ದೀಪಿಕಾಗೆ ರಣವೀರ್ ಸಿಂಗ್ ಕನ್ನಡದಲ್ಲಿ ಪ್ರಪೋಸ್ ಮಾಡಿದ ವಿಡಿಯೋ ನೋಡಿದ್ರಾ?
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಪ್ರೇಮಕಥೆ, ವಿವಾಹ ಮತ್ತು ಮಗುವಿನ ಬಗ್ಗೆ ಈ ಸ್ಟೋರಿಯಲ್ಲಿ ಚರ್ಚೆ ಆಗುತ್ತಿದೆ. ರಣವೀರ್ ಅವರು ದೀಪಿಕಾಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ಅವರ ಪ್ರೀತಿಯ ಆರಂಭ, ಮದುವೆ ಮತ್ತು ಈಗ ಮಗುವಿನ ಜನ್ಮದ ಸಂತೋಷದ ಕುರಿತು ವಿವರಗಳಿವೆ. ದೀಪಿಕಾ ಅವರ ಜನ್ಮದಿನದ ಸಂದರ್ಭದಲ್ಲಿ ಈ ವಿಡಿಯೋಗಳು ಮತ್ತೆ ವೈರಲ್ ಆಗಿವೆ.
ದೀಪಿಕಾ ಹಾಗೂ ರಣವೀರ್ ಪ್ರೀತಿಸಿ ವಿವಾಹ ಆದವರು. ಒಂದೇ ಸಿನಿಮಾದಲ್ಲಿ ನಟಿಸಿದ ಇವರಿಗೆ ಸೆಟ್ನಲ್ಲೇ ಪ್ರೀತಿ ಮೂಡಿತು. ರಣವೀರ್ ಸಿಂಗ್ ಹಾಗೂ ದೀಪಿಕಾ ಈಗ ಪಾಲಕರೂ ಹೌದು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಹಾಗೂ ದೀಪಿಕಾ ಪ್ರೀತಿ ಶುರುವಾಗಿದ್ದು ದಶಕಗಳ ಹಿಂದೆ. ಈಗ ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ವೇಳೆ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.
ದೀಪಿಕಾ ಪಡುಕೋಣೆ ಅವರು ಕರ್ನಾಟಕದವರು. ಅವರಿಗೆ ಕನ್ನಡ ಬರುತ್ತದೆ. ಬೆಂಗಳೂರಲ್ಲಿ ದೀಪಿಕಾ ಶಿಕ್ಷಣ ಪಡೆದಿದ್ದರು. ಅವರು ನಟಿಸಿದ ಮೊದಲ ಸಿನಿಮಾ ‘ಐಶ್ವರ್ಯಾ’ ಕನ್ನಡದ್ದು. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ರಣವೀರ್ ಸಿಂಗ್ ಅವರದ್ದು ಪಂಜಾಬಿ ಕುಟುಂಬ. ಅವರು ಕೆಲವೊಮ್ಮೆ ಬೆಂಗಳೂರಿಗೆ ಬಂದ ಉದಾಹರಣೆ ಇದೆ. ಅವರಿಗೆ ಕನ್ನಡದ ಬರುವುದಿಲ್ಲ. ಅವರು ಈ ಮೊದಲು ಕನ್ನಡದಲ್ಲಿ ದೀಪಿಕಾಗೆ ಪ್ರಪೋಸ್ ಮಾಡಿದ್ದರು ಅನ್ನೋದು ವಿಶೇಷ. ಆ ಸಂದರ್ಭದ ವಿಡಿಯೋ ಬರ್ತ್ಡೇ ಸಮಯದಲ್ಲಿ ವೈರಲ್ ಮಾಡಲಾಗಿದೆ.
ರಣವೀರ್ ಸಿಂಗ್ ಅವರು ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಾ ಇರುತ್ತಾರೆ. ಅದೇ ರೀತಿ ಅವರು ಅವಾರ್ಡ್ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಯಶ್ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಅವರ ಜೊತೆ ಇದ್ದಿದ್ದು, ಕನ್ನಡದ ಅಕುಲ್ ಬಾಲಾಜಿ. ಅವರು ಕನ್ನಡದ ಹಲವು ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಆ ಶೋನ ಅಕುಲ್ ನಡೆಸಿಕೊಡುತ್ತಾ ಇದ್ದರು. ಈ ವೇಳೆ ರಣವೀರ್ ಸಿಂಗ್ಗೆ ಕನ್ನಡದಲ್ಲಿ ಪ್ರಪೋಸ್ ಮಾಡೋದನ್ನು ಹೇಗೆ ಎಂದು ಹೇಳಿಕೊಟ್ಟರು ಅಕುಲ್.
View this post on Instagram
‘ದೀಪಿಕಾ, ಓ ನನ್ನ ದೀಪಿಕಾ’ ಎಂದರು ಅಕುಲ್. ರಣವೀರ್ ಸಿಂಗ್ಗೆ ತಪ್ಪಾಗಿ ಏನಾದರೂ ಹೇಳಿಕೊಟ್ಟರೆ ಎಂಬ ಭಯ ಅತಿಯಾಗಿ ಕಾಡಿತ್ತು. ಈ ಕಾರಣದಿಂದಲೇ ‘ನನಗೆ ಮನೆಗೆ ಹೋಗಬೇಕು, ನಾನು ಇದನ್ನು’ ಎಂದರು ರಣವೀರ್ ಸಿಂಗ್. ಆಗ, ಅಕುಲ್ ಅವರು ತಪ್ಪಾಗಿ ಏನನ್ನೂ ಹೇಳಿಕೊಡಲ್ಲ ಎಂದು ಪ್ರಾಮಿಸ್ ಮಾಡಿದರು. ಆ ಬಳಿಕ ‘ದೀಪಿಕಾ, ಓ ನನ್ನ ದೀಪಿಕಾ, ನೀನೆ ನನ್ನ ಜೀವನದ ದೀಪ’ ಎಂದು ಅಕುಲ್ ಹೇಳಿಕೊಟ್ಟರು. ದೀಪ ಎನ್ನುತ್ತಿದ್ದಂತೆ ‘ಯು ಆರ್ ದಿ ಲೈಟ್ ಆಫ್ ಮೈ ಲೈಫ್’ ಎಂದರು ರಣವೀರ್. ಇದು ಸಖತ್ ಫನ್ ಆಗಿತ್ತು.
ಇದನ್ನೂ ಓದಿ: ಮಗಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 2018ರಲ್ಲಿ ಮದುವೆ ಆದರು. ಈಗ ಅವರು ಆರು ವರ್ಷಗಳ ಬಳಿಕ ತಂದೆ ಆಗಿದ್ದಾರೆ. ದೀಪಿಕಾ ಪಡುಕೋಣೆ ಮಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ದೀಪಿಕಾ ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಈ ಮೊದಲು ಇವರು ವಿಚ್ಛೇದನ ಪಡೆಯುತ್ತಾರೆ ಎಂದೆಲ್ಲ ಸುದ್ದಿ ಆಗಿತ್ತು. ಆದರೆ, ಯಾವುದೂ ನಿಜ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.