ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮಕಾರಿ ಜಾರಿ: ಪ್ರಧಾನಿ ಮೋದಿ, ‘ಪ್ರಗತಿ’ ಪರಿಣಾಮ ಗುರುತಿಸಿದ ಆಕ್ಸ್​ಫರ್ಡ್ ಅಧ್ಯಯನ

PRAGATI platform for digital governance: ಭಾರತದಲ್ಲಿ ಪ್ರಮುಖ ಹಾಗೂ ಕ್ಲಿಷ್ಟ ಮೂಲಸೌಕರ್ಯ ಯೋಜನೆಗಳ ಪರಿಣಾಮಕಾರಿ ಜಾರಿಗೆ ‘ಪ್ರಗತಿ’ ಪ್ರಮುಖ ಪಾತ್ರ ವಹಿಸಿದೆ. ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ ಭಾರತದಲ್ಲಿ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪ್ರಗತಿ ಬಗ್ಗೆ ಅಧ್ಯಯನ ಮಾಡಿ ‘ಪ್ರಗತಿ’ ಪ್ಲಾಟ್​ಫಾರ್ಮ್​ನ ಪಾತ್ರವನ್ನು ಗುರುತಿಸಿದೆ. ಬೆಂಗಳೂರು ಮೆಟ್ರೋ ರೈಲು ಸೇರಿದಂತೆ ದೇಶದ ವಿವಿಧ ಯೋಜನೆಗಳನ್ನು ಕೇಸ್ ಸ್ಟಡಿಯಾಗಿ ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ.

ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮಕಾರಿ ಜಾರಿ: ಪ್ರಧಾನಿ ಮೋದಿ, ‘ಪ್ರಗತಿ’ ಪರಿಣಾಮ ಗುರುತಿಸಿದ ಆಕ್ಸ್​ಫರ್ಡ್ ಅಧ್ಯಯನ
ನರೇಂದ್ರ ಮೋದಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 02, 2024 | 7:55 PM

ನವದೆಹಲಿ, ಡಿಸೆಂಬರ್ 2: ಭಾರತದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಮೂಲಸೌಕರ್ಯ ಯೋಜನೆಗಳನ್ನು ಕಳೆದ ಕೆಲ ವರ್ಷಗಳಲ್ಲಿ ಪೂರ್ಣಗೊಳಿಸಿದೆ. ಇನ್ನೂ ಹಲವು ಯೋಜನೆಗಳು ಕ್ಷಿಪ್ರ ವೇಗದಲ್ಲಿ ಪ್ರಗತಿಯಲ್ಲಿವೆ. ಇದೆಲ್ಲವೂ ಸಾಧ್ಯವಾಗಿದ್ದು ಪ್ರಗತಿ (PRAGATI: Pro-active Governance and Timely Implementation) ಎನ್ನುವ ಡಿಜಿಟಲ್ ಗವರ್ನೆನ್ಸ್ ಪ್ಲಾಟ್​ಫಾರ್ಮ್​ನಿಂದ. ಈ ವಿಚಾರವನ್ನು ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್​ನಿಂದ ನಡೆದ ಜಂಟಿ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಈ ಅಧ್ಯಯನದ ವರದಿಯನ್ನು ಇಂದು ಸೋಮವಾರ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ 201 ಬಿಲಿಯನ್ ಡಾಲರ್ ಮೌಲ್ಯದ ಪ್ರಮುಖ ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಿಗೆ ವೇಗದ ಸ್ಪರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ‘ಪ್ರಗತಿ’ ಪ್ಲಾಟ್​ಫಾರ್ಮ್ ಕಾರಣವಾಗಿವೆ ಎಂದು ಈ ವರದಿಯು ಎತ್ತಿ ತೋರಿಸಿದೆ.

‘ಒಂಬತ್ತು ವರ್ಷದ ಹಿಂದೆ ಪ್ರಗತಿ ಪ್ಲಾಟ್​ಫಾರ್ಮ್​ ಶುರುವಾದಾಗ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಬಹಳ ಕಠಿಣ ಸವಾಲು ಮುಂದಿತ್ತು. 2023ರ ಜೂನ್​ನಲ್ಲಿ 17.05 ಲಕ್ಷ ಕೋಟಿ ರೂ ಮೌಲ್ಯದ 340 ಯೋಜನೆಗಳು ಪ್ರಗತಿ ಪರಾಮರ್ಶೆಗೆ ಒಳಪಟ್ಟಿವೆ. ಖುದ್ದು ಪ್ರಧಾನಿ ಮೋದಿ ಅವರೇ ಈ ಪ್ರಗತಿ ವಿಚಾರದಲ್ಲಿ ಮುತುವರ್ಜಿ ತೋರಿರುವುದು ಈ ಯಶಸ್ಸಿಗೆ ಕಾರಣ’ ಎಂದು ವರದಿಯಲ್ಲಿ ಶ್ಲಾಘಿಸಲಾಗಿದೆ.

ಇದನ್ನೂ ಓದಿ: ಈಶಾನ್ಯ ರಾಜ್ಯಗಳ ಎಂಟು ಸ್ಥಳಗಳನ್ನು ಅದ್ಭುತ ಪ್ರವಾಶೀ ತಾಣಗಳಾಗಿ ಅಭಿವೃದ್ಧಿ: ಕೇಂದ್ರದ ಯೋಜನೆ

ಆಕ್ಸ್​ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ ಈ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದೆ. ಪ್ರಗತಿ ಪರಿಣಾಮವಾಗಿ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳು ಹೇಗೆ ಬೆಳವಣಿಗೆ ಹೊಂದಿವೆ ಎನ್ನುವುದರ ಕೇಸ್ ಸ್ಟಡಿಯನ್ನು ಈ ವರದಿಯಲ್ಲಿ ಮಂಡಿಸಲಾಗಿದೆ. ಬೆಂಗಳೂರಿನ ಮೆಟ್ರೋ ರೈಲು ಯೋಜನೆ, ನವಿ ಮುಂಬೈ ಏರ್ಪೋರ್ಟ್, ಜಮ್ಮು ಉಧಂಪುರ್ ಶ್ರೀನಗರ್ ಬಾರಾಮುಲ್ಲಾ ರೈಲು ಲಿಂಕ್ ಇತ್ಯಾದಿ ಹಲವು ಯೋಜನೆಗಳ ಕೇಸ್ ಸ್ಟಡಿಯನ್ನು ನೀಡಲಾಗಿದೆ.

2015ರಲ್ಲಿ ಆರಂಭವಾದ ಪ್ರಗತಿಯು ಪರಿವೇಶ್, ಪಿಎಂ ಗತಿ ಶಕ್ತಿ, ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ಮೊದಲಾದ ಇತರ ಸರ್ಕಾರೀ ಡಿಜಿಟಲ್ ಪ್ಲಾಟ್​ಫಾರ್ಮ್​ಗಳೊಂದಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಬಹಳ ಸಂಕೀರ್ಣವಾಗಿರುವ ಮತ್ತು ಪ್ರಮುಖವಾಗಿರುವ ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳ ವಿಚಾರದಲ್ಲಿ ಮಲ್ಟಿ ಪ್ಲಾಟ್​ಫಾರ್ಮ್​ಗಳ ಸಹಯೋಗ ಅವಶ್ಯಕತೆ ಇರುತ್ತದೆ.

ಈ ವರದಿಯಲ್ಲಿ ಪ್ರಗತಿ ಜೊತೆಗೆ ಪಿಎಂ ಗತಿ ಶಕ್ತಿ ಇತ್ಯಾದಿ ಇತರ ಪ್ಲಾಟ್​ಫಾರ್ಮ್​ಗಳು ಯಾವುದೇ ಯೋಜನೆಯ ಜಾರಿಗೆ ಎಷ್ಟು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪ್ರಕರಣಗಳ ಸಹಿತ ಈ ವರದಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಬೆಳೆ ತ್ಯಾಜ್ಯ ನಿರ್ವಹಣೆಗೆ ಸರ್ಕಾರದಿಂದ 3,623 ಕೋಟಿ ರೂ ವೆಚ್ಚ; ಪಂಜಾಬ್, ಹರ್ಯಾಣ ರಾಜ್ಯಕ್ಕೆ ಹೆಚ್ಚಿನ ವ್ಯಯ

ಬೆಂಗಳೂರಿನ ಮೆಟ್ರೋ ರೈಲು ಪ್ರಾಜೆಕ್ಟ್ ಬಗ್ಗೆ ಪ್ರಸ್ತಾಪಿಸಿದ ಈ ವರದಿಯು, ಯೋಜನೆಗೆ ಭೂಮಿ ಪಡೆಯುವುದು ಬಹಳ ದೊಡ್ಡ ಸವಾಲಾಗಿತ್ತು ಎಂಬುದನ್ನು ಹೇಳಿದೆ. ಈ ಯೋಜನೆಯ ಎರಡು ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಮೂರನೇ ಹಂತವು 2028ಕ್ಕೆ ಮುಗಿಯುವ ಗುರಿ ಇದೆ. ಈ ಮೆಟ್ರೋ ರೈಲಿನಿಂದಾಗಿ ಬೆಂಗಳೂರು ನಗರದ ವಾಹನ ದಟ್ಟಣೆ ಕಡಿಮೆ ಆಗಲು ಸಹಕಾರಿಯಾಗಿರುವುದನ್ನು ಇದು ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:48 pm, Mon, 2 December 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ