ಐಶ್ವರ್ಯಾ-ಆರಾಧ್ಯಾಗೆ ಅಭಿಷೇಕ್ ಭದ್ರತೆ; ಪತ್ನಿ-ಮಗಳ ಮೇಲಿನ ಪ್ರೀತಿಗೆ ಇದುವೇ ಸಾಕ್ಷಿ
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳಿಗೆ ಇತ್ತೀಚಿನ ವಿಮಾನ ನಿಲ್ದಾಣದ ವಿಡಿಯೋ ತೆರೆ ಎಳೆದಿದೆ. ವಿಡಿಯೋದಲ್ಲಿ, ಅಭಿಷೇಕ್ ಐಶ್ವರ್ಯಾ ಮತ್ತು ಆರಾಧ್ಯಾ ಅವರನ್ನು ಕಾಳಜಿಯಿಂದ ಕಾರಿಗೆ ಹತ್ತಿಸುವುದನ್ನು ಕಾಣಬಹುದು. ಈ ವೈರಲ್ ವಿಡಿಯೋ ಅಭಿಮಾನಿಗಳಲ್ಲಿ ಸಂತೋಷ ತಂದಿದೆ ಮತ್ತು ದಂಪತಿಗಳ ಬಗ್ಗೆ ಹರಡುತ್ತಿದ್ದ ವದಂತಿಗಳಿಗೆ ಅಂತ್ಯ ಹಾಡಿದೆ.
ಐಶ್ವರ್ಯಾ ರೈ-ಆರಾಧ್ಯಾ ಬೇರೆ ಕಡೆ ವಾಸಿಸುತ್ತಿದ್ದು, ಅಭಿಷೇಕ್ ಅವರಿಂದ ದೂರವೇ ಇದ್ದಾರೆ ಎಂದೆಲ್ಲ ಸಾಕಷ್ಟು ವದಂತಿಗಳು ಹಬ್ಬಿದ್ದವು. ಆದರೆ, ಈ ವದಂತಿಗಳಿಗೆ ಇತ್ತೀಚೆಗೆ ತೆರೆ ಬಿದ್ದಿದೆ. ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಈಗ ಐಶ್ವರ್ಯಾ ಹಾಗೂ ಆರಾಧ್ಯಾ ಒಟ್ಟಾಗಿ ಬರುವಾಗ ಅಭಿಷೇಕ್ ಭದ್ರತೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ಐಶ್ವರ್ಯಾ ಹಾಗೂ ಅಭಿಷೇಕ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ದೊಡ್ಡ ಸೆಲೆಬ್ರಿಟಿಗಳು ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡುವ ಕೆಲಸ ಮಾಡುವುದಿಲ್ಲ. ಆದಾಗ್ಯೂ ಅಭಿಷೇಕ್ ಹಾಗೂ ಅಮಿತಾಭ್ ಅವರು ಡಿವೋರ್ಸ್ ವದಂತಿ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದರು. ಎಲ್ಲವೂ ಸರಿ ಇದೆ ಎಂದು ಹೇಳಿದ್ದರು. ಈಗ ಇವರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ವಿಚಾರ ಫ್ಯಾನ್ಸ್ಗಳಿಗೆ ಖುಷಿ ನೀಡಿದೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ.
ಐಶ್ವರ್ಯಾ, ಆರಾಧ್ಯಾ ಹಾಗೂ ಅಭಿಷೇಕ್ ಹೊಸ ವರ್ಷದ ಸಂದರ್ಭದಲ್ಲಿ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ. ಈಗ ಅವರು ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಾರೆ. ಅಭಿಷೇಕ್ ಹಾಗೂ ಐಶ್ವರ್ಯಾ ಎದುರು ಅಭಿಷೇಕ್ ನಡೆದು ಬಂದಿದ್ದಾರೆ. ಪತ್ನಿ ಹಾಗೂ ಮಗಳ ಕಾಳಜಿಯ ಜವಾಬ್ದಾರಿಯನ್ನು ಅವರೇ ತೆಗೆದುಕೊಂಡಿದ್ದರು. ಇನ್ನು, ಕಾರ್ನ ಡೋರ್ ಕೂಡ ಅವರೇ ತೆಗೆದು ಪತ್ನಿ ಹಾಗೂ ಮಗಳು ಕಾರು ಏರುವವರೆಗೆ ಬಾಗಿಲಲ್ಲಿ ಹಾಗೆಯೇ ನಿಂತಿದ್ದರು.
View this post on Instagram
ಐಶ್ವರ್ಯಾ ಹಾಗೂ ಆರಾಧ್ಯಾ ಕಾರು ಏರಿದ ಬಳಿಕ ಅಭಿಷೇಕ್ ಕೂಡ ಅದೇ ಕಾರು ಏರಿ ಸಾಗಿದ್ದಾರೆ ಎನ್ನಲಾಗಿದೆ. ಸದ್ಯ, ಈ ವಿಡಿಯೋನ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ‘ಈ ದಂಪತಿ ಮೇಲೆ ಯಾರ ಕಣ್ಣೂ ಬೀಳದಿರಲಿ’ ಎಂದು ಕೆಲವರು ಕೋರಿದ್ದಾರೆ. ಇನ್ನೂ ಕೆಲವರು, ಆರಾಧ್ಯಾ ಮುಂದಿನ ವರ್ಷಗಳಲ್ಲಿ ಒಳ್ಳೆಯ ಹೀರೋಯಿನ್ ಆಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಬಚ್ಚನ್ಗೆ ಎರಡನೇ ಮಗು ಮಾಡಿಕೊಳ್ಳೋ ಆಸೆ? ನಾಚಿದ ನಟ
ಐಶ್ವರ್ಯಾ ಇತ್ತೀಚೆಗೆ ಸಿನಿಮಾಗಳನ್ನು ಮಾಡುತ್ತಿಲ್ಲ. ಅಭಿಷೇಕ್ ಅವರು ಸಿನಿಮಾಗಳ ಆಯ್ಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಮಾಡಿದ ಸಿನಿಮಾಗಳು ಯಾವವೂ ಕೈ ಹಿಡಿಯುತ್ತಿಲ್ಲ. ಇದು ಅವರ ಬೇಸರಕ್ಕೆ ಕಾರಣ ಆಗಿದೆ. ಆದಾಗ್ಯೂ ಅವರು ಸಿನಿಮಾ ಕೃಷಿ ನಿಲ್ಲಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:50 am, Sat, 4 January 25