Gold Loan: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಲ್ಲಿ ಶೇ 7.5 ಬಡ್ಡಿ ದರಕ್ಕೆ ಸಿಗುತ್ತಿದೆ ಗೋಲ್ಡ್​ ಲೋನ್

Gold Loan: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಲ್ಲಿ ಶೇ 7.5 ಬಡ್ಡಿ ದರಕ್ಕೆ ಸಿಗುತ್ತಿದೆ ಗೋಲ್ಡ್​ ಲೋನ್
ಸಾಂದರ್ಭಿಕ ಚಿತ್ರ

ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದಿಂದ ಶೇ 7.5ರ ಬಡ್ಡಿ ದರದಲ್ಲಿ ಚಿನ್ನದ ಮೇಲಿನ ಸಾಲವನ್ನು ಒದಗಿಸಲಾಗುತ್ತದೆ. ಅದಕ್ಕೆ YONO ಪ್ಲಾಟ್​ಫಾರ್ಮ್​ ಮೂಲಕ ಅಪ್ಲೈ ಮಾಡಬೇಕು.

TV9kannada Web Team

| Edited By: Srinivas Mata

Aug 05, 2021 | 11:21 PM

ಬ್ಯಾಂಕ್​ನಿಂದ ಸಾಲ ಪಡೆಯುವ ವಿಚಾರಕ್ಕೆ ಬಂದರೆ, ಪರ್ಸನಲ್ ಲೋನ್ ಹೊರತುಪಡಿಸಿ ಚಿನ್ನದ ಮೇಲಿನ ಸಾಲವನ್ನು ಸಹ ಪಡೆಯಬಹುದು. ಒಂದು ವೇಳೆ ನೀವೇನಾದರೂ ಚಿನ್ನವನ್ನು ಅಡಮಾನ ಮಾಡಿ ಸಾಲ ಪಡೆಯಬೇಕು ಎಂದಿದ್ದಲ್ಲಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಂಥ ಬ್ಯಾಂಕ್​ನಿಂದ (State Bank Of India) ಸಹ ಪಡೆಯಬಹುದು. ಬ್ಯಾಂಕ್​ಗಳಿಂದ ಮಾರುವ ಚಿನ್ನದ ನಾಣ್ಯಗಳೂ ಸೇರಿ ಚಿನ್ನಾಭರಣಗಳನ್ನು ಅಡಮಾನ ಮಾಡುವ ಮೂಲಕವಾಗಿ ಎಸ್​ಬಿಐ ಚಿನ್ನದ ಸಾಲವನ್ನು ಪಡೆಯಬಹುದು. ಎಸ್​ಬಿಐ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ಬ್ಯಾಂಕ್​ನ YONO ಪ್ಲಾಟ್​ಫಾರ್ಮ್​ ಬಳಸಿ ಚಿನ್ನದ ಮೇಲೆ ಸಾಲ ಪಡೆಯಬಹುದು. ಇನ್ನು ಅದರಲ್ಲೇ ತಿಳಿಸಿರುವಂತೆ, ಸೆಪ್ಟೆಂಬರ್ 30, 2021ರ ತನಕ ಈ ಹಿಂದಿಗಿಂತ ಶೇ 0.75ರಷ್ಟು ವಿನಾಯಿತಿಯೊಂದಿಗೆ ಶೇ 7.5ರ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಪಡೆಯಬಹುದು.

YONO ಪ್ಲಾಟ್​ಫಾರ್ಮ್​ ಬಳಸಿ ಚಿನ್ನದ ಸಾಲವನ್ನು ಪಡೆಯುವುದು ಹೇಗೆ ಎಂಬುದರ ಹಂತ ಹಂತವಾದ ವಿವರಣೆ ಇಲ್ಲಿದೆ: 1. YONO ಖಾತೆಗೆ ಲಾಗ್ ಇನ್ ಆಗಬೇಕು. 2. ಹೋಮ್​ ಪೇಜ್​ಗೆ ತೆರಳಿ, ಅಲ್ಲಿ ಮೇಲೆ ಎಡಭಾಗದಲ್ಲಿರುವ ಮೆನು (ಮೂರು ಲೈನ್​ಗಳು) ಮೇಲೆ ಕ್ಲಿಕ್ ಮಾಡಬೇಕು. 3. Loans ಎಂಬುದರ ಮೇಲೆ ಕ್ಲಿಕ್ ಮಾಡಬೇಕು. 4. Gold Loan ಎಂಬುದರ ಮೇಲೆ ಕ್ಲಿಕ್ ಮಾಡಬೇಕು. 5. Apply Now ಮೇಲೆ ಕ್ಲಿಕ್ ಮಾಡಬೇಕು. 6. ಆಭರಣದ ಮಾಹಿತಿಯನ್ನು ಭರ್ತಿ ಮಾಡಬೇಕು (ಬಗೆ, ಎಷ್ಟಿದೆ, ಕ್ಯಾರೆಟ್, ನಿವ್ವಳ ತೂಕ). ಇವುಗಳ ಜತೆಗೆ ಸ್ವಂತ ಮನೆಯೋ ಅಥವಾ ಬಾಡಿಗೆ ಮನೆಯೋ, ನಿವ್ವಳ ತಿಂಗಳ ಆದಾಯ ಇವೆಲ್ಲದರ ಜತೆಗೆ ಅರ್ಜಿಯನ್ನು ಸಲ್ಲಿಸಬೇಕು.

ಎಸ್​ಬಿಐ ಶಾಖೆಗೆ ಭೇಟಿ ನೀಡಿ, ಅಲ್ಲಿಯೇ ಚಿನ್ನವನ್ನು ಅಡಮಾನ ಮಾಡಿಯೂ ಸಾಲ ಪಡೆಯಬಹುದು. ಅಡಮಾನ ಮಾಡಬೇಕಾದ ಚಿನ್ನದ ಸಮೇತ ತೆರಳಬೇಕು. ಅದರ ಜತೆಗೆ 2 ಫೋಟೋ ಮತ್ತು ಕೆವೈಸಿ ದಾಖಲಾತಿಗಳು ತೆಗೆದುಕೊಂಡು ಹೋಗಬೇಕು. ದಾಖಲೆಗಳಿಗೆ ಸಹಿ ಮಾಡಿ, ಸಾಲ ಪಡೆಯಬಹುದು. 18 ವರ್ಷ ಮೇಲ್ಪಟ್ಟು, ಸ್ಥಿರವಾದ ಆದಾಯ ಇರುವವರು ಚಿನ್ನದ ಮೇಲೆ ಸಾಲವನ್ನು ಪಡೆಯಬಹುದು. ಪಿಂಚಣಿದಾರರಿಗೆ ಯಾವುದೇ ಆದಾಯ ಮೂಲದ ದಾಖಲಾತಿ ಅಗತ್ಯ ಇಲ್ಲ. ಸಾಲ ಪಡೆದುಕೊಳ್ಳುವಾಗ ಚಿನ್ನದ ಸಾಲಕ್ಕೆ ಅರ್ಜಿ ಹಾಗೂ ಎರಡು ಭಾವಚಿತ್ರ ಬೇಕಾಗುತ್ತದೆ. ವಿಳಾಸ ಹಾಗೂ ಗುರುತು ದೃಢೀಕರಣ ಬೇಕಾಗುತ್ತದೆ.

ಈ ಅಂಶಗಳು ಗಮನದಲ್ಲಿರಲಿ: – ಕನಿಷ್ಠ 20 ಸಾವಿರ ರೂಪಾಯಿ ಹಾಗೂ ಗರಿಷ್ಠ 50 ಲಕ್ಷ ರೂಪಾಯಿ ಸಾಲದ ಮೊತ್ತ. – ಮಾರ್ಜಿನ್: ಶೇ 25 (ಬುಲೆಟ್ ರೀಪೇಮೆಂಟ್ ಗೋಲ್ಡ್​ ಲೋನ್​ನಲ್ಲಿ ಶೇ 35) – ಸಾಲ ಮರುಪಾವತಿ: 36 ತಿಂಗಳು (ಬುಲೆಟ್ ರೀಪೇಮೆಂಟ್ ಗೋಲ್ಡ್​ ಲೋನ್​ನಲ್ಲಿ 12 ತಿಂಗಳು) – ಅವಧಿಪೂರ್ವವಾಗಿ ತೀರಿಸಿದರೆ ಶುಲ್ಕ: ಅವಧಿಪೂರ್ವ ಪಾವತಿ ಶುಲ್ಕ ಬ್ಯಾಂಕ್ ಮನ್ನಾ ಮಾಡಿದೆ ಹಾಗೂ ಪೂರ್ವ ಪಾವತಿಗೂ ಗ್ರಾಹಕರಿಗೆ ಯಾವುದೇ ಶುಲ್ಕ ಇಲ್ಲ.

ಇದನ್ನೂ ಓದಿ: SBI Home Loan: ಎಸ್​ಬಿಐ ಗೃಹ ಸಾಲಕ್ಕೆ ಆಗಸ್ಟ್​ 31ರ ತನಕ ಪ್ರೊಸೆಸಿಂಗ್ ಶುಲ್ಕ ಮನ್ನಾ ವಿಸ್ತರಣೆ

ಇದನ್ನೂ ಓದಿ: SBI MOD: ಯಾವುದೇ ದಂಡ ಶುಲ್ಕ ಇಲ್ಲದೆ ಎಸ್​ಬಿಐ ಈ ಟರ್ಮ್​ ಡೆಪಾಸಿಟ್​ನಿಂದ ಹಣ ತೆಗೆಯುವುದು ಹೇಗೆ ಗೊತ್ತಾ?

(State Bank Of India Offering Gold Loan At 7.5 Percent Through Yono Platform)

Follow us on

Related Stories

Most Read Stories

Click on your DTH Provider to Add TV9 Kannada