Saving Habits: ಹಣ ಉಳಿತಾಯಕ್ಕೆ ಇಲ್ಲಿವೆ 9 ಸರಳ ಹವ್ಯಾಸಗಳು
ಹಣಕಾಸು ಉಳಿತಾಯಕ್ಕೆ ಸಂಬಂಧಿಸಿದಂತೆ ಇಲ್ಲಿ 9 ಪಾಠಗಳಿವೆ. ಇದನ್ನು ಅಳವಡಿಸಿಕೊಂಡರೆ ಕಾಲ ಮಿಂಚಿ ಹೋದ ಮೇಲೆ ಚಿಂತಿಸುವ ಅಗತ್ಯ ಕಂಡುಬರಲ್ಲ.
ಅನುಭವ ಕಲಿಸುವ ಪಾಠಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ದುಡ್ಡಿನ ವಿಚಾರದಲ್ಲಿ ನಮಗಿಂತ ದೊಡ್ಡವರು ಹೇಳುವ ಮಾತು ರೇಜಿಗೆ ಅನಿಸುತ್ತದೆ. ಆ ಕಾರಣದಿಂದಲೇ, ನಮಗೆ ಇವೆಲ್ಲ ಹೇಳಕ್ಕೆ ಬರಬೇಡಿ ಅಂತ ಅವರ ಮುಖಕ್ಕೇ ಹೇಳುವುದುಂಟು. ಆದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಯಾವ ಅನುಭವದ ತೂಕವೂ ಕಡಿಮೆ ಅಲ್ಲ. ನಿಮ್ಮ ವಯಸ್ಸೇನೋ ಗೊತ್ತಿಲ್ಲ; ಇಲ್ಲಿ ಕೆಲವು ಪಾಠಗಳಿವೆ. ಈಗಿನ್ನೂ ಉಳಿತಾಯವನ್ನು ಆರಂಭಿಸಿರುವವರಾದರೆ, ಇವುಗಳನ್ನು ಅಳವಡಿಸಿಕೊಳ್ಳುವುದಾದರೆ ವ್ಯತ್ಯಾಸವನ್ನು ಕಾಣಬಹುದು. ಇಲ್ಲಿ 9 ಪಾಠಗಳಿವೆ. ನಿಮಗೇನನ್ನಿಸುತ್ತದೆ ಎಂಬುದನ್ನು ಒಮ್ಮೆ ಆಲೋಚಿಸಿ.
ಪಾಠ 1: ಸಣ್ಣ ಉಳಿತಾಯ ಹವ್ಯಾಸ ಬೆಳೆಸಿಕೊಳ್ಳಿ ಚೆನ್ನಾಗಿ ಸುತ್ತಾಡುವ ಅಭ್ಯಾಸ ಇರುವವರು, ಫ್ಯಾನ್ಸಿ ಗ್ಯಾಜೆಟ್ಗಳನ್ನು ಖರೀದಿಸುವವರು, ಫ್ಯಾಷನ್ ಟ್ರೆಂಡ್ಗಳನ್ನು ಫಾಲೋ ಮಾಡುವವರು ಇಂಥದ್ದಕ್ಕೆ ಹೆಚ್ಚಿನ ಖರ್ಚು ಮಾಡುತ್ತಾರೆ. ಆದ್ದರಿಂದ ಶಿಸ್ತಿನಿಂದ ಸಣ್ಣ ಪ್ರಮಾಣದಲ್ಲಾದರೂ ಉಳಿತಾಯ ಆರಂಭಿಸುವುದು ಸವಾಲಾಗಿರುತ್ತದೆ. ಆದ್ದರಿಂದ ತುಂಬ ಸಣ್ಣ ಪ್ರಮಾಣದಲ್ಲಾದರೂ ತಿಂಗಳಿಗೆ ಇಂತಿಷ್ಟು ಮೊತ್ತ ಎಂಬುದನ್ನು ಉಳಿತಾಯ ಮಾಡುತ್ತಾ ಹೋಗಬೇಕು. ಇದರಿಂದ ಮೊದಲಿಗೆ ಶಿಸ್ತು ರೂಢಿಯಾಗುತ್ತದೆ.
2. 50-20-30 ನಿಯಮ ಪಾಲಿಸಿ ಮೊದಲಿಗೆ ಶಿಸ್ತು ರೂಢಿಯಾದ ಮೇಲೆ ಮೇಲೆ 50-20-30 ನಿಯಮವನ್ನು ಅನುಸರಿಸಬೇಕು. ಆದಾಯದ ಶೇ 50ರಷ್ಟು ಆದಾಯವನ್ನು ಜೀವನ ವೆಚ್ಚಕ್ಕೆ, ಶೇ 20ರಷ್ಟನ್ನು ಆಹಾರ, ಮನರಂಜನೆ, ಪ್ರಯಾಣಕ್ಕೆ. ಬಾಕಿ ಶೇ 30ರಷ್ಟು ಉಳಿತಾಯಕ್ಕೆ ಪಕ್ಕಕ್ಕೆ ಇಡಬೇಕು.
3. ಖರ್ಚುಗಳನ್ನು ಟ್ರ್ಯಾಕ್ ಮಾಡಿ ಮನೆ ಖರ್ಚುಗಳನ್ನು ನಿಭಾಯಿಸಬಿಡಬಹುದು ಎಂದು ಯುವಜನರಿಗೆ ಅನಿಸುತ್ತದೆ. ಮನೆ ಬಾಡಿಗೆ, ದಿನಸಿ ಮುಂತಾದವಕ್ಕೆ ಲೆಕ್ಕ ಇಟ್ಟುಕೊಳ್ಳದೆ ಬಳಸುತ್ತಾರೆ. ಆದ್ದರಿಂದ ಖರ್ಚು ಯಾವುದಕ್ಕೆ ಆಗುತ್ತದೆ ಎಂಬುದನ್ನು ಸರಿಯಾಗಿ ಅನುಸರಿಸಬೇಕು. ನಿರಂತರವಾಗಿ ಎಲ್ಲ ಖರ್ಚುಗಳನ್ನು ದಾಖಲಿಸಿಕೊಳ್ಳಬೇಕು. ಅನಗತ್ಯ ವೆಚ್ಚಗಳನ್ನು ತಗ್ಗಿಸಬೇಕು.
4. ಅನಗತ್ಯ ಸಾಲಗಳನ್ನು ಮಾಡಬೇಡಿ ತಮ್ಮ ಲೈಫ್ಸ್ಟೈಲ್ ಹಾಗೇ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಾಲದ ವ್ಯವಸ್ಥೆಯನ್ನು ಯುವ ಜನರು ಸಿಕ್ಕಾಪಟ್ಟೆ ಬಳಸುತ್ತಾರೆ. ಸಿಗುತ್ತದೆ ಅನ್ನೋ ಕಾರಣಕ್ಕಷ್ಟೇ ಪಡೆಯುತ್ತಾರೆ. ಆದರೆ ಈ ಸ್ವಭಾವ ಸಾಲದ ಬಲೆಯಲ್ಲಿ ಕೆಡವುತ್ತದೆ ಮತ್ತು ಕೆಟ್ಟ ಕ್ರೆಡಿಟ್ ರೇಟಿಂಗ್ಗೆ ಕಾರಣವಾಗುತ್ತದೆ. ಆದ್ದರಿಂದ ಅನ್ಸೆಕ್ಯೂರ್ಡ್ ಲೋನ್ಗಳಾದ ಕ್ರೆಡಿಟ್ ಕಾರ್ಡ್ ಲೋನ್ಗಳನ್ನು ಸಾಧ್ಯವಾದಷ್ಟೂ ಪಡೆಯಬಾರದು.
5. ತುರ್ತು ನಿಧಿ ಇರಲಿ ವೈದ್ಯಕೀಯ ವೆಚ್ಚಗಳಂಥ ಅನಿರೀಕ್ಷಿತ ತುರ್ತುಗಳಿಗೆ ನಿಧಿಯನ್ನು ಇಟ್ಟುಕೊಳ್ಳಬೇಕು. ಎಮರ್ಜೆನ್ಸಿ ಫಂಡ್ ಅನ್ನು ಯಾವುದೇ ತುರ್ತಿಗೆ ಬಳಸದೇ ಇದ್ದರೂ ಆದಾಯದ ಒಂದು ಭಾಗವನ್ನು ಪಕ್ಕಕ್ಕೆ ಇಡುವುದು ಉತ್ತಮ. ಇದರಿಂದ ಭವಿಷ್ಯದಲ್ಲಿ ಅನುಕೂಲವಾಗುತ್ತದೆ.
6. ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಆರಂಭಿಸಿ ಯುವ ಜನರು ಇನ್ನೂ ಹೂಡಿಕೆ ಆರಂಭ ಮಾಡಿಲ್ಲ ಅಂದರೆ, ಆ ಬಗ್ಗೆ ಇನ್ನೂ ಜ್ಞಾನ ಇಲ್ಲ ಎಂದರ್ಥ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಸ್ (SIPs) ಮೂಲಕ ದೀರ್ಘಾವಧಿ ಗುರಿಯೊಂದಿಗೆ ಹೂಡಿಕೆ ಮಾಡಬೇಕು. ಆದಾಯ ಮಟ್ಟ ಏನೇ ಆಗಿರಲಿ, ಶೇ 15ರಿಂದ 20ರಷ್ಟನ್ನು ಮ್ಯೂಚುವಲ್ ಫಂಡ್ಗಳನ್ನು ಹೂಡಿಕೆ ಮಾಡಬೇಕು.
7. ಷೇರಿನಲ್ಲಿ ಹೂಡಿಕೆ ಈಗಿನ ದಿನಮಾನದಲ್ಲಿ ಷೇರು ಮಾರುಕಟ್ಟೆ ಜ್ಞಾನ ಎಲ್ಲರಿಗೂ ಸುಲಭವಾಗಿ ಸಿಗುತ್ತಿದೆ ಹಾಗೂ ಸಂಪರ್ಕ ಸಾಧ್ಯವಾಗುತ್ತಿದೆ. ಒಟ್ಟಾರೆ ಆದಾಯದ ಪೈಕಿ ಹೂಡಿಕೆಯ ಒಂದು ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಹಾಕಬಹುದು. ಷೇರು ಮಾರುಕಟ್ಟೆ ನಿರಂತರವಾಗಿ ಏರಿಳಿತವಾಗುತ್ತದೆ, ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಹೂಡಿಕೆ ಉಳಿಸಿಕೊಳ್ಳಲು ಸಹಾಯ ಆಗುತ್ತದೆ.
8. ಇನ್ಷೂರೆನ್ಸ್ ಖರೀದಿಸಿ ಇನ್ಷೂರೆನ್ಸ್ ಖರೀದಿಸುವುದು ಇವತ್ತಿಗೂ ಬಹಳ ಮುಖ್ಯ. ತುರ್ತು ಸಂದರ್ಭದಲ್ಲಿ ಇದರಿಂದ ಸಹಾಯ ಆಗುತ್ತದೆ. ಹಣಕಾಸು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಯುವಜನರು ಆರೋಗ್ಯ ವಿಮೆ, ಜೀವ ವಿಮೆ ಮುಂತಾದವನ್ನು ಖರೀದಿಸಬೇಕು. ಇನ್ಷೂರೆನ್ಸ್ ಖರೀದಿಸುವ ಮೂಲಕ ತಮ್ಮ ಹಾಗೂ ಕುಟುಂಬದ ಭವಿಷ್ಯ ರಕ್ಷಣೆ ಮಾಡಿಕೊಳ್ಳಬಹುದು.
9. ಕ್ರೆಡಿಟ್ ಕಾರ್ಡ್ನ ಮಿನಿಮಮ್ ಬ್ಯಾಲೆನ್ಸ್ ಪಾವತಿಸುವ ಅಭ್ಯಾಸ ಬಿಡಿ ಕೆಲವರಿಗೆ ಕ್ರೆಡಿಟ್ ಕಾರ್ಡ್ ಬಿಲ್ ಮುಂದಕ್ಕೆ ಹಾಕಿಕೊಂಡು ಹೋಗುವ ಅಭ್ಯಾಸ ಇರುತ್ತದೆ. ಕನಿಷ್ಠ ಮೊತ್ತ ಪಾವತಿಸಿದರೆ ಸಾಕು ಎಂಬ ಲೆಕ್ಕಾಚಾರದಲ್ಲಿ ಹೀಗೆ ಮಾಡುತ್ತಾರೆ. ಹಣ ಉಳಿತಾಯ ಮಾಡಬೇಕು ಅಂದರೆ ಪೂರ್ತಿಯಾಗಿ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಮಾಡಬೇಕು; ಈ ಅಂಶವನ್ನು ನೆನಪಲ್ಲಿ ಇಡಬೇಕು.
(ಲೇಖನ ಮೂಲ: ಮನಿ9.ಕಾಮ್)
ಇದನ್ನೂ ಓದಿ: Gold Loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ 7.5 ಬಡ್ಡಿ ದರಕ್ಕೆ ಸಿಗುತ್ತಿದೆ ಗೋಲ್ಡ್ ಲೋನ್
(Personal Finance 9 Habits Of Savings To Be Developed By Millennials)