ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆಗಳ ಏರಿಕೆ ಸಾಧ್ಯತೆ; ಪಾಪ ತೆರಿಗೆ ಶೇ. 35ಕ್ಕೆ ಏರಿಸಲು ನಿರ್ಧಾರ

Sin taxes to be raised on Cigarettes: ದುಷ್ಕರ್ಮ ಸರಕುಗಳೆನಿಸಿದ ತಂಬಾಕು, ಕಾರ್ಬೊನೇಟೆಡ್ ಪಾನೀಯಗಳ ಉತ್ಪನ್ನಗಳ ಮೇಲೆ ಸಿನ್ ಟ್ಯಾಕ್ಸ್ ಅನ್ನು ಶೇ 35ಕ್ಕೆ ಏರಿಸುವ ಸಾಧ್ಯತೆ ಇದೆ. ಜಿಎಸ್​ಟಿ ದರ ಪರಿಷ್ಕರಣೆಗೆಂದು ರಚಿಸಲಾಗಿದ್ದ ಸಚಿವರ ಮಂಡಳಿ (ಜಿಒಎಂ) 148 ವಸ್ತುಗಳಿಗೆ ಜಿಎಸ್​ಟಿ ದರ ಬದಲಾವಣೆಗೆ ಶಿಫಾರಸು ಮಾಡಿದೆ. ಸಿದ್ಧ ಉಡುಪುಗಳ ಮೇಲಿನ ಜಿಎಸ್​ಟಿ ದರವನ್ನೂ ಪರಿಷ್ಕರಿಸಲು ಸಲಹೆ ನೀಡಲಾಗಿದೆ.

ಸಿಗರೇಟ್, ಪೆಪ್ಸಿ, ಕೋಕಾಕೋಲಾ ಬೆಲೆಗಳ ಏರಿಕೆ ಸಾಧ್ಯತೆ; ಪಾಪ ತೆರಿಗೆ ಶೇ. 35ಕ್ಕೆ ಏರಿಸಲು ನಿರ್ಧಾರ
ಸಿಗರೇಟ್ ಲೈಟರ್, ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 03, 2024 | 11:13 AM

ನವದೆಹಲಿ, ಡಿಸೆಂಬರ್ 3: ಜಿಎಸ್​ಟಿ ದರ ಪರಿಷ್ಕರಣೆ ನಿರ್ಧರಿಸಲು ರಚಿಸಲಾಗಿರುವ ಸಚಿವರ ಮಂಡಳಿಯು (ಜಿಒಎಂ) ತಂಬಾಕು ಇತ್ಯಾದಿ ದುಷ್ಕರ್ಮ ಸರಕುಗಳಿಗೆ ಸಿನ್ ಟ್ಯಾಕ್ಸ್ ಅನ್ನು ಶೇ. 28ರಿಂದ ಶೇ. 35ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರೊಂದಿಗೆ ದುಷ್ಕರ್ಮ ಸರಕುಗಳೆಂದು ಪರಿಗಣಿಸಲಾದ ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳು, ಪೆಪ್ಸಿ, ಕೊಕಾ ಕೋಲಾ, ಥಂಬ್ಸಪ್ ಇತ್ಯಾದಿ ಕಾರ್ಬೊನೇಟೆಡ್ ಪಾನೀಯಗಳ ಬೆಲೆ ಏರಿಕೆ ಆಗಬಹುದು.

ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸಚಿವರ ಮಂಡಳಿಯು ಇನ್ನೂ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವುದು ತಿಳಿದುಬಂದಿದೆ. ಸಿದ್ಧ ಉಡುಪುಗಳ ಮೇಲಿನ ತೆರಿಗೆಯನ್ನು ಬೆಲೆ ಶ್ರೇಣಿಗೆ ಅನುಸಾರವಾಗಿ ಪರಿಷ್ಕರಿಸಿದೆ. 1,500 ರೂವರೆಗಿನ ಬೆಲೆಯ ರೆಡಿಮೇಡ್ ಗಾರ್ಮೆಂಟ್ಸ್​ಗಳಿಗೆ ಜಿಎಸ್​ಟಿ ಶೇ. 5ರಷ್ಟಿರಬೇಕು ಎಂದು ಜಿಒಎಂ ಸಲಹೆ ನೀಡಿದೆ.

ಹಾಗೆಯೇ, 1,500 ರೂನಿಂದ 10,000 ರೂವರೆಗಿನ ಸಿದ್ಧ ಉಡುಪುಗಳು ಶೇ. 18ರ ಜಿಎಸ್​ಟಿ ಶ್ರೇಣಿಗೆ ಬರಲಿದೆ. ಹತ್ತು ಸಾವಿರ ರೂಗಿಂತ ಹೆಚ್ಚು ಬೆಲೆಯ ಸಿದ್ಧ ಉಡುಪುಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸಬೇಕು ಎಂಬುದು ಜಿಒಎಂ ಸಲಹೆ.

ಇದನ್ನೂ ಓದಿ: ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮಕಾರಿ ಜಾರಿ: ಪ್ರಧಾನಿ ಮೋದಿ, ‘ಪ್ರಗತಿ’ ಪರಿಣಾಮ ಗುರುತಿಸಿದ ಆಕ್ಸ್​ಫರ್ಡ್ ಅಧ್ಯಯನ

ಗ್ರೂಪ್ ಆಫ್ ಮಿನಿಸ್ಟರ್ಸ್ ಒಟ್ಟಾರೆ 148 ವಸ್ತುಗಳಿಗೆ ತೆರಿಗೆ ಬದಲಾವಣೆ ಮಾಡುವಂತೆ ಜಿಎಸ್​ಟಿ ಕೌನ್ಸಿಲ್​ಗೆ ಶಿಫಾರಸು ಮಾಡಿದೆ. ಇವುಗಳನ್ನು ಜಾರಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ಹಣ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಸದ್ಯದ ಜಿಎಸ್​ಟಿ ವ್ಯವಸ್ಥೆಯಲ್ಲಿ ನಾಲ್ಕು ಟ್ಯಾಕ್ಸ್ ಸ್ಲ್ಯಾಬ್​ಗಳಿವೆ. ಶೇ. 5, ಶೇ. 12, ಶೇ. 18 ಮತ್ತು ಶೇ. 28ರ ಜಿಎಸ್​ಟಿ ದರಗಳಿವೆ. ಇದರಲ್ಲಿ ಬಹಳ ಅಗತ್ಯವಾಗಿರುವ ಸರಕುಗಳಿಗೆ ಕನಿಷ್ಠ, ಅಂದರೆ ಶೇ. 5ರ ತೆರಿಗೆ ಇರುತ್ತದೆ. ತೀರಾ ಅಗತ್ಯ ಅಲ್ಲದ ಮತ್ತು ಐಷಾರಾಮಿ ಎನಿಸುವ ವಸ್ತುಗಳಿಗೆ ಗರಿಷ್ಠ ಶೇ. 28ರಷ್ಟು ಜಿಎಸ್​ಟಿ ಇದೆ. ಉದಾಹರಣೆಗೆ, ಕಾರು, ವಾಷಿಂಗ್ ಮೆಷೀನ್, ಫೈವ್ ಸ್ಟಾರ್ ಹೋಟೆಲ್ ಸರ್ವಿಸ್ ಇತ್ಯಾದಿ. ಎಲ್ಲಾ ಸರಕುಗಳನ್ನು ಅವುಗಳ ಅಗತ್ಯತೆಗೆ ಅನುಸಾರವಾಗಿ ಜಿಎಸ್​ಟಿ ದರವನ್ನು ಅನ್ವಯಿಸಲಾಗುತ್ತಿದೆ.

ಆದರೆ, ದುಷ್ಕರ್ಮದ ಸರಕುಗಳಿಗೆ ಸರ್ಕಾರ ಯಥೇಚ್ಛವಾಗಿ ತೆರಿಗೆ ವಿಧಿಸಬಲ್ಲುದು. ಆರೋಗ್ಯಕ್ಕೆ ಮಾರಕವಾದ ಸಿಗರೇಟ್, ಮದ್ಯ ಸೇವನೆಯನ್ನು ದುಷ್ಕರ್ಮ ಅಥವಾ ದುಶ್ಚಟ ಎಂದು ಪರಿಗಣಿಸಲಾಗುತ್ತದೆ. ಕೋಲಾದಂತಹ ಪಾನೀಯಗಳೂ ಕೂಡ ಆರೋಗ್ಯಕ್ಕೆ ಮಾರಕವೆನಿಸಿದ್ದು ಅವೂ ಕೂಡ ಸಿನ್ ಗೂಡ್ಸ್ ಎನಿಸುತ್ತವೆ. ಹೀಗಾಗಿ, ಇವುಗಳಿಗೆ ಸರ್ಕಾರ ಹೆಚ್ಚುವರಿಯಾಗಿ ಸಿನ್ ಟ್ಯಾಕ್ಸ್ ವಿಧಿಸುತ್ತದೆ.

ಇದನ್ನೂ ಓದಿ: ಭಾರತದ ವೈದ್ಯಕೀಯ ತಂತ್ರಜ್ಞಾನ ಉದ್ಯಮಕ್ಕೆ ಅಗಾಧ ಬೆಳವಣಿಗೆಯ ಶಕ್ತಿ ಇದೆ: ಸಿಐಐ ಅನಿಸಿಕೆ

ಸದ್ಯ ಜಿಎಸ್​ಟಿ ದರಗಳನ್ನು ಪರಿಷ್ಕರಣೆಗೆ ಜಿಒಎಂ ಶಿಫಾರಸುಗಳನ್ನು ಮಾಡಿದೆ. ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ದರಗಳನ್ನು ಅವಲೋಕಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜಿಎಸ್​ಟಿ ಕೌನ್ಸಿಲ್​ನಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರವನ್ನೇ ಹಣಕಾಸು ಸಚಿವಾಲಯವೂ ಪರಿಗಣಿಸುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ