ಸತ್ತ ವ್ಯಕ್ತಿಯ ಜೀವ ಉಳಿಸಿದ ರಸ್ತೆ ಗುಂಡಿ; ಹೊಸ ವರ್ಷದಂದೇ ನಡೆಯಿತು ಪವಾಡ!
ಹೊಸ ವರ್ಷದ ದಿನವೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದ ಕೊಲ್ಹಾಪುರದ ವ್ಯಕ್ತಿಯ ಮೃತದೇಹವನ್ನು ಅವರ ಮನೆಗೆ ಆಂಬುಲೆನ್ಸ್ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು. ಹೊಸ ವರ್ಷದ ಮೊದಲ ದಿನವೇ ಮನೆಯಲ್ಲಿ ಸೂತಕ ಆವರಿಸಿದ್ದರಿಂದ ಅವರ ಸಂಬಂಧಿಕರು ಬಹಳ ದುಃಖಿತರಾಗಿದ್ದರು. ಆದರೆ, ಮನೆಗೆ ಹೋಗುವ ದಾರಿಯಲ್ಲಿ ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಅಲ್ಲಿನ ರಸ್ತೆ ಗುಂಡಿಗಳಿಗೆ ಊರಿನವರು ದಿನವೂ ಬಾಯಿಗೆ ಬಂದ ಹಾಗೆ ಶಾಪ ಹಾಕುವುದು ಸಾಮಾನ್ಯವಾಗಿಬಿಟ್ಟಿತ್ತು. ಆದರೆ, ಅದೇ ರಸ್ತೆ ಗುಂಡಿ ಒಬ್ಬ ವ್ಯಕ್ತಿಯ ಜೀವ ಉಳಿಸಿದೆ ಎಂದರೆ ನೀವು ನಂಬುತ್ತೀರಾ? ಇದನ್ನು ಹೊಸ ವರ್ಷದ ಪವಾಡವೆಂದೇ ಪರಿಗಣಿಸಲಾಗುತ್ತಿದೆ.
ಕೊಲ್ಲಾಪುರ: ಕೊಲ್ಲಾಪುರದಲ್ಲಿ ವಾಸವಾಗಿರುವ ಪಾಂಡುರಂಗ ಉಲ್ಪೆ ಎಂಬುವವರು ಹೊಸ ವರ್ಷದ ರಾತ್ರಿಯೇ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಎಗ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಹೀಗಾಗಿ, ಅವರ ಅಂತ್ಯಕ್ರಿಯೆ ನಡೆಸಲು ಶವವನ್ನು ಆಂಬುಲೆನ್ಸ್ನಲ್ಲಿಯೇ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಪವಾಡವೊಂದು ನಡೆದಿದೆ. ದಾರಿಯಲ್ಲಿದ್ದ ರಸ್ತೆ ಗುಂಡಿಯಿಂದಾಗಿ ಆ ವ್ಯಕ್ತಿ ಮರುಜನ್ಮ ಪಡೆದಿದ್ದಾರೆ. ಹೌದು, ಈ ಸುದ್ದಿ ವಿಚಿತ್ರ ಎನಿಸಿದರೂ ಇದು ನೂರಕ್ಕೆ ನೂರು ಸತ್ಯ.
ಆ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಆದರೆ, ಅಸಲಿಗೆ ಆ ವ್ಯಕ್ತಿ ಸತ್ತಿರಲೇ ಇಲ್ಲ. ಅವರ ಕುಟುಂಬಸ್ಥರು ಆಂಬ್ಯುಲೆನ್ಸ್‌ನಲ್ಲಿ ಅವರ ದೇಹವನ್ನು ಮನೆಗೆ ಕೊಂಡೊಯ್ಯುವಾಗ, ದಾರಿಯಲ್ಲಿ ರಸ್ತೆ ಗುಂಡಿಯಿಂದ ಆ್ಯಂಬುಲೆನ್ಸ್ ಚಾಲಕ ಗಟ್ಟಿಯಾಗಿ ಬ್ರೇಕ್ ಹಾಕಿದ್ದ. ಆಗ ಆ್ಯಂಬುಲೆನ್ಸ್ ಜೋರಾಗಿ ಅಲುಗಾಡಿದ್ದು, ಮೃತಪಟ್ಟಿದ್ದಾರೆ ಎನ್ನಲಾಗಿದ್ದ ವೃದ್ಧ ಉಸಿರಾಡಲಾರಂಭಿಸಿದ್ದಾರೆ. ಅಲ್ಲದೆ, ಶಾಕ್ನಿಂದ ಎದ್ದು ಕುಳಿತಿದ್ದಾರೆ. ಹೆಣ ಎದ್ದು ಕುಳಿತಿದ್ದು ನೋಡಿ ಆ್ಯಂಬುಲೆನ್ಸ್ ಸಿಬ್ಬಂದಿಯೂ ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಕ್ಯಾಬ್ ಡ್ರೈವರ್‌ಗೆ ಥಳಿಸಿದ ಮಹಿಳೆ; ವಿಡಿಯೋ ವೈರಲ್
ಈ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ. ಇದನ್ನು ನೀವು ಹೊಸ ವರ್ಷ 2025ರ ಪವಾಡ ಎಂದು ಕರೆಯಲಾಗುತ್ತಿದೆ. ಇಲ್ಲಿ ಪಾಂಡುರಂಗ ತಾತ್ಯಾ ಉಲ್ಪೆ ಎಂಬ ವೃದ್ಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದರು. ಕುಟುಂಬಸ್ಥರು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದು, ಆಂಬ್ಯುಲೆನ್ಸ್ ಮೂಲಕ ವೃದ್ಧನ ಮೃತದೇಹವನ್ನು ಮನೆಗೆ ತರಲಾಯಿತು. ಆಂಬ್ಯುಲೆನ್ಸ್ ದಾರಿಯಲ್ಲಿ ಒಂದು ದೊಡ್ಡ ರಸ್ತೆ ಗುಂಡಿಯಲ್ಲಿ ಇಳಿದಾಗ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ಪಾಂಡುರಂಗ ಇದ್ದಕ್ಕಿದ್ದಂತೆ ಉಸಿರಾಡಲು ಪ್ರಾರಂಭಿಸಿದರು.
ಇದನ್ನೂ ಓದಿ: ಕಚೇರಿಯಲ್ಲೇ ಮಹಿಳೆ ಜತೆ ರಾಸಲೀಲೆ: ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಡಿವೈಎಸ್ಪಿ ಅಮಾನತು
ತಕ್ಷಣ ಪಾಂಡುರಂಗ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಆರೋಗ್ಯವಾಗಿದ್ದಾರೆ ಎಂದು ಘೋಷಿಸಿದರು. ಈ ಘಟನೆಯ ನಂತರ ಎಲ್ಲರಿಗೂ ಆಶ್ಚರ್ಯವಾಗಿದೆ. ಇಂತಹ ಪವಾಡ ಹೇಗೆ ಸಂಭವಿಸಿತು ಎಂದು ಸ್ವತಃ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ಮಾಹಿತಿಯ ಪ್ರಕಾರ, ಘಟನೆಯು ಕಸ್ಬಾ ಬಾವ್ಡಾ ಪ್ರದೇಶದಲ್ಲಿ ನಡೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ