಮೆ ಆಗುತ್ತದೆ. ಸಮಾವೇಶ, ಉಪನ್ಯಾಸಗಳಲ್ಲಿ ಹಿಂದಿಯಲ್ಲೋ, ಇಂಗ್ಲೀಷ್ನಲ್ಲೋ ಯಾರಾದರೂ ಭಾಷಣ ಮಾಡಿದರೆ, ಅದನ್ನು ಎಐ ಟೂಲ್ ಮೂಲಕ ಸ್ಥಳೀಯ ಭಾಷೆಗಳಿಗೆ ತರ್ಜುಮೆಗೊಳಿಸಿ ಪ್ರಸ್ತುತಪಡಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ