AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಚೇರಿಯಲ್ಲೇ ಮಹಿಳೆ ಜತೆ ರಾಸಲೀಲೆ: ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಡಿವೈಎಸ್​ಪಿ ಅಮಾನತು

ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಜಮೀನು ವಿಚಾರಕ್ಕೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ಡಿವೈಎಸ್‌ಪಿ ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯಿಂದಾಗಿ ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಇದರಿಂದ ಎಚ್ಚೆತ್ತ ಡಿಜಿ, ಡಿವೈಎಸ್​ಪಿ ರಾಮಚಂದ್ರಪ್ಪ ಎನ್ನುವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಚೇರಿಯಲ್ಲೇ ಮಹಿಳೆ ಜತೆ ರಾಸಲೀಲೆ: ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಡಿವೈಎಸ್​ಪಿ ಅಮಾನತು
Madhugiri Dysp Ramachandrappa,
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Jan 03, 2025 | 9:38 PM

Share

ತುಮಕೂರು, (ಜನವರಿ 03): ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗದ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಲಾಗಿದೆ. ಜಮೀನು ವಿಚಾರಕ್ಕೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ತಮ್ಮ ಕಚೇರಿಯಲ್ಲೇ ರಾಸಲೀಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಿ ಇಂದು (ಜನವರಿ 03) ಡಿಜಿ ಆದೇಶ ಹೊರಡಿಸಿದ್ದಾರೆ.

ಘಟನೆ ಹಿನ್ನೆಲೆ

ಪಾವಗಡ ಮೂಲದ ಮಹಿಳೆ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾಡಬೇಕು ಎಂದು ಡಿವೈಎಸ್ ಪಿ ಕಚೇರಿಗೆ ಕರೆಸಲಾಗಿತ್ತು. ಈ ವೇಳೆ ಮಹಿಳೆಯನ್ನ ಪುಸಲಾಯಿಸಿರುವ ಡಿವೈಎಸ್‌ಪಿ ರಾಮಚಂದ್ರಪ್ಪ ದೂರು ಕೊಡಲು ಬಂದ ಮಹಿಳೆಯನ್ನ ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ತನಗೆ ನ್ಯಾಯ ಸಿಗಬೇಕಾದರೆ ಇಂಥ ಕೆಲಸವನ್ನೂ ಮಾಡಬೇಕು ಎಂದು ಮಹಿಳೆ ಡಿವೈಎಸ್‌ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ. ಇದಾದ ನಂತರ ಡಿವೈಎಸ್‌ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ್ದಾರೆ.

ಇದನ್ನೂ ಓದಿ: ಕಚೇರಿಯಲ್ಲೇ ಮಹಿಳೆ ಜೊತೆ ಚಕ್ಕಂದ: ಅಮಾನತು ಬೆನ್ನಲ್ಲೇ ಡಿವೈಎಸ್‌ಪಿ ರಾಮಚಂದ್ರಪ್ಪ ಅರೆಸ್ಟ್..!

ಆದರೆ, ಡಿವೈಎಸ್‌ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯ ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಮಹಿಳೆಯೊಂದಿಗೆ ಬಲವಂತವಾಗಿ ನಡೆದುಕೊಳ್ಳುತ್ತಿದ್ದ ದೃಶ್ಯಗಳು ಸೆರೆ ಸಿಕ್ಕಿವೆ. ಇದೀಗ ರಾಸಲೀಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಡಿವೈಎಸ್​ಪಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆ, ಮಕ್ಕಳು ಸೇರಿದಂತೆ ರಾಜ್ಯದ ಜನತೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಇನ್ನೂ ಅಸಹ್ಯಕರವಾಗಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವವರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:06 pm, Fri, 3 January 25