Deepika Pdukone: 39 ವರ್ಷದ ದೀಪಿಕಾ ಪಡುಕೋಣೆ ಮಾಡಿರೋ ಆಸ್ತಿ ಇಷ್ಟೊಂದಾ?

ದೀಪಿಕಾ ಪಡುಕೋಣೆ ಅವರ ಜನ್ಮದಿನದಂದು, ಅವರ 500 ಕೋಟಿ ರೂಪಾಯಿಗೂ ಅಧಿಕ ಆಸ್ತಿ, ಐಷಾರಾಮಿ ಜೀವನಶೈಲಿ ಮತ್ತು ಚಲನಚಿತ್ರದ ಬಗ್ಗೆ ಈ ಸ್ಟೋರಿಯಲ್ಲಿ ವಿವರಿಸಲಾಗಿದೆ. ಬಾಲಿವುಡ್‌ನಲ್ಲಿ ಅವರ ಯಶಸ್ವಿ ಚಲನಚಿತ್ರಗಳು, ಬ್ರ್ಯಾಂಡ್ ಅನುಮೋದನೆಗಳು ಮತ್ತು ಹೂಡಿಕೆಗಳಿಂದ ಅವರ ಆಸ್ತಿ ಹೇಗೆ ಬೆಳೆದಿದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

Deepika Pdukone: 39 ವರ್ಷದ ದೀಪಿಕಾ ಪಡುಕೋಣೆ ಮಾಡಿರೋ ಆಸ್ತಿ ಇಷ್ಟೊಂದಾ?
ದೀಪಿಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 05, 2025 | 6:30 AM

ನಟಿ ದೀಪಿಕಾ ಪಡುಕೋಣೆ ಅವರಿಗೆ ಇಂದು (ಜನವರಿ 5) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಈ ಬಾರಿ ಅವರಿಗೆ ಬರ್ತ್​​ಡೇ ಮತ್ತಷ್ಟು ವಿಶೇಷವಾಗಿದೆ. ಅವರಿಗೆ ಮಗು ಜನಿಸಿದ್ದು, ಮಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರ ‘ಐಶ್ವರ್ಯಾ’ (2006) ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು, ಈಗ ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಬಾಲಿವುಡ್​​ನಲ್ಲಿ ಬೇಡಿಕೆ ಹೊಂದಿದ್ದಾರೆ. ಅವರು ನಟಿಸಿದ ಹಿಂದಿಯ ಮೊದಲ ಸಿನಿಮಾ ‘ಓಂ ಶಾಂತಿ ಓಂ’. ಆ ಬಳಿಕ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದರು. ‘ಕಾಕ್​ಟೇಲ್’, ‘ಯೇ ಜವಾನಿ ಹೇ ದಿವಾನಿ’, ‘ಚೆನ್ನೈ ಎಕ್ಸ್​ಪ್ರೆಸ್’, ‘ಹ್ಯಾಪಿ ನ್ಯೂ ಇಯರ್’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’, ‘ಪಠಾಣ್’, ‘ಕಲ್ಕಿ 2898 ಎಡಿ’ ಹೀಗೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ದೀಪಿಕಾ ಪಡುಕೋಣೆ ಅವರ ಆಸ್ತಿ 500 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ಅವರು ಪ್ರತಿ ಚಿತ್ರಕ್ಕೆ 15-30 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು 2016ರ ಸಂದರ್ಭದಲ್ಲಿ 10 ಕೋಟಿ ರೂಪಾಯಿ ಪಡೆಯುತ್ತಿದ್ದರು.

ದೀಪಿಕಾ ಪಡುಕೋಣೆ ಅವರಿಗೆ ಬ್ರ್ಯಾಂಡ್​ಗಳ ಪ್ರಚಾರದಿಂದ ಹಣ ಬರುತ್ತದೆ. ಇದಕ್ಕಾಗಿ ಅವರು 8 ಕೋಟಿ ರೂಪಾಯಿ ಪಡೆಯುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಅವರ ಆಸ್ತಿ ಶೇ.30 ಏರಿಕೆ ಆಗಿದೆ. 2022ರಲ್ಲಿ ದೀಪಿಕಾ ಪಡುಕೋಣೆ ಆಸ್ತಿ 357 ಕೋಟಿ ರೂಪಾಯಿ ಇತ್ತು. ಈಗ ಅದು 500 ಕೋಟಿ ರೂಪಾಯಿ ದಾಟಿದೆ.

2013ರಲ್ಲಿ ದೀಪಿಕಾ ಪಡುಕೋಣೆ ಅವರು ಲಕ್ಷುರಿ ಮನೆ ಖರೀದಿ ಮಾಡಿದ್ದರು. ಇದಕ್ಕೆ 16 ಕೋಟಿ ರೂಪಾಯಿ ನೀಡಿದ್ದರು. ಬಾಂದ್ರಾದಲ್ಲಿ 119 ಕೋಟಿ ರೂಪಾಯಿಯ ಮನೆ ಹೊಂದಿದ್ದಾರೆ. ಇದು 5 ಬೆಡ್​ ರೂಂ ಮನೆ ಆಗಿದ್ದು, ಶಾರುಖ್ ಖಾನ್ ಮನೆ ಸಮೀಪವೇ ಇದೆ. ಇದಲ್ಲದೆ ಹಲವು ಕಡೆಗಳಲ್ಲಿ  ಹೂಡಿಕೆ ಮಾಡಿದ್ದಾರೆ. ದೀಪಿಕಾ ಬಳಿ ರೇಂಜ್ ರೋವರ್, ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯೂ ರೀತಿಯ ಕಾರುಗಳು ಇವೆ. ಅವರ ಬಳಿ ಯಾವುದೇ ರೇಸ್ ಕಾರುಗಳು ಇಲ್ಲ. ಅವರಿಗೆ ಆ ರೀತಿಯ ಯಾವುದೇ ಆಸೆ ಇಲ್ಲ.

ದೀಪಿಕಾ ಪಡುಕೋಣೆ ಅವರು ಹಲವು ಸ್ಟಾರ್ಟ್​​ಅಪ್​ಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಸಾಕಷ್ಟು ಹಣ ಬರುತ್ತಿದೆ. ಒಂದು ವರದಿಯ ಪ್ರಕಾರ ದೀಪಿಕಾ ಅವರು ಸುಮಾರು 35 ಕೋಟಿ ರೂಪಾಯಿ ಹೂಡಿಕೆಯನ್ನೇ ಮಾಡಿದ್ದಾರಂತೆ. ದೀಪಿಕಾ ಪಡುಕೋಣೆ ಬಳಿ ದುಬಾರಿ ಪರ್ಸ್​, ಚೈನ್​ಗಳು ಕೂಡ ಇವೆ.

ಇದನ್ನೂ ಓದಿ: ಮಗಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

ರಣವೀರ್​ಗಿಂತ ದೀಪಿಆ ಹೆಚ್ಚು ಶ್ರೀಮಂತೆ. ಇಬ್ಬರ ಆಸ್ತಿ ಸೇರಿದರೆ 745 ಕೋಟಿ ರೂಪಾಯಿ ಆಗಲಿದೆ. ಇದರಲ್ಲಿ ದೀಪಿಕಾ ಅವರದ್ದು 500 ಕೋಟಿ ರೂಪಾಯಿ ಹಾಗೂ ರಣವೀರ್ ಅವರದ್ದು 245 ಕೋಟಿ ರೂಪಾಯಿ. ದೀಪಿಕಾಗೆ ಮಗು ಹುಟ್ಟಿರುವುದರಿಂದ ಬ್ರೇಕ್​ನಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ