AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಡಾಖ್​ನ ಡೆಮ್‌ಚೋಕ್, ಡೆಪ್ಸಾಂಗ್​ನಲ್ಲಿ ಭಾರತೀಯ ಸೇನೆಯಿಂದ ಗಸ್ತು ಪುನರಾರಂಭ

ಭಾರತೀಯ ಸೇನೆಯು ಡೆಪ್ಸಾಂಗ್ ಮತ್ತು ಡೆಮ್​ಚೋಕ್ ಎರಡರಲ್ಲೂ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗುವುದನ್ನು ಪುನರಾರಂಭಿಸುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. ಅಕ್ಟೋಬರ್‌ನಲ್ಲಿ ಪೂರ್ವ ಲಡಾಖ್‌ನಲ್ಲಿ ಎಲ್‌ಎಸಿ ಉದ್ದಕ್ಕೂ ಗಸ್ತು ತಿರುಗಲು ಚೀನಾದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಭಾರತ ಘೋಷಿಸಿತ್ತು. ಇದು 4 ವರ್ಷಗಳ ಸುದೀರ್ಘ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.

ಲಡಾಖ್​ನ ಡೆಮ್‌ಚೋಕ್, ಡೆಪ್ಸಾಂಗ್​ನಲ್ಲಿ ಭಾರತೀಯ ಸೇನೆಯಿಂದ ಗಸ್ತು ಪುನರಾರಂಭ
ಭಾರತೀಯ ಸೇನೆ
ಸುಷ್ಮಾ ಚಕ್ರೆ
|

Updated on:Nov 07, 2024 | 6:32 PM

Share

ನವದೆಹಲಿ: ಭಾರತ-ಚೀನಾ ಬಾಂಧವ್ಯದಲ್ಲಿ ಮಹತ್ವದ ಬೆಳವಣಿಗೆ ನಡೆದ ಕೆಲವೇ ದಿನಗಳ ನಂತರ ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಎರಡೂ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಗಸ್ತು ಪುನರಾರಂಭವಾಗಿದೆ ಎಂದು ವಿದೇಶಾಂಗ ಸಚಿವಾಲಯ ಇಂದು (ಗುರುವಾರ) ದೃಢಪಡಿಸಿದೆ. ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಚೀನಾದೊಂದಿಗಿನ ಒಪ್ಪಂದದ ನಂತರ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಎರಡರಲ್ಲೂ ಗಸ್ತು ಪುನರಾರಂಭವಾಗಿದೆ ಎಂದು ಹೇಳಿದರು.

ಕೆಲವು ಚೆಕ್‌ಪೋಸ್ಟ್‌ಗಳಿಗೆ ಗಸ್ತು ತಿರುಗಲು ಅವಕಾಶವಿಲ್ಲ ಎಂಬ ಮಾಧ್ಯಮ ವರದಿಗಳನ್ನು ಅವರು ತಿರಸ್ಕರಿಸಿದರು. ಭಾರತೀಯ ಸೇನೆಯು ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಗಸ್ತು ತಿರುಗಲು ಪ್ರಾರಂಭಿಸಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: US Presidential Poll: ಡೊನಾಲ್ಡ್ ಟ್ರಂಪ್ ಗೆಲುವು, ಐತಿಹಾಸಿಕ ವಿಜಯಕ್ಕಾಗಿ ಸ್ನೇಹಿತನ ಅಭಿನಂದಿಸಿದ ಮೋದಿ

ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಆ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಚೀನಾದೊಂದಿಗಿನ ಯಶಸ್ವಿ ಒಪ್ಪಂದದ ನಂತರ ಈ ಆಯಕಟ್ಟಿನ ಪ್ರಮುಖ ಪ್ರದೇಶಗಳಲ್ಲಿ ಗಸ್ತು ತಿರುಗುವುದನ್ನು ಪುನರಾರಂಭಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಕೆಲವು ಚೆಕ್‌ಪೋಸ್ಟ್‌ಗಳು ಭಾರತೀಯ ಪಡೆಗಳಿಗೆ ನಿರ್ಬಂಧಿತವಾಗಿವೆ ಎಂದು ಸೂಚಿಸುವ ವರದಿಗಳನ್ನು ಜೈಸ್ವಾಲ್ ತಳ್ಳಿಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Thu, 7 November 24