Reliance- Future Deal: ಸುಪ್ರೀಮ್​ ಕೋರ್ಟ್​ನಲ್ಲಿ ಅಮೆಜಾನ್​ ಪರ ಆದೇಶ; ರಿಲಯನ್ಸ್​- ಫ್ಯೂಚರ್​ ಡೀಲ್​ಗೆ ಕಲ್ಲು

ಫ್ಯೂಚರ್ ರೀಟೇಲ್- ರಿಲಯನ್ಸ್ ಇಂಡಸ್ಟ್ರೀಸ್ ವ್ಯವಹಾರಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ಭಾರೀ ಹಿನ್ನಡೆ ಆಗಿದೆ. ಅಮೆಜಾನ್​ ಪಾಲಿಗೆ ಇದು ದೊಡ್ಡ ಗೆಲುವು. ಪ್ರಮುಖ ಬೆಳವಣಿಗೆಗಳನ್ನು 10 ಅಂಶಗಳಲ್ಲಿ ವಿವರಿಸಲಾಗಿದೆ.

Reliance- Future Deal: ಸುಪ್ರೀಮ್​ ಕೋರ್ಟ್​ನಲ್ಲಿ ಅಮೆಜಾನ್​ ಪರ ಆದೇಶ; ರಿಲಯನ್ಸ್​- ಫ್ಯೂಚರ್​ ಡೀಲ್​ಗೆ ಕಲ್ಲು
ಸುಪ್ರೀಂ​ ಕೋರ್ಟ್
Follow us
TV9 Web
| Updated By: Srinivas Mata

Updated on: Aug 06, 2021 | 2:04 PM

ಅಮೆಜಾನ್​ ಕಂಪೆನಿಗೆ ಸುಪ್ರೀಂ ಕೋರ್ಟ್​ನಲ್ಲಿ ಶುಕ್ರವಾರ ಭಾರೀ ವಿಜಯ ಸಿಕ್ಕಿದೆ. ಫ್ಯೂಚರ್ ಸಮೂಹದ ರೀಟೇಲ್ ಆಸ್ತಿಯನ್ನು ಖರೀದಿ ಮಾಡುವ 340 ಕೋಟಿ ಅಮೆರಿಕನ್ ಡಾಲರ್ ವ್ಯವಹಾರವನ್ನು ಮುಂದುವರಿಸುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಧ್ಯಸ್ಥಿಕೆ ಕೋರ್ಟ್​ನ ತೀರ್ಪನ್ನು ಬೆಂಬಲಿಸಿರುವ ಸುಪ್ರೀಂ ಕೋರ್ಟ್​, ಜೆಫ್​ ಬೆಜೋಸ್ ವರ್ಸಸ್ ಮುಕೇಶ್ ಅಂಬಾನಿ ಕಾನೂನು ಸಮರದಲ್ಲಿ ಖರೀದಿ ವ್ಯವಹಾರಕ್ಕೆ ತಡೆ ನೀಡಿದೆ. ಈ ದೊಡ್ಡ ಕಾನೂನು ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ವಿದ್ಯಮಾನಗಳನ್ನು 10 ಅಂಶಗಳಲ್ಲಿ ವಿವರಿಸುವುದಾದರೆ ಹೀಗಿರುತ್ತದೆ:

1. ಕಳೆದ ವರ್ಷ ರಿಲಯನ್ಸ್​ ಇಂಡಸ್ಟ್ರೀಸ್​ಗೆ ತನ್ನ ಆಸ್ತಿಯನ್ನು 24,731 ಕೋಟಿ ರೂಪಾಯಿಗೆ ಮಾರಾಟ ಮಾಡಲು ಮುಂದಾಗುವ ಮೂಲಕ ಫ್ಯೂಚರ್​ ಸಮೂಹ ತನ್ನೊಂದಿಗಿನ ಒಪ್ಪಂದವನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿ, ಅಮೆಜಾನ್​ನಿಂದ ಕೋರ್ಟ್​ ಮೆಟ್ಟಿಲೇರಲಾಗಿತ್ತು.

2. ಸಿಂಗಾಪೂರ್​ನ ತುರ್ತು ಮಧ್ಯಸ್ಥಿಕೆ ಕೇಂದ್ರವು 2020ರ ಅಕ್ಟೋಬರ್​ನಲ್ಲಿ ಆದೇಶ ನೀಡಿ, ಫ್ಯೂಚರ್​ ರೀಟೇಲ್​ ಅನ್ನು ರಿಲಯನ್ಸ್​ ರೀಟೇಲ್​ ಜತೆಗೆ ಸೇರ್ಪಡೆ ಮಾಡುವುದಕ್ಕೆ ತಡೆ ನೀಡಿತ್ತು. ಆ ಆದೇಶವು ಸಿಂಧುವಾಗಿದೆ ಹಾಗೂ ಜಾರಿಗೆ ಬರಬೇಕು ಎಂದು ಇಂದು ಸುಪ್ರೀಂ ಕೋರ್ಟ್ ಹೇಳಿದೆ.

3. ಮೂವರು ಸದಸ್ಯರ ಮಧ್ಯಸ್ಥಿಕೆ ನ್ಯಾಯಾಧೀಕರಣದಿಂದ ಪ್ರಕರಣದ ಅಹವಾಲು ಆಲಿಸಿದ್ದು, ರಿಲಯನ್ಸ್- ಫ್ಯೂಚರ್ ವಹಿವಾಟಿನಲ್ಲಿ ಅಂತಿಮ ನಿರ್ಧಾರ ಹೇಳಬೇಕಿದೆ.

4. ಮಧ್ಯಸ್ಥಗಾರರು ನೀಡಿದ್ದ ಆದೇಶವನ್ನು ಅಮಲುಗೊಳಿಸಬೇಕು ಎಂದು ಕೋರಿ ಅಮೆಜಾನ್​ನಿಂದ ದೆಹಲಿ ಹೈ ಕೋರ್ಟ್​ಗೆ ಮನವಿ ಮಾಡಲಾಗಿತ್ತು. ಏಕವ್ಯಕ್ತಿ ನ್ಯಾಯಮೂರ್ತಿಗಳ ಪೀಠವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿತ್ತು. ಕಿಶೋರ್​ ಬಿಯಾನಿ ನೇತೃತ್ವದ ಆಸ್ತಿಯನ್ನು ವಶಕ್ಕೆ ಪಡೆಯಬೇಕು ಹಾಗೂ ಅವರಿಗೆ ಏಕೆ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಬಾರದು ಎಂದು ಕೇಳಿತ್ತು.

5. ಫೆಬ್ರವರಿಯಲ್ಲಿ ಅದಕ್ಕೂ ಮೇಲ್ಮಟ್ಟದ ದೆಹಲಿ ಹೈಕೋರ್ಟ್​ ಪೀಠವು ಏಕವ್ಯಕ್ತಿ ನ್ಯಾಯಮೂರ್ತಿಗಳ ಆದೇಶಕ್ಕೆ ತಡೆ ನೀಡಿ, ರಿಲಯನ್ಸ್​- ಫ್ಯೂಚರ್ ವ್ಯವಹಾರಕ್ಕೆ ಇದ್ದ ತಡೆ ನಿವಾರಣೆ ಮಾಡಿತ್ತು. ಆ ನಂತರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು ಅಮೆಜಾನ್.

6. ದೆಹಲಿ ಹೈಕೋರ್ಟ್ ಆದೇಶ “ಕಾನೂನು ಬಾಹಿರ” ಮತ್ತು ನಿರಕುಂಶವಾದದ್ದು. ಕಂಪೆನಿಯು ಭಾರತದಲ್ಲಿ 650 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್​ ಮಧ್ಯಪ್ರವೇಶ ಮಾಡದಿದ್ದಲ್ಲಿ ತುಂಬಲಾರದ ಹಾನಿ ಆಗುತ್ತದೆ ಎಂದು ಅಮೆಜಾನ್ ಹೇಳಿತ್ತು.

7. ಫ್ಯೂಚರ್ ಆಸ್ತಿಗಾಗಿ ವಿಶ್ವದ ಶ್ರೀಮಂತರಿಬ್ಬರ ಮಧ್ಯದ ಕದನವಾಗಿ ಇದು ಏರ್ಪಟ್ಟಿತು. ಭಾರತದ ರೀಟೇಲ್ ವಲಯದ ಮೇಲೆ ಹಿಡಿತ ಸಾಧಿಸಲು ಇದು ನಿರ್ಣಾಯಕ ಹೋರಾಟ ಎನಿಸಿತ್ತು.

8. ಅಮೆಜಾನ್​ ಪ್ರಕಾರವಾಗಿ, 2019ರಲ್ಲಿ ತಾನು ಮಾಡಿಕೊಂಡ ಒಪ್ಪಂದದ ಅನ್ವಯ, ಯಾವುದೇ “ನಿರ್ಬಂಧಿತ ವ್ಯಕ್ತಿಗಳ” ಪಟ್ಟಿಯಲ್ಲಿ ಇರುವವರಿಗೆ ಫ್ಯೂಚರ್​ನಿಂದ ಆಸ್ತಿಯನ್ನು ಮಾರಲು ಸಾಧ್ಯವಿಲ್ಲ. ಅದರಲ್ಲಿ ರಿಲಯನ್ಸ್ ಕೂಡ ಇದೆ. ಅಮೆಜಾನ್​ಗೆ ಫ್ಯೂಚರ್​ ಕೂಪನ್ಸ್​ ಲಿಮಿಟೆಡ್​ನಲ್ಲಿ ಶೇ 49ರಷ್ಟು ಪಾಲಿದೆ. ಇದು ಫ್ಯೂಚರ್ ರೀಟೇಲ್​ನಲ್ಲಿ ಶೇ 9.82ರಷ್ಟು ಆಗುತ್ತದೆ.

9. ಭಾರತದ ಎರಡನೇ ಅತಿ ದೊಡ್ಡ ರೀಟೇಲರ್​ ಫ್ಯೂಚರ್​ಗೆ ಭಾರತದಲ್ಲಿ 1700ರಷ್ಟು ಮಳಿಗೆಗಳಿವೆ. ಒಂದು ವೇಳೆ ರಿಲಯನ್ಸ್ ಜತೆಗೆ ವ್ಯವಹಾರ ಮುರಿದುಬಿದ್ದಲ್ಲಿ ಅವುಗಳನ್ನೆಲ್ಲ ಮುಚ್ಚಬೇಕಾಗುತ್ತದೆ.

10. ಭಾರತದ ಆ್ಯಂಟಿ ಟ್ರಸ್ಟ್ ನಿಯಂತ್ರಕರು ಆರೋಪ ಮಾಡುವಂತೆ, 2019ರಲ್ಲಿ ಫ್ಯೂಚರ್​ನಲ್ಲಿ ಹೂಡಿಕೆ ಮಾಡುವಾಗ ಕೆಲವು ಅಂಶಗಳನ್ನು ಅಮೆಜಾನ್ ಮರೆಮಾಚಿದೆ ಎಂದಿದೆ ಎಂಬುದಾಗಿ ಕಳೆದ ತಿಂಗಳು ರಾಯಿಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಇದನ್ನೂ ಓದಿ: Future Group- Reliance Deal: ಫ್ಯೂಚರ್ ರೀಟೇಲ್- ರಿಲಯನ್ಸ್ ಇಂಡಸ್ಟ್ರೀಸ್ ವ್ಯವಹಾರ ಕುದುರದಿದ್ದಲ್ಲಿ 11 ಲಕ್ಷದಷ್ಟು ಉದ್ಯೋಗ ನಷ್ಟ

ಇದನ್ನೂ ಓದಿ: Reliance- Future deal: ದೆಹಲಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಫ್ಯೂಚರ್ ರೀಟೇಲ್​ಗೆ ನಿರಾಳ

(Big Blow To Future Retail And Reliance Deal In Supreme Court Here Is The 10 Points Explainer About Amazon Victory)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್