LPG Cashback Offer: ಪೇಟಿಎಂ ಮೂಲಕ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿ 2700 ರೂ. ತನಕ ಕ್ಯಾಶ್ಬ್ಯಾಕ್ ಪಡೆಯಿರಿ
ಪೇಟಿಎಂ ಮೂಲಕ ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಮಾಡಿದಲ್ಲಿ 2700 ರೂಪಾಯಿ ತನಕ ಕ್ಯಾಶ್ಬ್ಯಾಕ್ ಪಡೆಯುವಂತಹ ಅವಕಾಶ ಇದೆ.
ಭಾರತದ ಅತಿದೊಡ್ಡ ಮೊಬೈಲ್ ಪೇಮೆಂಟ್ಸ್ಗಳಲ್ಲಿ ಒಂದಾದ ಪೇಟಿಎಂನಿಂದ “3 pe 2700 Cashback Offer” (3 ಪೇ 2700 ಕ್ಯಾಶ್ಬಾಕ್ ಆಫರ್) ಆರಂಭಿಸಲಾಗಿದೆ. ಪೇಟಿಎಂ ಆ್ಯಪ್ ಮೂಲಕವಾಗಿ ಎಲ್ಪಿಜಿ ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡುವವರು ಕ್ಯಾಶ್ಬ್ಯಾಕ್ ಪಡೆಯಬಹುದು. ಈ ಆಫರ್ ಅಡಿಯಲ್ಲಿ ಪ್ರಯೋಜನ ಪಡೆಯುವುದಕ್ಕೆ ಹೊಸ ಗ್ರಾಹಕರಾಗಿರಬೇಕು. ಆರಂಭದ ಮೂರು ಎಲ್ಪಿಜಿ ಸಿಲಿಂಡರ್ಗೆ ರೂ.900ರ ತನಕ ಕ್ಯಾಶ್ಬ್ಯಾಕ್ ಪಡೆಯಬಹುದು. ಇನ್ನು ಈಗಾಗಲೇ ಪೇಟಿಎಂ ಬಳಸುತ್ತಿರುವವರಿಗೆ ರೂ. 5000ದ ತನಕ ಕ್ಯಾಶ್ಬ್ಯಾಕ್ ಕ್ರೆಡಿಟ್ ಅನ್ನು ಪ್ರತಿ ಖರೀದಿ ಅಥವಾ ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಮೇಲೆ ಗಳಿಸಲು ಅವಕಾಶ ಇದೆ. ಒಟ್ಟು ಕ್ಯಾಶ್ಬ್ಯಾಕ್ ಪಾಯಿಂಟ್ಸ್ ಅಥವಾ ಪೇಟಿಎಂ ಪಾಯಿಂಟ್ಸ್ ಅನ್ನು ಗಿಫ್ಟ್ಸ್ಗೆ ಅಥವಾ ವಿಶೇಷ ಕೊಡುಗೆಯಾಗಿ ರಿಡೀಮ್ ಮಾಡಬಹುದು. 3 ಪೇ 2700 ಕ್ಯಾಶ್ಬಾಕ್ ಆಫರ್ ಇಂಡೇನ್, ಎಚ್ಪಿ ಗ್ಯಾಸ್ ಮತ್ತು ಭಾರತ್ ಗ್ಯಾಸ್ಗೆ ಅನ್ವಯಿಸುತ್ತದೆ.
ಪೇಟಿಎಂ ಮೂಲಕ ಕ್ಯಾಶ್ಬ್ಯಾಕ್ ಪಡೆಯಬೇಕು ಅಂದರೆ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ: 1. https://paytm.com/cylinder-gas-rechargeಗೆ ಭೇಟಿ ನೀಡಿ, ‘Book a Cylinder’ ಆಯ್ಕೆಯನ್ನು ಮಾಡಿಕೊಂಡು, ಅದರ ಅಡಿಯಲ್ಲಿ ‘Gas Cylinder Booking’ ವಿಭಾಗವನ್ನು ಆರಿಸಿಕೊಳ್ಳಬೇಕು.
2. ಈಗ ಯಾರು ಅನಿಲ ಪೂರೈಕೆ ಮಾಡುತ್ತಾರೋ, ಅಂದರೆ ಸದ್ಯಕ್ಕೆ ಲಭ್ಯ ಇರುವಂತೆ ಭಾರತ್ ಗ್ಯಾಸ್, ಎಚ್ಪಿ ಗ್ಯಾಸ್, ಇಂಡೇನ್ ಇವಿಷ್ಟರಲ್ಲಿ ಒಂದನ್ನು ಆರಿಸಿಕೊಳ್ಳಬೇಕು.
3. ‘Proceed’ ಎಂಬುದರ ಮೇಲೆ ಕ್ಲಿಕ್ ಮಾಡಬೇಕು ಮತ್ತು ಗ್ರಾಹಕ ಸಂಖ್ಯೆ/ಜೋಡಣೆಯಾದ ಮೊಬೈಲ್ ಸಂಖ್ಯೆ ನಮೂದಿಸಬೇಕು.
4. ಬುಕ್ಕಿಂಗ್ ಮೊತ್ತವನ್ನು ನಮೂದಿಸಿ, ಪಾವತಿ ಮಾಡುವ ಬಗೆ ಯಾವುದು ಎಂದು ಆರಿಸಿಕೊಂಡು, ಮುಂದಿನ ಹಂತಕ್ಕೆ ತೆರಳಬೇಕು.
5. ಯಶಸ್ವಿಯಾಗಿ ಬುಕ್ಕಿಂಗ್ ಮಾಡಿದ ಮೇಲೆ ಖಾತ್ರಿ ಮಾಡುವಂಥ ಸಂದೇಶವು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ.
ಇನ್ನು “Track Your Cylinder” ಫೀಚರ್ ಅನ್ನು ಜೂನ್ನಲ್ಲಿ ಪೇಟಿಎಂನಿಂದ ಪರಿಚಯಿಸಲಾಗಿದೆ. ತಾವು ಬುಕ್ ಮಾಡಿದ ಸಿಲಿಂಡರ್ ಸ್ಥಿತಿ ಏನು ಎಂಬುದನ್ನು ಗ್ರಾಹಕರು ಟ್ರ್ಯಾಕ್ ಮಾಡಬಹುದು. ಜತೆಗೆ ಎಲ್ಪಿಜಿ ಸಿಲಿಂಡರ್ ಶಿಪ್ಮೆಂಟ್ ಮಾಹಿತಿ ಸಹ ಪಡೆಯಬಹುದು. ಆಟೋಮೆಟೆಡ್ ಆದ ಸಂದೇಶವು ಆ ನಂತರದ ರೀಫಿಲ್ಲಿಂಗ್ಗಳಲ್ಲಿ ಕಳಿಸಬಹುದು. ಇನ್ನು ಜೂನ್ ತಿಂಗಳಲ್ಲೇ Paytm Now, Pay Later ಅನ್ನು ಇನ್ನಷ್ಟು ಆರಾಮದಾಯಕ ಮಾಡಿದೆ ಪೇಟಿಎಂ. ಈ ಅನುಕೂಲ ಬಳಸಿಕೊಂಡರೆ ಗ್ರಾಹಕರು ಸಿಲಿಂಡರ್ ಮೊತ್ತವನ್ನು ಒಂದು ತಿಂಗಳ ನಂತರ ಪಾವತಿಸಬಹುದು. ಇದಕ್ಕೆ ಪೇಟಿಎಂ ಪೋಸ್ಟ್ಪೇಯ್ಡ್ ಎಂದು ಹೆಸರಿಡಲಾಗಿದೆ. ಕ್ಯಾಶ್ಬ್ಯಾಕ್ ಆಫರ್, ಆನ್ಲೈನ್ ಬುಕ್ಕಿಂಗ್, ಡೆಲಿವರಿ ಸ್ಥಿತಿ ತಿಳಿದುಕೊಳ್ಳುವುದಕ್ಕೆ ಟ್ರ್ಯಾಕ್ ಮಾಡಲು ಅನುಕೂಲ ಮಾಡಿಕೊಡುವುದು ಇವೆಲ್ಲವೂ ಪೇಟಿಎಂ ಮೂಲಕವೇ ಮಾಡಬಹುದಾದ್ದರಿಂದ ಎಲ್ಪಿಜಿ ಗ್ರಾಹಕರ ಪಾಲಿಗೆ ಇದು ಉತ್ತಮ ಆಯ್ಕೆ ಆಗಬಹುದು.
ಇದನ್ನೂ ಓದಿ: Paytm: ಇಂಡಸ್ಇಂಡ್ ಬ್ಯಾಂಕ್ ಎಫ್ಡಿಯ ಮೂಲಕವೂ ಪೇಟಿಎಂ ಬಳಕೆದಾರರು ತಕ್ಷಣ ಪಾವತಿ ಮಾಡಬಹುದು
(Cashback Offer Up to Rs 2700 For LPG Cylinder Booking Through Paytm)
Published On - 11:36 am, Fri, 6 August 21