ನಿಯಂತ್ರಕರಿಂದ ಅನುಮೋದನೆಯನ್ನು ಕೇಳುವಾಗ ಅಮೆರಿಕನ್ ಇ-ಕಾಮರ್ಸ್ ಕಂಪೆನಿಯಾದ ಅಮೆಜಾನ್ ಮಾಹಿತಿಯನ್ನು ಮರೆಮಾಚಿದೆ ಎಂಬ ದೂರುಗಳನ್ನು ಪರಿಶೀಲಿಸಿದ ನಂತರದಲ್ಲಿ ಫ್ಯೂಚರ್ ಗ್ರೂಪ್‌ನೊಂದಿಗೆ ಅಮೆಜಾನ್‌ನ ಒಪ್ಪಂದವನ್ನು ಡಿಸೆಂಬರ್ 17ರಂದು ಭಾರತದ ಸ್ಪರ್ಧಾತ್ಮಕ ಆಯೋಗವು (CCI) ಅಮಾನತುಗೊಳಿಸಿದೆ. 57 ಪುಟಗಳ ಆದೇಶದಲ್ಲಿ, 2019ರ ಒಪ್ಪಂದದ “ನಿಜವಾದ ಉದ್ದೇಶ ಮತ್ತು ವಿವರಗಳನ್ನು” ಅಮೆಜಾನ್ ಮರೆಮಾಚಿದೆ ಮತ್ತು “ತಪ್ಪಾದ ಪ್ರಾತಿನಿಧ್ಯವನ್ನು ಸ್ಥಾಪಿಸಲು ಮತ್ತು ವಸ್ತು ಸಂಗತಿಗಳ ಮರೆಮಾಚಲು” ಪ್ರಯತ್ನಿಸಿದೆ ಎಂದು ಭಾರತದ ವಿಶ್ವಾಸ- ದ್ರೋಹ ನಿಯಂತ್ರಕ ಹೇಳಿದೆ. ಸ್ಪರ್ಧಾತ್ಮಕ ಆಯೋಗವು ಈಗ ಒಪ್ಪಂದವನ್ನು ಹೊಸದಾಗಿ “ಪರಿಶೀಲಿಸುವುದು ಅಗತ್ಯವಾಗಿದೆ” ಎಂದು ಹೇಳಿದೆ ಮತ್ತು ಅದರ ಅನುಮೋದನೆಯು ಅಲ್ಲಿಯವರೆಗೆ “ಅನ್ವಯಿಸುವುದಿಲ್ಲ” ಎಂದು ಹೇಳಿದೆ.
ಎಫ್‌ಪಿಸಿಎಲ್‌ನಲ್ಲಿ ಶೇ 49ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಪೋಷಕ ಸಂಸ್ಥೆಯಾದ ಫ್ಯೂಚರ್ ರೀಟೇಲ್ ಲಿಮಿಟೆಡ್ ಅನ್ನು ಪರೋಕ್ಷವಾಗಿ ನಿಯಂತ್ರಿಸುವ ಉದ್ದೇಶವನ್ನು ಬಹಿರಂಗಪಡಿಸಲಿಲ್ಲ ಎಂದು ಅಮೆಜಾನ್ ವಿರುದ್ಧ ದೂರುದಾರರಾದ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಪಿಸಿಎಲ್) ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಆರೋಪಿಸಿವೆ. “ಅಮೆಜಾನ್ ಕಾಂಬಿನೇಷನ್‌ನ ನಿಜವಾದ ವ್ಯಾಪ್ತಿಯನ್ನು ಮರೆಮಾಚಿದೆ ಮತ್ತು ವಾಣಿಜ್ಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಳ್ಳು ಮತ್ತು ತಪ್ಪು ಹೇಳಿಕೆಗಳನ್ನು ಮಾಡಿದೆ”, ಇದು “ಕಾಂಬಿನೇಷನ್‌ನ ವ್ಯಾಪ್ತಿ ಮತ್ತು ಉದ್ದೇಶದೊಂದಿಗೆ ಹೆಣೆದುಕೊಂಡಿದೆ” ಎಂದು CCI ಆದೇಶ ಹೇಳಿದೆ.
ಅನುಮೋದನೆ ಹಿಂತೆಗೆದುಕೊಳ್ಳುವ ಅಧಿಕಾರವಿಲ್ಲ
ಈಗಾಗಲೇ ಒಪ್ಪಿಗೆ ನೀಡಲಾಗಿರುವ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಕಾನೂನು ಅಧಿಕಾರವನ್ನು ಹೊಂದಿಲ್ಲ ಎಂದು ಅಮೆಜಾನ್ ಸಂಸ್ಥೆಯ ಮುಂದೆ ವಾದಿಸಿದ ಕೆಲವು ದಿನಗಳ ನಂತರ ಈ ಕ್ರಮವು ಬಂದಿದೆ. “ಅನುಮೋದನೆಯನ್ನು ಹಿಂತೆಗೆದುಕೊಳ್ಳುವ ಅಧಿಕಾರವು ಪ್ರಬಲ ಶಕ್ತಿಯಾಗಿದೆ ಮತ್ತು ಸ್ಪಷ್ಟವಾಗಿ ಒದಗಿಸದ ಹೊರತು ಭಾರತೀಯ ಕಾನೂನಿನಲ್ಲಿ ಶಾಸನಬದ್ಧ ಪ್ರಾಧಿಕಾರಕ್ಕೆ ಲಭ್ಯವಿರುವುದಿಲ್ಲ,” ಎಂದು ರಾಯಿಟರ್ಸ್ ಕಂಪೆನಿಯನ್ನು ಉಲ್ಲೇಖಿಸಿದೆ. CAIT ಡಿಸೆಂಬರ್ 15ರಂದು ಅಮೆಜಾನ್ ವಾದವನ್ನು ನಿರಾಕರಿಸಲು ಹೇಳಿಕೆಯನ್ನು ಬಿಡುಗಡೆ ಮಾಡಿತು. “ಏಜೆನ್ಸಿಗೆ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಅಧಿಕಾರವಿಲ್ಲ ಎಂದು ನಂಬಿದರೆ” ಯಾವುದೇ CCI ಪ್ರಕ್ರಿಯೆಯಲ್ಲಿ ಕಂಪೆನಿಯು ಭಾಗವಹಿಸಬಾರದು ಎಂದು ಅದು ಹೇಳಿದೆ.
ವ್ಯಾಪಾರಿಗಳ ಸಂಸ್ಥೆಯು ಅಮೆಜಾನ್ ಇಂಡಿಯಾದ ಉನ್ನತ ಅಧಿಕಾರಿ ರಾಕೇಶ್ ಬಕ್ಷಿ ಅವರು ಅಮೆಜಾನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಬೆಜೋಸ್ ಅವರಿಗೆ ಕಳುಹಿಸಿದ “ಇಮೇಲ್” ನಿಂದ ಸಾರಾಂಶವನ್ನು ಸಹ ಬಿಡುಗಡೆ ಮಾಡಿದೆ. “ಇಮೇಲ್ FCPLನ ವ್ಯವಹಾರದ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ” ಎಂದು ವ್ಯಾಪಾರಿಗಳ ಸಂಸ್ಥೆ ಹೇಳಿದೆ. ಇದು ಪರೋಕ್ಷವಾಗಿ ಫ್ಯೂಚರ್ ರೀಟೇಲ್ ವ್ಯಾಪಾರದ ಅಮೆಜಾನ್‌ನ ಉದ್ದೇಶವನ್ನು ಬಹಿರಂಗಪಡಿಸುತ್ತದೆ ಎಂದು ವಾದಿಸಿದೆ. ಕಳೆದ ವರ್ಷ 24,500 ಕೋಟಿ ರೂಪಾಯಿಗೆ ತನ್ನ ಆಸ್ತಿಯನ್ನು ಮುಕೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್‌ಗೆ ಮಾರಾಟ ಮಾಡಲು ಫ್ಯೂಚರ್ ಒಪ್ಪಿಕೊಂಡ ನಂತರ ಅಮೆಜಾನ್ ಮತ್ತು ಫ್ಯೂಚರ್ ಸಮೂಹ ಭಾರತೀಯ ನ್ಯಾಯಾಲಯಗಳಲ್ಲಿ ಕಠಿಣ ಹೋರಾಟದಲ್ಲಿ ತೊಡಗಿರುವ ಸಮಯದಲ್ಲಿ CCI ಆದೇಶ ಬಂದಿದೆ.
ಯಾವುದೇ ತಪ್ಪು ಮಾಡಿಲ್ಲ ಎಂದ ಫ್ಯೂಚರ್
ಫ್ಯೂಚರ್ ಗ್ರೂಪ್ ತನ್ನ ಯೂನಿಟ್ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು 2019ರಲ್ಲಿ ಖರೀದಿಸಲು ಅನುಮೋದನೆ ಪಡೆಯುವ ಸಂದರ್ಭದಲ್ಲಿ ಅಮೆಜಾನ್ ತಮ್ಮ ಒಪ್ಪಂದದ ಪ್ರಮುಖ ಭಾಗಗಳನ್ನು ಮರೆಮಾಚಿದೆ ಎಂದು ಸಿಸಿಐಗೆ ದೂರು ನೀಡಿದೆ. ಫ್ಯೂಚರ್ ರಿಟೇಲ್ ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ (ಆರ್‌ಐಎಲ್) ಮಾರಾಟ ಮಾಡುವ ಕುರಿತು ಅಮೆಜಾನ್ ಮತ್ತು ಫ್ಯೂಚರ್ ತಿಂಗಳುಗಳಿಂದ ನ್ಯಾಯಾಲಯದ ತೀವ್ರ ಹೋರಾಟದಲ್ಲಿ ತೊಡಗಿವೆ. ಕಳೆದ ವರ್ಷ ತನ್ನ ರೀಟೇಲ್ ಆಸ್ತಿಗಳನ್ನು ರಿಲಯನ್ಸ್ಗೆ ಮಾರಾಟ ಮಾಡುವ ಮೂಲಕ ಫ್ಯೂಚರ್ ತಮ್ಮ ಒಪ್ಪಂದವನ್ನು ಉಲ್ಲಂಘಿಸಿದೆ- 2019ರಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆಯಾಗಿದೆ ಎಂದು ಅಮೆಜಾನ್ ಆರೋಪಿಸಿದೆ. ಆದರೆ ಅದು ಯಾವುದೇ ತಪ್ಪು ಮಾಡಿಲ್ಲ ಎಂದು ಫ್ಯೂಚರ್ ಹೇಳಿದೆ.
ಅಮೆಜಾನ್ ಸಿಸಿಐ ಅನ್ನು ದಾರಿ ತಪ್ಪಿಸಿದೆ ಎಂದು ಕಳೆದ ತಿಂಗಳು ಎಫ್‌ಆರ್‌ಎಲ್‌ನ ಸ್ವತಂತ್ರ ನಿರ್ದೇಶಕರು ಆರೋಪಿಸಿದ್ದರು. ಇದು ಮೊದಲು ಭಾರತೀಯ ರೀಟೇಲ್ ಕಂಪನಿಯಲ್ಲಿ ನೇರವಾಗಿ ಹೂಡಿಕೆ ಮಾಡಲು ಮಾತುಕತೆಯಲ್ಲಿತ್ತು ಮತ್ತು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದೇಶೀ ಇ-ಕಾಮರ್ಸ್ ಘಟಕಗಳಿಗೆ ನಿಯಮಗಳನ್ನು ಬಿಗಿಗೊಳಿಸಿದ ಪ್ರೆಸ್ ನೋಟ್ 2 ನಿಯಮಗಳನ್ನು ಸರ್ಕಾರವು ತಂದ ನಂತರವೇ ಅದು ಯೋಜನೆಯನ್ನು ಬದಲಾಯಿಸಿತು. ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಸಿಪಿಎಲ್) ನಲ್ಲಿ ಹೂಡಿಕೆ ಮಾಡಲು ಅಮೆಜಾನ್ ಉದ್ದೇಶಿಸಿಲ್ಲ ಎಂದು ಅವರು ಆರೋಪಿಸಿದ್ದರು. ಏಕೆಂದರೆ ಅದರ “ವಿಶಿಷ್ಟ ವ್ಯಾಪಾರ ಮಾದರಿ ಮತ್ತು ಬಲವಾದ ಬೆಳವಣಿಗೆಯ ಸಾಮರ್ಥ್ಯ”- ಅಮೆಜಾನ್ ಸ್ಪರ್ಧೆಯ ನಿಯಂತ್ರಕಕ್ಕೆ ಪ್ರಸ್ತುತಪಡಿಸಿದ ಕಾರಣಗಳು.
ಸ್ವತಂತ್ರ ನಿರ್ದೇಶಕರು FCPLನಲ್ಲಿ ಅಮೆಜಾನ್‌ನ ಹೂಡಿಕೆಯ ಪೂರ್ವ ಒಪ್ಪಂದದ ಸಮಾಲೋಚನೆಯ ದಾಖಲೆಗಳನ್ನು ಪರಿಶೀಲಿಸಿ ಮತ್ತು ಅಮೆಜಾನ್ ತನ್ನ ಸಿಸಿಐ ಅರ್ಜಿಯಲ್ಲಿ ಮಾಡಿದ ಪ್ರಾತಿನಿಧ್ಯಗಳು “ಆಂತರಿಕ ಪತ್ರ ವ್ಯವಹಾರಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿವೆ” ಎಂದು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: Future Group: ಫ್ಯೂಚರ್ ಸಮೂಹಕ್ಕೆ ನಿರಾಳ ಎನಿಸುವ ಆದೇಶದ ನೀಡಿದ ಸುಪ್ರೀಂ ಕೋರ್ಟ್