Viral: ಹಣದ ವಿಚಾರವಾಗಿ ಭಾರತೀಯ ಮಹಿಳೆಯರು ತಮ್ಮ ಗಂಡಂದಿರನ್ನು ನಂಬಲ್ಲವಂತೆ; ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಹಣ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಅದರಲ್ಲೂ ಉಳಿತಾಯ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದ್ರೆ ಮಹಿಳೆಯರು ಹಾಗೋ ಹೀಗೋ ಸ್ವಲ್ಪ ಸ್ವಲ್ಪ ಹಣವನ್ನೇ ಕೂಡಿಟ್ಟು ಉಳಿತಾಯ ಮಾಡುತ್ತಾರೆ. ಈ ವಿಚಾರ ಎಲ್ರಿಗೂ ಗೊತ್ತಿರೋದೇ. ಜೊತೆಗೆ ಮಹಿಳೆಯರಿಗೆ ದುಡ್ಡು ಕಾಸಿನ ವಿಚಾರದಲ್ಲಿ ಗಂಡನ ಮೇಲೆ ಅನ್ನೋದೇ ಇಲ್ಲವಂತೆ. ಅದರಲ್ಲೂ 90% ರಷ್ಟು ಭಾರತೀಯ ಮಹಿಳೆಯರು ಬ್ಯಾಂಕ್ ಎಫ್.ಡಿಯಲ್ಲಿ ನಾಮಿನಿಯಾಗಿ ತಮ್ಮ ಗಂಡನ ಹೆಸರನ್ನು ನಮೂದಿಸುವುದಿಲ್ಲವಂತೆ ಈ ಬಗ್ಗೆ ಮೋಟಿವೇಷನಲ್ ಸ್ಪೀಕರ್ ಒಬ್ರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಉಳಿತಾಯದ ವಿಷಯಕ್ಕೆ ಬಂದಾಗ ಮಹಿಳೆಯರು ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಭವಿಷ್ಯದ ದೃಷ್ಟಿಯಿಂದ ಅವರು ಕೆಲವು ರೀತಿಯಲ್ಲಿ ಹಣವನ್ನು ಉಳಿಸಲು ಪ್ರಯತ್ನಿಸುತ್ತಾರೆ. ಜೊತೆಗೆ ಗಂಡಂದಿರು ದುಂದು ವೆಚ್ಚ ಮಾಡ್ತಾರೆ, ಅವರು ಹಣ ಉಳಿತಾಯ ಮಾಡಲು ಸಾಧ್ಯವಿಲ್ಲ ಎಂದು ಹೆಚ್ಚಿನ ಮಹಿಳೆಯರು ಹಣ ಕೂಡಿಡುವ ಬಗ್ಗೆಯೂ ಗಂಡಂದಿರಿಂದ ಮುಚ್ಚಿಡುತ್ತಾರೆ. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ ಹೆಚ್ಚಿನ ಭಾರತೀಯ ಮಹಿಳೆಯರು ಹಣದ ವಿಚಾರದಲ್ಲಿ ತಮ್ಮ ಗಂಡಂದಿರನ್ನು ಚೂರು ಕೂಡಾ ನಂಬಲ್ಲವಂತೆ. ಗಂಡ ಎಫ್.ಡಿಯಲ್ಲಿ ಹೆಂಡ್ತಿ ಹೆಸ್ರನ್ನು ನಾಮಿನಿಯಾಗಿ ಮಾಡಿದ್ರೆ, 90% ರಷ್ಟು ಭಾರತೀಯ ಮಹಿಳೆಯರು ಬ್ಯಾಂಕ್ ಎಫ್.ಡಿಯಲ್ಲಿ ನಾಮಿನಿಯಾಗಿ ತಮ್ಮ ಗಂಡನ ಹೆಸರನ್ನು ನಮೂದಿಸುವುದಿಲ್ಲವಂತೆ. ಈ ಬಗ್ಗೆ ಮೋಟಿವೇಷನಲ್ ಸ್ಪೀಕರ್ ಒಬ್ರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೊಲ್ಕತ್ತಾ ಮೂಲದ ಮೋಟಿವೇಷನಲ್ ಸ್ಪೀಕರ್ ಇಮ್ತಿಯಾಝ್ ಖಾನ್ (by_imtiyaz_Khan) ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಹಣದ ವಿಚಾರಕ್ಕೆ ಬಂದ್ರೆ ಹೆಚ್ಚಿನ ಭಾರತೀಯ ಮಹಿಳೆಯರು ತಮ್ಮ ಗಂಡಂದಿರನ್ನು ನಂಬುವುದಿಲ್ಲ ಎಂಬುವುದನ್ನು ಹೇಳಿದ್ದಾರೆ. “ನಾನು ನಿರೂಪಕರೊಬ್ಬರ ಜೊತೆ ಮಾತನಾಡಿದ ಸಂದರ್ಭದಲ್ಲಿ ಅವರು ಕೆಲವೊಂದು ಇಂಟರೆಸ್ಟಿಂಗ್ ಸಂಗತಿಯನ್ನು ನನ್ನೊಂದಿಗೆ ಹಂಚಿಕೊಂಡ್ರು. ಅದೇನೆಂದ್ರೆ 90% ರಷ್ಟು ಭಾರತದಲ್ಲಿನ ವಿವಾಹಿತ ಮಹಿಳೆಯರು ಬ್ಯಾಂಕ್ ಎಫ್.ಡಿಯಲ್ಲಿ ನಾಮಿನಿಯಾಗಿ ತಮ್ಮ ಗಂಡನ ಹೆಸರನ್ನು ನಮೂದಿಸಿರುವುದಿಲ್ಲ. ಅವರು ತಮ್ಮ ಮಕ್ಕಳು ಅಥವಾ ತಮ್ಮ ಪೋಷಕರ ಹೆಸರನ್ನು ನಮೂದಿಸಿರುತ್ತಾರೆ. ಆದ್ರೆ ಗಂಡಂದಿರ ವಿಚಾರಕ್ಕೆ ಬಂದ್ರೆ ಹೆಚ್ಚಿನ ಸಂದರ್ಭದಲ್ಲಿ ಅವರು ತಮ್ಮ ಪತ್ನಿಯ ಹೆಸರನ್ನೇ ನಮೂದಿಸಿರುತ್ತಾರೆ. ಒಟ್ಟಾರೆಯಾಗಿ ಇದೆಲ್ಲವನ್ನು ನೋಡಿದಾಗ ಭಾರತೀಯ ಮಹಿಳೆಯರು ತಮ್ಮ ಗಂಡಂದಿರನ್ನು ನಂಬುವುದಿಲ್ಲ ಎಂಬುವುದು ಸ್ಪಷ್ಟವಾಗಿ ಕಾಣಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕುಡಿದು ರಾಂಗ್ ಲೊಕೇಶನ್ ಕಡೆ ಗಾಡಿ ಓಡಿಸಿಕೊಂಡು ಹೋದ ಚಾಲಕ; ಭಯದಲ್ಲಿ ಚಲಿಸುತ್ತಿದ್ದ ಆಟೋದಿಂದ ಹೊರ ಜಿಗಿದ ಮಹಿಳೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕೂಡಾ ಹಂಚಿಕೊಂಡಿದ್ದು, ಒಬ್ಬ ಬಳಕೆದಾರರು “ಹೆಚ್ಚಿನ ಸಂದರ್ಭದಲ್ಲಿ ಹೆಂಡತಿ ತೀರಿಕೊಂಡರೆ ಇನ್ನೊಂದು ಮದುವೆಯಾಗುತ್ತಾನೆ ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುವುದಿಲ್ಲ, ಆದ್ರೆ ಮಹಿಳೆಯರು ಈ ರೀತಿ ಮಾಡುವುದಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಹಿಳೆಯರು ತಮ್ಮ ತಾಯಂದಿರು ಎದುರಿಸಿರುವ ಸವಾಲುಗಳನ್ನು ನೋಡಿಯೇ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಿರುತ್ತಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬರು ʼನಾನು ಬ್ಯಾಂಕ್‌ನಲ್ಲಿಯೇ ಕೆಲಸ ಮಾಡುತ್ತಿರುವುದು, ಅಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ಗಂಡಂದಿರನ್ನೇ ನಾಮಿನಿ ಮಾಡಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ