ಗಡಿಯಲ್ಲಿ ಚೀನಾ ಮತ್ತೆ ಕಿರಿಕ್; ಲಡಾಖ್‌ನಲ್ಲಿ 2 ಕೌಂಟಿಗಳ ರಚನೆಗೆ ಭಾರತ ವಿರೋಧ
ಹೋಟಾನ್‌ನಲ್ಲಿ ಚೀನಾ ಎರಡು ಹೊಸ ಕೌಂಟಿಗಳನ್ನು ರಚಿಸುವುದನ್ನು ಭಾರತ ವಿರೋಧಿಸಿದೆ. ಈ ಪ್ರದೇಶವು ಲಡಾಖ್‌ನ ಭಾಗವಾಗಿದೆ ಎಂದು ಪ್ರತಿಪಾದಿಸಿದೆ. ಲಡಾಖ್‌ನಲ್ಲಿರುವ ಚೀನಾದ ಹೊಸ "ಕೌಂಟಿಗಳನ್ನು" ಭಾರತ ಬಲವಾಗಿ ಪ್ರತಿಭಟಿಸಿದೆ. ಅಕ್ಸಾಯ್ ಚಿನ್‌ನ ದೊಡ್ಡ ಭಾಗಗಳೊಂದಿಗೆ ಹೊಸ ಕೌಂಟಿಗಳನ್ನು ರಚಿಸುವುದಕ್ಕಾಗಿ ಭಾರತವು ಚೀನಾಕ್ಕೆ ಎಚ್ಚರಿಕೆ ನೀಡಿದ್ದು, ಇದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ. ಈ ಪ್ರದೇಶಗಳು ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ವ್ಯಾಪ್ತಿಗೆ ಸೇರುವುದರಿಂದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಯ ಕುರಿತು ಚೀನಾಕ್ಕೆ ಆಕ್ಷೇಪ ಸಲ್ಲಿಸಿರುವುದಾಗಿ ಭಾರತ ಹೇಳಿದೆ.
ನವದೆಹಲಿ: ಭಾರತದ ಗಡಿ ಭಾಗದಲ್ಲಿರುವ ಲಡಾಖ್‌ನಲ್ಲಿ ಚೀನಾ ಮತ್ತೆ ತಗಾದೆ ತೆಗೆದಿದೆ. ಲಡಾಖ್‌ನ ಅಕ್ಸಾಯ್ ಚಿನ್‌ನಲ್ಲಿ ಅಕ್ರಮವಾಗಿ ಚೀನಾ 2 ಕೌಂಟಿಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿರುವುದರಿಂದ ಇದನ್ನು ಭಾರತ ಬಲವಾಗಿ ಖಂಡಿಸಿದೆ. “ಈ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶದ ಅಕ್ರಮ ಚೀನೀ ಆಕ್ರಮಣವನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ” ಎಂದು ಚೀನಾ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳನ್ನು ಸ್ಥಾಪಿಸುವ ಕುರಿತು ವಿದೇಶಾಂಗ ಸಚಿವಾಲಯ ಹೇಳಿದೆ.
ಲಡಾಖ್‌ನ ಭಾಗವಾಗಿರುವ ಚೀನಾದ ಹೊಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಘೋಷಣೆಯ ಕುರಿತು ಭಾರತವು ಚೀನಾದೊಂದಿಗೆ ಗಂಭೀರ ಪ್ರತಿಭಟನೆ ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ತಿಳಿಸಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಈ ಕೌಂಟಿಗಳ ಅಧಿಕಾರ ವ್ಯಾಪ್ತಿಯ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಡಾಖ್‌ನ ಡೆಮ್‌ಚೋಕ್, ಡೆಪ್ಸಾಂಗ್ನಲ್ಲಿ ಭಾರತೀಯ ಸೇನೆಯಿಂದ ಗಸ್ತು ಪುನರಾರಂಭ
ಲಡಾಖ್‌ನಲ್ಲಿ ಚೀನಾದ ಅಕ್ರಮ ಆಕ್ರಮಣವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಜೈಸ್ವಾಲ್ ಹೇಳಿದ್ದಾರೆ. ಹೊಸ ಕೌಂಟಿಗಳ ರಚನೆಯು ಈ ಪ್ರದೇಶದ ಮೇಲೆ ನಮ್ಮ ಸಾರ್ವಭೌಮತ್ವದ ಬಗ್ಗೆ ಭಾರತದ ದೀರ್ಘಕಾಲೀನ ಮತ್ತು ಸ್ಥಿರವಾದ ನಿಲುವಿನ ಮೇಲೆ ಪ್ರಭಾವ ಬೀರುವುದಿಲ್ಲ. ಇದು ಚೀನಾದ ಅಕ್ರಮಕ್ಕೆ ಒಪ್ಪಿಗೆ ನೀಡುವುದಿಲ್ಲ. ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಚೀನಾದ ಕಡೆಯಿಂದ ಗಂಭೀರ ಪ್ರತಿಭಟನೆಯನ್ನು ಸಲ್ಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
🚨 BREAKING :
India lodges STRONG protest with China over Beijing establishing new counties in the area covering ‘Aksai Chin’.
MEA: “Parts of jurisdiction of these so-called counties fall in India’s Union Territory of Ladakh.” 🎯 pic.twitter.com/lv1I0W7mp3
— Megh Updates 🚨™ (@MeghUpdates) January 3, 2025
ಇದನ್ನೂ ಓದಿ: ಚೀನಾದಲ್ಲಿ ಕೊರೊನಾದಂತೇ ಹೊಸ ವೈರಸ್ ಪತ್ತೆ; ಮತ್ತೊಮ್ಮೆ ಹೆಲ್ತ್ ಎಮರ್ಜೆನ್ಸಿಯ ಆತಂಕ
ಟಿಬೆಟ್‌ನ ಯಾರ್ಲುಂಗ್ ತ್ಸಾಂಗ್ಪೋ ನದಿಯಲ್ಲಿ ಚೀನಾ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸುವ ಬಗ್ಗೆ ಸರ್ಕಾರಕ್ಕೆ ತಿಳಿದಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. ಚೀನಾ ಸ್ಥಾಪಿಸುವುದಾಗಿ ಘೋಷಿಸಿರುವ ಈ ಕೌಂಟಿಗಳ ಕೆಲವು ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಬರುತ್ತವೆ. ಚೀನಾದ ಈ ಕ್ರಮವು ಅದರ ಸಾರ್ವಭೌಮತೆಗೆ ಸಂಬಂಧಿಸಿದಂತೆ ನವದೆಹಲಿಯ ಸ್ಥಿರವಾದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಸುಮಾರು 5 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಗಡಿ ಮಾತುಕತೆಯನ್ನು ಎರಡು ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳು ಪುನರಾರಂಭಿಸಿದ ದಿನಗಳ ನಂತರ ಎರಡು ಕೌಂಟಿಗಳನ್ನು ಸ್ಥಾಪಿಸುವ ಕುರಿತು ಚೀನಾದ ಘೋಷಣೆ ಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Fri, 3 January 25