AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance Infrastructure: ಅನಿಲ್​ ಅಂಬಾನಿ ರಿಲಯನ್ಸ್​ ಇನ್​ಫ್ರಾಗೆ 4660 ಕೋಟಿ ರೂ. ಮಧ್ಯಸ್ಥಿಕೆ ಪ್ರಕರಣ ಗೆಲುವು

ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​ನ ಪರವಾಗಿ 4600 ಕೋಟಿ ರೂಪಾಯಿ ಮೊತ್ತದ ದೆಹಲಿ ಮೆಟ್ರೋ ಮಧ್ಯಸ್ಥಿಕೆ ನ್ಯಾಯಾಧೀಕರಣ ತೀರ್ಪು ಬಂದಿದೆ.

Reliance Infrastructure: ಅನಿಲ್​ ಅಂಬಾನಿ ರಿಲಯನ್ಸ್​ ಇನ್​ಫ್ರಾಗೆ 4660 ಕೋಟಿ ರೂ. ಮಧ್ಯಸ್ಥಿಕೆ ಪ್ರಕರಣ ಗೆಲುವು
ಅನಿಲ್ ಅಂಬಾನಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Sep 09, 2021 | 1:25 PM

Share

ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​ಗೆ ಪ್ರಮುಖ ಗೆಲುವೊಂದು ದೊರೆತಿದೆ. ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿದ್ದ ಕದನ ಇದಾಗಿತ್ತು. ಸಾಲಗಾರರಿಗೆ ಮರುಪಾವತಿ ಮಾಡುವುದಕ್ಕೆ ಹಣದ ಅಗತ್ಯ ಇದೆ ಎಂದು ಮಧ್ಯಸ್ಥಿಕೆ ನ್ಯಾಯಾಧೀಕರಣದಲ್ಲಿ ಹೇಳುತ್ತಾ ಬಂದಿದ್ದ ಕಂಪೆನಿಗೆ ಅಂತಿಮವಾಗಿ ಆ ಮೊತ್ತ ದೊರೆತಿದೆ. ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಸಮಿತಿಯು ಗುರುವಾರ ಅನಿಲ್ ಅಂಬಾನಿಯ ಯೂನಿಟ್​ ಪರವಾಗಿ 2017ರ ಮಧ್ಯಸ್ಥಿಕೆ ತೀರ್ಪನ್ನು ಎತ್ತಿಹಿಡಿದಿದೆ. ಈ ಮಧ್ಯಸ್ಥಿಕೆ ನ್ಯಾಯಾಧೀಕರಣದಿಂದ 4660 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತವು ಬರಲಿದೆ. ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಕಂಪೆನಿಯ ವಾರ್ಷಿಕ ವರದಿ ಪ್ರಕಾರ, ಇದರಲ್ಲಿ ಬಡ್ಡಿ ಮೊತ್ತವೂ ಸೇರಿಕೊಂಡಿದೆ.

ಅಂದಹಾಗೆ, ಈಗ ಬಂದಿರುವ ತೀರ್ಪು ಅನಿಲ್ ಅಂಬಾನಿ ಅವರ ಪಾಲಿಗೆ ನಿರ್ಣಾಯಕ ಗೆಲುವಾಗಿದೆ. ಅವರ ಟೆಲಿಕಾಂ ಸಂಸ್ಥೆಗಳು ದಿವಾಳಿಯಲ್ಲಿದ್ದು, ದೇಶದ ಅತಿದೊಡ್ಡ ಬ್ಯಾಂಕ್​ಗಳಿಂದ ದಾಖಲಾದ ವಯಕ್ತಿಕ ದಿವಾಳಿತನದ ಪ್ರಕರಣವನ್ನು ಅನಿಲ್​ ಅಂಬಾನಿ ಎದುರಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದ ನಂತರ ರಿಲಯನ್ಸ್ ಇನ್​ಫ್ರಾ ಷೇರುಗಳು ದೈನಂದಿನ ಮಿತಿಯಾದ ಶೇ 5ರಷ್ಟು ಜಿಗಿದವು. ರಿಲಯನ್ಸ್ ಇನ್​ಫ್ರಾದಿಂದ ಈ ಹಣವನ್ನು ಸಾಲಗಾರರಿಗೆ ಪಾವತಿಸಲು ಬಳಸುತ್ತದೆ ಎಂದು ಕಂಪೆನಿಯ ವಕೀಲರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಹೇಳಿದ್ದರು. ಅದರ ನಂತರ ಉನ್ನತ ನ್ಯಾಯಾಲಯವು ಬ್ಯಾಂಕ್​ನ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದು ಗುರುತಿಸುವುದನ್ನು ನಿರ್ಬಂಧಿಸಿದೆ. ಪ್ರಕರಣದ ಅಂತಿಮ ತೀರ್ಪು ಸಾಲಗಾರರಿಗೆ ನ್ಯಾಯಾಲಯದ ನಿರ್ಬಂಧವನ್ನು ತೆಗೆದುಹಾಕುತ್ತದೆ.

ನ್ಯಾಯಾಲಯದ ತೀರ್ಪಿನ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ. ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಘಟಕವು 2008ರಲ್ಲಿ ದೇಶದ ಮೊದಲ ಖಾಸಗಿ ನಗರ ರೈಲು ಯೋಜನೆಯನ್ನು 2038ರ ವರೆಗೆ ನಡೆಸಲು ದೆಹಲಿ ಮೆಟ್ರೋ ಜೊತೆ ಒಪ್ಪಂದ ಮಾಡಿಕೊಂಡಿತು. 2012ರಲ್ಲಿ ಶುಲ್ಕ ಮತ್ತು ಕಾರ್ಯಾಚರಣೆಗಳ ವಿವಾದಗಳ ನಂತರ, ಅನಿಲ್ ಅಂಬಾನಿಯ ಸಂಸ್ಥೆಯು ರಾಜಧಾನಿಯ ವಿಮಾನ ನಿಲ್ದಾಣದ ಮೆಟ್ರೋ ಯೋಜನೆಯನ್ನು ನಿರ್ವಹಿಸುವುದನ್ನು ನಿಲ್ಲಿಸಿತು ಮತ್ತು ದೆಹಲಿಯ ಮೆಟ್ರೋ ವಿರುದ್ಧ ಮಧ್ಯಸ್ಥಿಕೆ ಪ್ರಕರಣವನ್ನು ಆರಂಭಿಸಿತು. ಮೆಟ್ರೋ ಒಪ್ಪಂದದ ಉಲ್ಲಂಘನೆ ಆರೋಪ ಮತ್ತು ಟರ್ಮಿನೇಶನ್ ಶುಲ್ಕವನ್ನು ಕೋರಿತು.

ಇದನ್ನೂ ಓದಿ: ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..

(Anil Ambani Firm Reliance Infrastructure Wins Rs 4600 Crore Delhi Metro Arbitration Case)

Published On - 1:22 pm, Thu, 9 September 21

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್