Future Group: ಫ್ಯೂಚರ್​ ಸಮೂಹಕ್ಕೆ ನಿರಾಳ ಎನಿಸುವ ಆದೇಶದ ನೀಡಿದ ಸುಪ್ರೀಂ ಕೋರ್ಟ್

ಅಮೆಜಾನ್ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯೂಚರ್ ರೀಟೇಲ್ ಲಿಮಿಟೆಡ್​ಗೆ ಸಮಾಧಾನ ತರುವಂಥ ಆದೇಶವೊಂದನ್ನು ಸುಪ್ರೀಂಕೋರ್ಟ್​ ನೀಡಿದೆ.

Future Group: ಫ್ಯೂಚರ್​ ಸಮೂಹಕ್ಕೆ ನಿರಾಳ ಎನಿಸುವ ಆದೇಶದ ನೀಡಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ಫ್ಯೂಚರ್ ಸಮೂಹಕ್ಕೆ ಪ್ರಮುಖ ಪರಿಹಾರ ದೊರೆತಿದೆ. ಸುಪ್ರೀಂ ಕೋರ್ಟ್ ಗುರುವಾರ ಜಾಗತಿಕ ಇ-ಕಾಮರ್ಸ್ ಕಂಪೆನಿ ಅಮೆಜಾನ್​ನಿಂದ ಹಾಕಲಾದ ಪ್ರಕರಣದ ವಿಚಾರಣೆಯನ್ನು ತಡೆಹಿಡಿಯಿತು. ಸಿಂಗಾಪೂರ ಮೂಲದ ಮಧ್ಯವರ್ತಿ ನ್ಯಾಯಾಧೀಕರಣ ತನ್ನ ಪರವಾಗಿ ನೀಡಿದ ಆದೇಶದ ತುರ್ತು ಜಾರಿಗಾಗಿ ಮನವಿ ಮಾಡಿತ್ತು ಆ ಆದೇಶದ ಅನ್ವಯ, ಫ್ಯೂಚರ್ ರಿಟೇಲ್ ಲಿಮಿಟೆಡ್ ಮತ್ತು ರಿಲಯನ್ಸ್ ಸಮೂಹದ ಮಧ್ಯೆ ವಿಲೀನ ಒಪ್ಪಂದವನ್ನು ಸ್ಥಗಿತಗೊಳಿಸಿತು. NCLAT, CCI ಮತ್ತು SEBI ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಫ್ಯೂಚರ್-ರಿಲಯನ್ಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳವರೆಗೆ ಅಂತಿಮ ಆದೇಶಗಳನ್ನು ನೀಡದಂತೆ ನ್ಯಾಯಾಲಯವು ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದೆ. ದೆಹಲಿಯ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಫ್ಯೂಚರ್ ರಿಟೇಲ್ ಲಿಮಿಟೆಡ್ ಸಲ್ಲಿಸಿದ ವಿಶೇಷ ಅರ್ಜಿಗೆ ಸಂಬಂಧಿಸಿದಂತೆ ಈ ಮೇಲಿನ ಆದೇಶವನ್ನು ನೀಡಲಾಗಿದೆ. ತುರ್ತಾಗಿ ಪಾಲನೆ ಮಾಡುವಂತೆ ನೀಡಿದ ಆದೇಶದ ಉಲ್ಲಂಘನೆ ಮಾಡಿದ್ದಕ್ಕಾಗಿ ಫ್ಯೂಚರ್ ಸಮೂಹ ಕಂಪೆನಿಗಳು ಮತ್ತು ಅದರ ಪ್ರವರ್ತಕರಾದ ಕಿಶೋರ್ ಬಿಯಾನಿ ಹಾಗೂ ಇತರರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹೈಕೋರ್ಟ್ ನಿರ್ದೇಶಿಸಿತ್ತು. ಬಿಯಾನಿ ಮತ್ತು ಫ್ಯೂಚರ್ ಗ್ರೂಪ್‌ನ ಇತರ ನಿರ್ದೇಶಕರ ಸಿವಿಲ್ ಅರೆಸ್ಟ್‌ಗಾಗಿ ಹೈಕೋರ್ಟ್ ಏಕಸದಸ್ಯ ಪೀಠ ಶೋಕಾಸ್ ನೋಟಿಸ್ ನೀಡಿತ್ತು.

ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠ ಕಳೆದ ತಿಂಗಳು ಹೇಳಿದ್ದ ಪ್ರಕಾರ, FRL-ರಿಲಯನ್ಸ್ ಒಪ್ಪಂದವನ್ನು ಸ್ಥಗಿತಗೊಳಿಸುವಂತೆ ಸಿಂಗಾಪುರ್ ಮಧ್ಯಸ್ಥಗಾರರಿಂದ ನೀಡಲಾದ ತುರ್ತು ಆದೇಶವನ್ನು ಭಾರತೀಯ ಕಾನೂನಿನಲ್ಲಿ ಜಾರಿಗೊಳಿಸಬಹುದೆಂದು ಮತ್ತು ಏಕ ಸದಸ್ಯ ಪೀಠದಿಂದ ನೀಡಿದ ಆದೇಶಕ್ಕೆ ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 37 (2)ರ ಅಡಿಯಲ್ಲಿ ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗದು ಎಂದು ಹೇಳಿತ್ತು.

ಇದನ್ನೂ ಓದಿ: Future Retail Limited: ದೆಹಲಿ ಹೈಕೋರ್ಟ್ ಅಮೆಜಾನ್ ಆದೇಶದ ವಿರುದ್ಧ ಫ್ಯೂಚರ್ ರೀಟೇಲ್ ಸುಪ್ರೀಂ ಮೊರೆ

Reliance- Future Deal: ಸುಪ್ರೀಮ್​ ಕೋರ್ಟ್​ನಲ್ಲಿ ಅಮೆಜಾನ್​ ಪರ ಆದೇಶ; ರಿಲಯನ್ಸ್​- ಫ್ಯೂಚರ್​ ಡೀಲ್​ಗೆ ಕಲ್ಲು

(Supreme Court Stayed Order Against Future Retail In Related To Amazon Filed Case)

Click on your DTH Provider to Add TV9 Kannada