Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕುಡಿದು ರಾಂಗ್‌ ಲೊಕೇಶನ್‌ ಕಡೆ ಗಾಡಿ ಓಡಿಸಿಕೊಂಡು ಹೋದ ಚಾಲಕ; ಭಯದಲ್ಲಿ ಚಲಿಸುತ್ತಿದ್ದ ಆಟೋದಿಂದ ಹೊರ ಜಿಗಿದ ಮಹಿಳೆ

ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಿಂದ ಹೊರಗೆ ಜಿಗಿದಂತಹ ಬೆಚ್ಚಿ ಬೀಳಿಸುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ಬುಕ್‌ ಮಾಡಿದ್ದ ಜಾಗದ ಬದಲು ಪಾನಮತ್ತ ಆಟೋ ಚಾಲಕನೊಬ್ಬ ತಪ್ಪಾದ ಜಾಗಕ್ಕೆ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ. ನಿಲ್ಲಿಸಿ ಎಂದು ಎಷ್ಟೇ ಕೇಳಿದ್ರೂ ಆತ ರಾಂಗ್‌ ಲೊಕೇಷನ್‌ ಕಡೆ ಗಾಡಿ ಓಡಿಸಿಕೊಂಡು ಹೋಗಿದ್ದು, ಇದರಿಂದ ಭಯಗೊಂಡ ಆ ಮಹಿಳೆ ಚಲಿಸುತ್ತಿದ್ದ ಆಟೋದಿಂದಲೇ ಹೊರ ಹಾರಿದ್ದಾರೆ.

Viral: ಕುಡಿದು ರಾಂಗ್‌ ಲೊಕೇಶನ್‌ ಕಡೆ ಗಾಡಿ ಓಡಿಸಿಕೊಂಡು ಹೋದ ಚಾಲಕ; ಭಯದಲ್ಲಿ ಚಲಿಸುತ್ತಿದ್ದ ಆಟೋದಿಂದ ಹೊರ ಜಿಗಿದ ಮಹಿಳೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 03, 2025 | 5:32 PM

ಈ ಸಮಾಜದಲ್ಲಿ ಒಂದಲ್ಲಾ ಒಂದು ಬೆಚ್ಚಿ ಬೀಳಿಸುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಪಾನಮತ್ತ ಆಟೋ ಚಾಲಕನ ವರ್ತನೆಯಿಂದ ಭಯಬಿದ್ದ ಮಹಿಳೆಯೊಬ್ಬರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಚಲಿಸುತ್ತಿದ್ದ ಆಟೋದಿಂದಲೇ ಹೊರ ಜಿಗಿದಿದ್ದಾರೆ. ಹೌದು ಆಟೋದಲ್ಲಿದ್ದ ಮಹಿಳೆ ಗಾಡಿ ನಿಲ್ಲಿಸಿ ಎಂದು ಎಷ್ಟೇ ಕೇಳಿದರೂ ಆತ ರಾಂಗ್‌ ಲೊಕೇಷನ್‌ ಕಡೆ ರಿಕ್ಷಾ ಓಡಿಸಿಕೊಂಡು ಹೋಗಿದ್ದು, ಇದರಿಂದ ಭಯಗೊಂಡ ಮಹಿಳೆ ಪ್ರಾಣ ರಕ್ಷಣೆಗಾಗಿ ಚಲಿಸುತ್ತಿದ್ದ ಆಟೋದಿಂದ ಹೊರ ಹಾರಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪಾನಮತ್ತ ಚಾಲಕನ ವರ್ತನೆಯಿಂದ ಭಯಗೊಂಡು ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಿಂದ ಹೊರ ಜಿಗಿದಿದ್ದಾರೆ. ಹೌದು ಆಕೆ ಗಾಡಿ ನಿಲ್ಲಿಸಿ ಎಂದು ಕೇಳಿದರೂ ಚಾಲಕ ರಾಂಗ್‌ ಲೊಕೇಷನ್‌ ಕಡೆಗೆ ಹೋಗಿದ್ದಾನೆ. ಆ ಮಹಿಳೆ ಹೊರಮಾವಿನಿಂದ ಥಣಿಸಂದ್ರಕ್ಕೆ ಹೋಗಲು ನಮ್ಮ ಯಾತ್ರಿ ಆಪ್ಲಿಕೇಷನ್‌ನಲ್ಲಿ ಆಟೋ ಬುಕ್‌ ಮಾಡಿದ್ದರು. ಆದ್ರೆ ಆಟೋ ಚಾಲಕ ಥಣಿಸಂದ್ರದ ಬದಲು ಹೆಬ್ಬಾಳದ ಕಡೆಗೆ ಗಾಡಿ ಓಡಿಸಿಕೊಂಡು ಹೋಗಿದ್ದಾನೆ. ಆಟೋ ನಿಲ್ಲಿಸಿ ಎಂದು ಎಷ್ಟೇ ಕೇಳಿದರೂ ಆತ ಸೀದಾ ಹೋಗಿದ್ದಾನೆ. ಚಾಲಕನ ಈ ವರ್ತನೆಯಿಂದ ಭಯಗೊಂಡು ಮಹಿಳೆ ಆಟೋದಿಂದ ಜಿಗಿದಿದ್ದಾರೆ.

ಇದನ್ನೂ ಓದಿ: ತಪಾಸಣೆಯ ನೆಪದಲ್ಲಿ ಮಹಿಳಾ ರೋಗಿಗಳ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಡಾಕ್ಟರ್‌; ವಿಡಿಯೋ ವೈರಲ್‌

ವೈರಲ್​ ಎಕ್ಸ್​​​​ ಪೋಸ್ಟ್​ ಇಲ್ಲಿದೆ ನೋಡಿ

ಮಹಿಳೆಯ ಪತಿ ಅಜರ್‌ ಖಾನ್‌ (AzharKh35261609) ಈ ಬಗೆಗಿನ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಪತ್ನಿ ಹೊರಮಾವಿನಿಂದ ಥಣಿಸಂದ್ರಕ್ಕೆ ಆಟೋವನ್ನು ಬುಕ್‌ ಮಾಡಿದ್ದಳು. ಆದರೆ ಆಟೋ ಚಾಲಕ ಕುಡಿದು ಹೆಬ್ಬಾಳದ ಕಡೆ ಆಕೆಯನ್ನು ಕರೆದೊಯ್ದಿದ್ದಾನೆ. ಆಟೋ ನಿಲ್ಲಿಸುವಂತೆ ಕೇಳಿಕೊಂಡರೂ ಆತ ಸೀದಾ ಹೋಗಿದ್ದಾನೆ, ಇದರಿಂದ ನನ್ನ ಪತ್ನಿ ಚಲಿಸುತ್ತಿರುವ ಆಟೋದಿಂದ ಜಿಗಿದಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಮ್ಮ ಯಾತ್ರಿ ʼನಿಮ್ಮ ಪತ್ನಿಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯನ್ನು ಕೇಳುತ್ತೇವೆ. ಆ ಚಾಲಕನ ಖಾತೆಯನ್ನು ಅಮಾನತುಗೊಳಿಸುವ ಮೂಲಕ ನಾವು ತಕ್ಷಣದ ಕ್ರಮವನ್ನು ಕೈಗೊಂಡಿದ್ದೇವೆʼ ಎಂದು ಹೇಳಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್