AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..

ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳಿಗೆ ಅಪಾರ ಸಾಲ ನೀಡಿ, ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗಿದೆ ಈ ಹಣಕಾಸು ಸಂಸ್ಥೆಗಳ ಇಂದಿನ ಪರಿಸ್ಥಿತಿ. ಈ ಹಣಕಾಸು ಸಂಸ್ಥೆಗಳು ಒಗ್ಗೂಡಿ, ಬಿಡುಗಡೆ ಮಾಡಿರುವ ವರದಿಯ ಪ್ರಕಾರ RCom ಸಮೂಹ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಬೇಕಿದೆ.

ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..
ಅಂಬಾನಿ ನೇತೃತ್ವದ Reliance Communications ಸಾರ್ವಜನಿಕ ಬ್ಯಾಂಕುಗಳಿಗೆ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಲು ಪರದಾಡುತ್ತಿದೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: ಆಯೇಷಾ ಬಾನು|

Updated on: Jan 01, 2021 | 11:29 AM

Share

ಇತ್ತೀಚೆಗೆ ಏಷ್ಯಾದ ಅತ್ಯಧಿಕ ಧನಿಕ ಪಟ್ಟದಿಂದ ಕೆಳಗಿಳಿದ ರಿಲಯನ್ಸ್​ ಕಂಪನಿಯ ಸಾಮ್ರಾಟ ಮುಕೇಶ್ ಅಂಬಾನಿ ಅವರ ಸೋದರ ದಿವಾಳಿಯೆದ್ದು ಯಾವುದೋ ಕಾಲವಾಗಿದೆ. ಅಪ್ಪ ಧೀರೂ ಭಾಯಿ ಅಂಬಾನಿ ಚಾಣಾಕ್ಯತನ ರೂಢಿಸಿಕೊಳ್ಳದ ಅನಿಲ್ ಅಂಬಾನಿ ಸಹಜವಾಗಿಯೇ ತನ್ನ ಅಣ್ಣನಂತೆ ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ತತ್ಫಲವಾಗಿ ಈಗ ಅನಿಲ್ ಅಂಬಾನಿ ನೇತೃತ್ವದ Reliance Communications ಸಾರ್ವಜನಿಕ ಬ್ಯಾಂಕುಗಳಿಗೆ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಲು ಪರದಾಡುವಂತಾಗಿದೆ. ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಪೈಸೆ ಪೈಸೆ ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ನಿಜಕ್ಕೂ ಲುಕ್ಸಾನು ಅನುಭವಿಸುತ್ತಿರುವುದು ಈ ಹಣಕಾಸು ಸಂಸ್ಥೆಗಳೇ ಎಂಬುದು ದಿಟ.

ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳಿಗೆ ಅಪಾರ ಸಾಲ ನೀಡಿ, ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗಿದೆ ಈ ಹಣಕಾಸು ಸಂಸ್ಥೆಗಳ ಇಂದಿನ ಪರಿಸ್ಥಿತಿ. ಈ ಹಣಕಾಸು ಸಂಸ್ಥೆಗಳು ಒಗ್ಗೂಡಿ, ಬಿಡುಗಡೆ ಮಾಡಿರುವ ವರದಿಯ ಪ್ರಕಾರ RCom ಸಮೂಹ 49 ಸಾವಿರ ಕೋಟಿ ರೂ ಸಾಲ ಮರುಪಾವತಿಸಬೇಕಿದೆ.

ಈ ಹಣಕಾಸು ಸಂಸ್ಥೆಗಳು ಈಗ ನ್ಯಾಷನಲ್ ಕಂಪನಿ ಲಾ ಟ್ರೈಬ್ಯುನಲ್ (NCLT) ಎದುರು ತಮ್ಮ ಅಹವಾಲನ್ನು ಸಲ್ಲಿಸಿದ್ದು, Reliance Telecom ವತಿಯಿಂದ 49,000 ಕೋಟಿ ರೂ ಮತ್ತು Reliance Infratel ವತಿಯಿಂದ 12,000 ಕೋಟಿ ರೂ ಸಾಲ ಮರುಪಾವತಿಯಾಗಬೇಕಿದೆ. ಇದು ವಂಚನೆಯ ಪ್ರಕರಣ ಎಂದು ಅಲವತ್ತುಕೊಂಡಿವೆ.

ಆದರೆ Rcom ಹೇಳುವುದೇ ಬೇರೆ. ಅದರ ವಾದವೇ ಬೇರೆಯಾಗಿದೆ. NCLT ನ್ಯಾಯಾಧಿಕರಣದ ಎದುರು ತಮ್ಮ ವಿರುದ್ಧ ಹಣಕಾಸು ಸಂಸ್ಥೆಗಳು ಸಲ್ಲಿಸಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ತಾನು ಅಷ್ಟೊಂದು ದೊಡ್ಡ ಮೊತ್ತದ ಸಾಲ ಕಟ್ಟುವ ಜರೂರತ್ತು ಇಲ್ಲ. ಅಷ್ಟೊಂದು ಭಾರೀ ಪ್ರಮಾಣದಲ್ಲಿ ತಾನು ಸಾಲ ಮರುಪಾವತಿಸುವ ಅವಶ್ಯಕತೆಯಿಲ್ಲ. ತಾನು ಯಾವುದೇ ವಂಚನೆ ಎಸಗಿಲ್ಲ. ಕೇವಲ 26 ಸಾವಿರ ಕೋಟಿ ರೂ ಮರುಪಾವತಿ ಮಾಡಬೇಕಿದೆ ಅಷ್ಟೇ ಎಂದು ವಾದಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ದೆಹಲಿ ಹೈಕೋರ್ಟ್​ ಸಹ Rcom ವಾದಕ್ಕೆ ಮನ್ನಣೆ ನೀಡಿದೆ. ಸದ್ಯಕ್ಕೆ Rcom ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ ಸೂಚಿಸಿದೆ. ಇದರ ಮಧ್ಯೆ ಸಾಲ ನೀಡಿರುವ ಹಣಕಾಸು ಸಂಸ್ಥೆಗಳ ಜೊತೆ Rcom ಮಾತುಕತೆ ನಡೆಸುತ್ತಿದ್ದು, ತಾನು ಪಡೆದಿರುವ ಸಾಲದ ಮೇಲಿನ ಶೇ. 70 ರಷ್ಟು ಮೊತ್ತವನ್ನಷ್ಟೇ ಮರುಪಾವತಿಸಬೇಕಿದೆ ಎಂದು ಹೇಳುತ್ತಾ ಬಂದಿದೆ. ಅಂತಿಮವಾಗಿ.. ದಿವಾಳಿಯೆದ್ದ ಅನಿಲ್ ಅಂಬಾನಿ ನೇತೃತ್ವದ Rcom ಸಮೂಹದಿಂದ ಎಷ್ಟರ ಮಟ್ಟಿಗೆ ಸಾಲ ಮರುಪಾವತಿಯಾಗಲಿದೆ ಎಂಬುದಷ್ಟೇ ಜನರ ಸದ್ಯದ ಕುತೂಹಲವಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ