ಸಿಬಿಲ್ ಸ್ಕೋರ್ ಎಷ್ಟಿದರೆ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ

ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂದು ನೋಡುತ್ತೇವೆ. ಆದರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬೇಕು ಅಂತಾದ್ರೆ ಸಿಬಿಲ್ ಸ್ಕೋರ್ 750 ರಿಂದ 900 ಇರಬೇಕು. ಇದರ ಸಂಖ್ಯೆಗಳ ನಡುವೆ ಸಿಬಿಲ್ ಸ್ಕೋರ್ ಇದ್ದರೆ ಬ್ಯಾಂಕ್ ಗಳು ಇದನ್ನು ಅತ್ಯುತ್ತಮ ಎಂದು ಪರಿಗಣಿಸುತ್ತವೆ. ಈ ಕುಇತಾದ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಸಿಬಿಲ್ ಸ್ಕೋರ್ ಎಷ್ಟಿದರೆ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತೆ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 16, 2026 | 6:19 PM

ಮುಖ್ಯಾಂಶಗಳು

  • ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್‌ನ್ನು ಕಡ್ಡಾಯಗೊಳಿಸಿದೆ.
  • ಸಾಲದ ಬಡ್ಡಿದರ ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ
  • ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲು ಸಿಬಿಲ್ ಸ್ಕೋರ್ 750 ರಿಂದ 900 ಇರಬೇಕು

ಸಾಲ (Loan) ತಕೊಳ್ಳುವುದಕ್ಕಿಂತ ಅದನ್ನು ಮರುಪಾವತಿ ಮಾಡುವುದೇ ದೊಡ್ಡ ತಲೆ ನೋವು. ಹೀಗಾಗಿ ಬಡ್ಡಿದರ ಕಡಿಮೆ ಇರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆಯಲು ಮುಂದಾಗುವುದೇ ಹೆಚ್ಚು. ಆದರೆ ಈ ಸಾಲದ ಬಡ್ಡಿಯು ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ. ಸಿಬಿಲ್ ಸ್ಕೋರ್ ಹೆಚ್ಚಿದರೆ ಮಾತ್ರ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. ಹಾಗಾದ್ರೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು ಎಂಬುದು ತಿಳಿದಿದೆಯೇ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಗೃಹ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಯಾವುದೇ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಬ್ಯಾಂಕ್‌ಗಳು ಮೊದಲು ನೋಡುವುದೇ ಈ ಸಿಬಿಲ್ ಸ್ಕೋರ್. ನಿಮ್ಮ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕ್ ಸಾಲವನ್ನು ಸುಲಭವಾಗಿ ನೀಡುತ್ತವೆ.

ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತೆ ಸಾಲದ ಬಡ್ಡಿದರ

750 – 900 (ಅತ್ಯುತ್ತಮ): ಸಿಬಿಲ್ ಸ್ಕೋರ್ 750 – 900 ನಡುವೆ ಇದ್ದರೆ ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಸುಲಭವಾಗಿ ಸಾಲ ನೀಡುತ್ತವೆ.

700 – 749 (ಉತ್ತಮ): ಈ ಸ್ಕೋರ್‌ನಲ್ಲಿ ಸಾಲ ಸಿಗುತ್ತದೆ. ಆದರೆ ಬಡ್ಡಿದರವು ಸರಾಸರಿಯಾಗಿರಬಹುದು. ಸ್ವಲ್ಪ ಹೆಚ್ಚಿರುತ್ತದೆ.

700 ಕ್ಕಿಂತ ಕಡಿಮೆ (ಕಳಪೆ): ಸಿಬಿಲ್ ಸ್ಕೋರ್ 700 ಕ್ಕಿಂತ ಕಡಿಮೆ ಇದ್ದಲ್ಲಿ ಸಾಲ ಸಿಗುವುದು ಕಷ್ಟ. ಸಿಬಿಲ್ ಸ್ಕೋರ್ ಕಡಿಮೆಯಿದ್ದು ಸಾಲ ನೀಡಿದ್ರೂ ಬ್ಯಾಂಕ್ ಸಾಲ ನೀಡಿದರೂ ಬಡ್ಡಿದರವನ್ನು ಹೆಚ್ಚು ವಿಧಿಸುತ್ತದೆ.

ಇದನ್ನೂ ಓದಿ: ಲೋನ್ ಅಕೌಂಟ್‌ನಲ್ಲಿನ ನಾಮಿನಿ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಯಾಕೆ ಮುಖ್ಯ?

ಉತ್ತರ: ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಪಡೆಯಲು ಸಿಬಿಲ್ ಸ್ಕೋರ್‌ನ್ನು ಕಡ್ಡಾಯಗೊಳಿಸಿದೆ.

ಪ್ರಶ್ನೆ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಉತ್ತರ: ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗ್ಬೇಕು ಅಂತಾದ್ರೆ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿರಬೇಕು.

ಪ್ರಶ್ನೆ: ಸಿಬಿಲ್ ಸ್ಕೋರ್ ಕಡಿಮೆಯಾದರೆ ಏನಾಗುತ್ತದೆ?

ಉತ್ತರ:ಸಿಬಿಲ್ ಸ್ಕೋರ್ ಕಡಿಮೆಯಾದರೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದು ಕಷ್ಟ. ಒಂದು ವೇಳೆ ಸಾಲ ಸಿಕ್ಕರೂ ಬಡ್ಡಿದರ ಹೆಚ್ಚಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us